ಬೆಳಗಾವಿ:ಗುತ್ತಿಗೆದಾರ ಸಂತೋಷ್​ ಪಾಟೀಲ್​ ಅಂತ್ಯಕ್ರಿಯೆ ವೇಳೆ ಗಲಾಟೆ ನಡೆದಿದ್ದು, ಭಾರೀ ಗದ್ದಲದ ನಡುವೆಯೇ ಅಂತ್ಯಕ್ರಿಯೆ ನೆರವೇರಿದೆ.
ಸಂತೋಷ್​ ಪಾಟೀಲ್​ರ ಸ್ವಂತ ಜಮೀನಿನಲ್ಲೇ ಅವರ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ಮೃತದೇಹ ತಂದಿದ್ದರು. ಈ ವೇಳೆ ಮೃತನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸುತ್ತಾ ಕಾಂಗ್ರೆಸ್​ ನಾಯಕರು ಸಂತೋಷ್​ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದರು. ಪರಿಹಾರ ಘೋಷಣೆ ಮಾಡೊವರೆಗೂ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್​ಸಿ ಚೆನ್ನರಾಜ್ ಹಟ್ಟಿಹೊಳಿ, ಕಾಂಗ್ರೆಸ್ ಮುಖಂಡ ಅಡಿವೇಶ ಇಟಗಿ ಹಾಗೂ ಮೃತನ ಕುಟುಂಬಸ್ಥರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಇದಕ್ಕೆ ಆಕ್ಷೇಪಿಸಿದ ಸಂತೋಷ್​ ಮಾವ, ಸಾವಿನ ಮನೆಯಲ್ಲಿ ರಾಜಕೀಯ ಮಾಡಬೇಡಿ. ಸಂತೋಷ್​ ಚಿಕ್ಕವನಿರುವಾಗ ನಾವು ಬೆಳೆಸಿದ್ದೇವೆ. ಮೊದಲು ಅಂತ್ಯಕ್ರಿಯೆ ಮಾಡೋಣ. ನಂತರ ಹೋರಾಟ ಮಾಡೋಣ ಎಂದರು.
ಒತ್ತಾಯ ಪೂರ್ವಕವಾಗಿ ಜೆಸಿಬಿಯಿಂದ ಮಣ್ಣು ಹಾಕಲು ಯತ್ನಿಸಿದಾಗ ಕಾಂಗ್ರೆಸ್​ ಮುಖಂಡ ಅಡಿವೇಶ ಇಟಗಿ ಅಡ್ಡಿಪಡಿಸಲು ಮುಂದಾದರು. ಅಡಿವೇಶ ಇಟಗಿ ಅವರನ್ನು ಸ್ಥಳೀಯರು ಒತ್ತಾಯ ಪೂರ್ವಕವಾಗಿ ಆ ಕಡೆ ಎಳೆದೊಯ್ದರು. ಕೊನೆಗೂ ಜೆಸಿಬಿ ಮುಖಾಂತರ ಪಾರ್ಥೀವ ಶರೀರದ ಮೇಲೆ ಮಣ್ಣು ಹಾಕಿ ಅಂತ್ಯಕ್ರಿಯೆ ಮಾಡಲಾಯಿತು.
ಸಂತೋಷ್​ ಆತ್ಮಹತ್ಯೆ: 2 ಕೋಟಿ ರೂ. ಪರಿಹಾರಕ್ಕೆ ರಾಜ್ಯ ಗುತ್ತಿಗೆದಾರರ ಸಂಘ ಡಿಮಾಂಡ್​

ಕೆಲವೇ ಕ್ಷಣದಲ್ಲಿ ಎಲ್ಲರೂ ಮನೆ ಸೇರಬೇಕಿತ್ತು… ಅಷ್ಟರಲ್ಲಿ ನಡೀತು ಘೋರ ದುರಂತ, ಸ್ಥಳದಲ್ಲೇ ಮೂವರ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + nine =
Remember me
