ಬೆಂಗಳೂರು:ಕರೊನಾ ನಾಲ್ಕನೇ ಅಲೆ ಇದೇ ಆಗಸ್ಟ್‌ನಲ್ಲಿ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು‌ ಐಐಟಿ ಕಾನ್ಪುರ ತಜ್ಞರು ಅಂದಾಜಿಸಿದ್ದಾರೆ. ಹೊಸ ಪ್ರಭೇದ ಹೊತ್ತು ತರುವ ನಾಲ್ಕನೇ ಅಲೆ ಬಗ್ಗೆ ಜನರಿಗೆ ಆತಂಕ ಬೇಡ. ಆದರೆ,‌ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದರೆ ಸಾಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ವಿಧಾನ ಪರಿಷತ್​ನಲ್ಲಿ ಶೂನ್ಯ ವೇಳೆ ಬಿಜೆಪಿಯ ಶಶೀಲ್ ನಮೋಶಿ ಈ ವಿಷಯ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಸುಧಾಕರ್​, ಈಗಾಗಲೇ ಶೇ.100 ಮೊದಲ ಡೋಸ್, ಶೇ.96 ಎರಡನೇ ಡೋಸ್ ಲಸಿಕೆ ವಿತರಿಸಲಾಗಿದೆ. ಬೂಸ್ಟರ್ ಡೋಸ್ ಹಾಗೂ ಮಕ್ಕಳಿಗೆ ಲಸಿಕೆ ವಿತರಣೆ ಪ್ರಗತಿಯಲ್ಲಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಶೀಘ್ರವೇ ಸಭೆ‌ ಕರೆದು ಮಾಸ್ಕ್ ಕಡ್ಡಾಯ ಸೇರಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿ ನಾಲ್ಕನೇ ಅಲೆ ಎದುರಿಸಲು ಅಗತ್ಯ ತಯಾರಿ‌ ಮಾಡಿಕೊಳ್ಳಲಾಗುವುದು ಎಂದರು.
ಬೇಕಾದ ಆರೋಗ್ಯ ಪರಿಕರಗಳಿವೆ, ಆಕ್ಸಿಜನ್, ಹಾಸಿಗೆ‌ ಇನ್ನಿತರ ಅನುಕೂಲತೆಗಳಿವೆ. ಮೂರು ಅಲೆಗಳನ್ನು ನಿಭಾಯಿಸಿದ ಅನುಭವವುಳ್ಳ ನುರಿತ ವೈದ್ಯರು ಮತ್ತು ಸಿಬ್ಬಂದಿ ಇದ್ದಾರೆ. ಆದರೆ, ಸೋಂಕು ಹರಡದಂತೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಡಾ.ಸುಧಾಕರ್ ಮಾಹಿತಿ ನೀಡಿದರು.
ಹನಿಟ್ರ್ಯಾಪ್​ ಗಾಳಕ್ಕೆ ಬಿದ್ದ ಉಪ ತಹಸೀಲ್ದಾರ್​! ಆಕೆಯ ಮಾತಿಗೆ ಮರುಳಾಗಿ ಹೋಟೆಲ್​ಗೆ ಹೋಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ…

ಎಚ್​ಡಿಕೆ ಬೆಂಗಾವಲು ವಾಹನ ಅಪಘಾತ: ಪಾವಗಡ ಬಸ್​ ದುರಂತದಲ್ಲಿ ಗಾಯಗೊಂಡವರ ಭೇಟಿ ವೇಳೆ ಮತ್ತೊಂದು ಅವಘಡ

ಆನೇಕಲ್​ನಲ್ಲಿ ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದ ಜನ! ಮಲಗಿದ್ದಲ್ಲೇ ಪತ್ನಿಯ ಕತ್ತು ಸೀಳಿ ಕೊಂದ, ಬಳಿಕ ತನ್ನ ಕತ್ತನ್ನೂ ಕೊಯ್ದುಕೊಂಡ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + nine =
Remember me
