ತುಮಕೂರು:ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಯಾರು? ಎಂಬ ಕುತೂಹಲ ಮೂಡಿದೆ. ಕಾಂಗ್ರೆಸ್​ನ ಯಾವುದೇ ಸಭೆ-ಸಮಾವೇಶದಲ್ಲೂ ‘ನೆಕ್ಸ್ಟ್​ ಸಿಎಂ ಸಿದ್ದರಾಮಯ್ಯ’, ‘ಮುಂದಿನ ಸಿಎಂ ಡಿಕೆಶಿ’ ಎಂಬ ಘೋಷಣೆಗಳು ಜಿದ್ದಾಜಿದ್ದಿಗೆ ಬಿದ್ದಂತೆ ಮೊಳಗುತ್ತಲೇ ಇದೆ. ರಾಜ್ಯ ಕಾಂಗ್ರೆಸ್​ ಇಬ್ಭಾಗವಾಗಿದೆ, ಸಿದ್ದು-ಡಿಕೆಶಿ ಬಣ ರಾಜಕೀಯವೇ ಕಾಂಗ್ರೆಸ್​ ವಿನಾಶಕ್ಕೆ ಕಾರಣ ಎಂದು ಬಿಜೆಪಿ ಟೀಕಿಸುತ್ತಿದ್ದೆ. ಇದೀಗ ‘ಕರ್ನಾಟಕದಲ್ಲಿ ಕಾಂಗ್ರೆಸ್​ನ ಮುಂದಿನ ಸಿಎಂ ಅಭ್ಯರ್ಥಿ ಯಾರು?’ ಎಂಬ ಗೊಂದಲ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ತೆರೆ ಎಳೆದಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಭಾರತ್​ ಜೋಡೋ ಪಾದಯಾತ್ರೆ ನಡೆಸುತ್ತಿರುವ ರಾಹುಲ್​ ಗಾಂಧಿ ಶನಿವಾರ ಸುದ್ದಿಗೋಷ್ಠಿ ನಡೆಸಿದರು. ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಯಾರು? ಎಂದು ಪ್ರರ್ತಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್​, ಚುನಾವಣೆ ನಂತರವೇ ಸಿಎಂ ಯಾರೆಂದು ನಿರ್ಧರಿಸಲಾಗುತ್ತೆ. ಸದ್ಯಕ್ಕೆ ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಘೋಷಣೆ ಇಲ್ಲ ಎಂದು ಡಿಕೆಶಿ ಮತ್ತು ಸಿದ್ದು ಎದುರೇ ಸ್ಪಷ್ಟಪಡಿಸಿದರು. ಆ ಮೂಲಕ “ಮುಂದಿನ ಸಿಎಂ’ ಯಾರೆಂಬ ವಿವಾದಕ್ಕೆ ತೆರೆ ಎಳೆದರು.
ದೇವೇಗೌಡ ನಮ್ಮ ನಾಯಕ, ಅವರ ಬಗ್ಗೆ ಲಘುವಾಗಿ ಮಾತಾಡಲ್ಲ: ಮಾಜಿ ಸಚಿವ ಚಲುವರಾಯಸ್ವಾಮಿ

ನಮಗೂ ರಾಜಕೀಯ ಮಾಡೋಕೆ ಬರುತ್ತೆ… ಇಡಿ ಕಚೇರಿಯಿಂದ ಹೊರ ಬರುತ್ತಿದ್ದಂತೆ ಸಿಡಿದೆದ್ದ ಡಿಕೆಶಿ

ರಿಲ್ಯಾಕ್ಸ್​ ಮೂಡ್​ಗೆ ಜಾರಿದ ಗಜಪಡೆ: ಮೈಸೂರು ಅರಮನೆ ಅಂಗಳದಲ್ಲಿ ಆನೆಗಳ ಮಜ್ಜನ ನೋಡಿ ಸಂಭ್ರಮಿಸಿದ ಚಿಣ್ಣರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 5 =
Remember me
