ತುಮಕೂರು:ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿ, ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಬೇಕು ಎಂದು ಆಮೀಷವೊಡ್ಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ರವಿ ಎಂಬಾತ ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಕ್ರೈಸ್ತ ಧರ್ಮಕ್ಕೆ ಸೇರಿದ ಕೆಲವರು ನನ್ನ ಮನೆಗೆ ಬಂದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರುತ್ತಿದ್ದಾರೆ. ಮತಾಂತರ ಮಾಡುವ ಉದ್ಧೇಶದಿಂದ ನನ್ನನ್ನು ನಿರಂತರವಾಗಿ ಸಂಪರ್ಕ ಮಾಡುತ್ತಿದ್ದಾರೆ ಎಂದು ಮರಳೂರು ಎಂಬಲ್ಲಿ ವಾಸವಾಗಿರವ ರವಿ ಎಂಬಾತ ಆರೋಪಿಸಿದ್ದಾನೆ.
ಕ್ರೈಸ್ತ ಮತಾಂತರಿಗಳಾದ ಜೆಸ್ಸಿ, ಸಾರ, ಚೇತನ್ ಎಂಬುವವರು ಕರೆ ಮಾಡಿ ಒತ್ತಡ ಮತಾಂತರ ಆಗುವಂತೆ ಒತ್ತಡ ಹೇರುತ್ತಿದ್ದಾರೆ. ನಾನು ಮತ್ತು ನನ್ನ ಸ್ನೇಹಿತರು ಮನೆಯಲ್ಲಿದ್ದ ಸಂದರ್ಭದಲ್ಲಿ ಬಂದು, ಹಿಂದೂ ದೇವರು ಹಾಗೂ ಆಚರಣೆಗಳ ವಿರುದ್ಧ ಮಾತನಾಡಿದ್ದಾರೆ. ಹಿಂದೂ ಧರ್ಮವನ್ನು ಬಿಟ್ಟು ಬಂದು ಕಿಶ್ಚಿಯನ್​​ ಧರ್ಮಕ್ಕೆ ಮತಾಂತರವಾದರೆ ನಿಮಗೆ ಪರಲೋಕ ಪ್ರಾಪ್ತಿಯಾಗುತ್ತದೆ. ಜತೆಗೆ ಜೀವನದಲ್ಲಿ ಸದಾ ಆತ್ಮರಕ್ಷಣೆ ಹೊಂದುತ್ತೀರಿ ಎಂದು ಮತಾಂತರಿಗಳು ಹೇಳಿದ್ದಾರೆ ಎಂದು ರವಿ ಆರೋಪಿಸಿದ್ದಾರೆ.
ಹಿಂದೂ ದೇವರ ಆಚರಣೆಗಳನ್ನು ಮಾಡುವುದು ಮೂರ್ಖತನವಾಗಿದ್ದು ಇದೊಂದ ಮೂಢನಂಬಿಕೆಯಾಗಿದೆ ಎಂದು ಹೇಳಿದ್ದಾರೆ. ಇದು ನಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಿದೆ. ಇದನ್ನು ನಾವು ಅಲ್ಲಗಳೆದಿದ್ದೇವೆ. ಇದೀಗ ಕ್ರೈಸ್ತ ಮತಾಂತರಿಗಳು ನಮಗೆ ಮತಾಂತರವಾಗುವಂತೆ ತೊಂದರೆ ಕೊಡುತ್ತಿದ್ದು, ಬೆದರಿಕೆ ಹಾಕುತ್ತಿದ್ದಾರೆ ಎಂದು ರವಿ ಹೇಳಿದ್ದಾರೆ.
ನಮಗೆ ಬೆದರಿಕೆ ಹಾಕಿರುವ ಜೆಸ್ಸಿ, ಸಾರ, ಚೇತನ್ ಎಂಬುವವರ ಹಿಂದೆ ಮತಾಂತರದ ದೊಡ್ಡ ಜಾಲ ಇರುವಂತಿದೆ. ಇದರ ಲಾಭ ಪಡೆದುಕೊಂಡು ಅಮಾಯಕ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇವರನ್ನು ಬಂಧಿಸಿ, ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸಬೇಕು ಎಂದು ರವಿ ಎಂಬುವವರು ತುಮಕೂರಿನ ಜಯನಗರ ಪೊಲೀಸ್ ಠಾಣಾಧಿಕಾರಿಯವರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 1 =
Remember me
