ಅರಕಲಗೂಡು:ಕೋವಿಡ್ ಕೇರ್ ಸೆಂಟರ್​​​​​ಗೆ ದಾಖಲಾಗಿರುವ ರೋಗಿಗಳ ಕುಟುಂಬಸ್ಥರಿಗೆ ಗ್ರಾಮಸ್ಥರು ಬೆದರಿಕೆ ಹಾಕಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ.
ತಾಲೂಕಿನ ಎಚ್.ಆರ್.ಪಿ. ವಡ್ಡರಹಳ್ಳಿ ಗ್ರಾಮದ ವಿವಿಧ ಮನೆಯ ಐವರು ಪುರುಷರಿಗೆ ಕೋವಿಡ್ ಸೋಂಕು ದೃಢವಾಗಿದ್ದ ಹಿನ್ನೆಲೆ ಅವರೆಲ್ಲ ಕೋವಿಡ್ ಸೆಂಟರ್​​ಗೆ ದಾಖಲಾಗಿದ್ದರು. ಈ ವೇಳೆ, ಗ್ರಾಮದಲ್ಲಿ ರೋಗಿಯ ಕುಟುಂಬದಲ್ಲಿರುವ ಸದಸ್ಯರಿಗೆ ಬೆದರಿಕೆ ಹಾಕುತ್ತಿದ್ದು, ಮನೆಯಿಂದ ಹೊರ ಬಾರದಂತೆ ತಾಕೀತು ಮಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ವಿಡಿಯೋದಲ್ಲಿ ಆರೋಪಿಸಿದ್ದಾರೆ.
ನಮಗೆ ಅಗತ್ಯ ವಸ್ತುಗಳ ಖರೀದಿಗೂ ಹೊರ ಹೋಗಲು ಆಗುತ್ತಿಲ್ಲ. ಸರ್ಕಾರದಿಂದಲೂ ನಮಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿಲ್ಲ ನಾವು ಊಟ ತಿಂಡಿಗೆ ಏನು ಮಾಡಬೇಕು? ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕಣ್ಣೀರು ಹಾಕಿ ಅಳಲು ತೋಡಿಕೊಂಡಿದ್ದಾರೆ.
ದೂರು ಕೊಡಲು ಅರಕಲಗೂಡು ಠಾಣೆಗೆ ಹೋದರೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ, ನೀವು ಕುಳಿತುಕೊಂಡು ರಾಜಿ ಮಾಡಿಕೊಳ್ಳಿ ಎಂದು ಹಿಂತಿರುಗಿ ಕಳುಹಿಸಿದ್ದಾರೆ. ನಮಗೆ ರಕ್ಷಣೆ ನೀಡದಿದ್ದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ನಾನಂತೂ ಓದಿಲ್ಲ, ನೀನಾದ್ರೂ ಓದು ಎಂದು ಪತ್ನಿಯನ್ನ ಕೆಎಎಸ್​ ಅಧಿಕಾರಿ ಮಾಡಿಸಿದ್ದವ ಕರೊನಾಗೆ ಬಲಿ!

ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

ಗರ್ಭಿಣಿ ಕಣ್ಣೀರಿಟ್ಟರೂ ಅಡ್ಮಿಟ್​ ಮಾಡಿಕೊಳ್ಳಲಿಲ್ಲ, ಆಸ್ಪತ್ರೆ ಬಾಗಿಲಲ್ಲಿ ನಿಂತಿರುವಾಗಲೇ ಹೆರಿಗೆ, ಕೆಳಗೆ ಬಿದ್ದು ಮಗು ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
