ರಾಯಚೂರು:ನಗರದಲ್ಲಿ ಕಲುಷಿತ ನೀರಿಗೆ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ. ನಗರಸಭೆ ಸರಬರಾಜು ಮಾಡಿದ್ದ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ.
ಜೂ.7ರಂದು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ರಾಯಚೂರು ನಗರದ ಮಂಗಳವಾರಪೇಟೆ ವಾರ್ಡಿನ ನಯೀಮುದ್ದೀನ್(55) ಮಂಗಳವಾರ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ನಿರ್ಜಲೀಕರಣಕ್ಕೆ ತುತ್ತಾಗಿದ್ದ ನಯೀಮುದ್ದೀನ್​ಗೆ ಸೈಡ್ ಎಫೆಕ್ಟ್ ಆಗಿತ್ತು. ಕಿಡ್ನಿ ಸಮಸ್ಯೆ ಉಂಟಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ರಾಂಪುರ ಜಲಾಶಯದಿಂದ ನಗರದ 14 ವಾರ್ಡ್​ಗಳಿಗೆ ನೀರನ್ನು ಶುದ್ಧೀಕರಿಸದೆ ಪೂರೈಕೆ ಮಾಡಿದ್ದು, ಈ ನೀರು ಕುಡಿದ ಹಲವರ ಆರೋಗ್ಯ ಹದಗೆಟ್ಟಿದೆ. ಮೇ 31ರಂದು ಈ ನೀರನ್ನು ಕುಡಿದ ನೂರಾರು ಮಂದಿ ಅಸ್ವಸ್ಥಗೊಂಡಿದ್ದರು. ಅಂದು ಇಂದಿರಾ ನಗರದ ಮಲ್ಲಮ್ಮ(40) ವಾಂತಿಯಿಂದ ಮೃತಪಟ್ಟಿದ್ದಳು. ಮಲ್ಲಮ್ಮ ಮೃತಪಟ್ಟ ಮೂರು ದಿನಕ್ಕೆ 7 ವಾರ್ಡ್​ನ ಅಬ್ದುಲ್ ಗಫೂರ್(37), ಅರಬ್ ಮೊಹಲ್ಲಾದ ಮಹ್ಮದ ನೂರ್(43), ಜೂ.8ರಂದು ಅಂದ್ರೂನ್ ಕಿಲ್ಲಾ ಅಬ್ದುಲ್ ಕರೀಂ ಕೊನೆಯುಸಿರೆಳೆದಿದ್ದರು. ಜೂ.10ರಂದು 13ನೇ ವಾರ್ಡ್​ನ ಯರಗೆರಾ ಕಾಲನಿ ನಿವಾಸಿ ಜನಕರಾಜ್(48) ಮೃತಪಟ್ಟಿದ್ದರು. ಇದೀಗ ನಯೀಮುದ್ದೀನ್​ ಕೂಡ ಕಲುಷಿತ ನೀರಿಗೆ ಬಲಿಯಾಗಿದ್ದಾರೆ.
ಮೇಲುಕೋಟೆ ಬಾಹುಬಲಿ ಖ್ಯಾತಿಯ ರಾಮಸ್ವಾಮಿ ಅಯ್ಯಂಗಾರ್ ಇನ್ನಿಲ್ಲ

ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ! ನೋವಲ್ಲೇ 430km ದೂರದಿಂದ ಬಂದವ ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + seven =
Remember me
