ಕೊಳ್ಳೇಗಾಲ:ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ‌ ಆಲದಹಳ್ಳಿಯಲ್ಲಿ ವೃದ್ಧನ ಶವವನ್ನು ಬೈಕ್​ನಲ್ಲಿ ಸಾಗಿಸಿ ಅಂತ್ಯಕ್ರಿಯೆ ನಡೆಸಲಾಗಿದೆ.
ಗ್ರಾಮದ ಮಾದೇವ(ಸುಮಾರು 65 ವರ್ಷ) ಎಂಬುವರ ಶವವನ್ನು ಬೈಕ್​ನಲ್ಲಿ ಸಾಗಿಸಲಾಗಿದೆ. ಹೆಂಡತಿ- ಮಕ್ಕಳಿಲ್ಲದ ಮಾದೇವ ಮನೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ಇವರು ಕರೊನಾದಿಂದ ಮೃತಪಟ್ಟಿರಬಹುದು ಎಂದು ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸಲು ಪಿಎಫ್​ಐ ಕಾರ್ಯಕರ್ತರಿಗೆ ಕರೆ ಮಾಡಿದ್ದರು. ಮೃತನಿಗೆ ಕರೊನಾ ಪರೀಕ್ಷೆಯನ್ನು ನಡೆಸದೆ ಸೋಂಕು ತಗುಲಿರಬಹುದು ಎಂದು ಗ್ರಾಮಸ್ಥರು ನಿರ್ಧರಿಸಿ ಶವ ಸಂಸ್ಕಾರಕ್ಕೆ ಸಹಾಯ ಮಾಡಿಲ್ಲ. ಮಾದೇವನ ಅಂತ್ಯಸಂಸ್ಕಾರ ಮಾಡಲು ಬಂದಿದ್ದ ಪಿಎಫ್​ಐ ಸಂಘಟನೆ ಕಾರ್ಯಕರ್ತರು ಮಣ್ಣು ಮಾಡಲು ಸ್ಮಶಾನ ತೋರಿಸಿ ಎಂದಾಗ ಯಾರೊಬ್ಬರೂ ಮುಂದೆ ಬರದೆ ನಮ್ಮ ಊರಿನಲ್ಲಿ ಮಣ್ಣು ಮಾಡಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಮಾದೇವನ ಜಮೀನಿನಲ್ಲೂ‌ ಮಣ್ಣು‌ ಮಾಡಲು ಅವಕಾಶ ನೀಡದೆ ಅಮಾನವೀಯತೆ ಮೆರೆದಿದ್ದಾರೆ.
ಶವ ಸಾಗಿಸಲು ಯಾರೊಬ್ಬರೂ ವಾಹನ ನೀಡಿಲ್ಲ. ತಾಲೂಕು ಆಡಳಿತದಿಂದಲೂ ನೆರವು ದೊರೆಯಲಿಲ್ಲ. ಬಳಿಕ ಪಿಎಫ್​ಐ ಸಂಘಟನೆ ಕಾರ್ಯಕರ್ತರು ತಾವು ಹೋಗಿದ್ದ ದ್ವಿಚಕ್ರ ವಾಹನದಲ್ಲಿಯೇ ಏಣಿ ಮೇಲೆ ಶವ ಇಟ್ಟುಕೊಂಡು ಸಾಗಿಸಿದ್ದಾರೆ.
ಈ ವಿಚಾರ ತಿಳಿದ ಗ್ರಾಮಾಂತರ ಠಾಣೆ ಪೋಲಿಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿ, ಶವ ಹೂಳಲು ಗೋಮಾಳದಲ್ಲಿ ಜಾಗ‌ ತೋರಿದ್ದರು. ನಂತರ ಪಿಎಫ್ಐ ಸಂಘಟನೆ ಕೊಳ್ಳೇಗಾಲದ ನೂರ್ ಮೊಹಲ್ಲಾ ನಿವಾಸಿಗಳಾದ ಮತೀನ್, ಆಸಿಫ್, ಸಿದ್ದಿಕ್, ನಯೀಮ್ ಜಿಯಾವುಲ್ಲಾ ಮತ್ತಿತ್ತರರು ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಕಾಲ್ ​ಗರ್ಲ್​ ಜತೆ ಸೆಕ್ಸ್​​ ಮೂಡ್​ನಲ್ಲಿದ್ದ ಉದ್ಯಮಿ ಪುತ್ರನಿಗೆ ಕಾದಿತ್ತು ಶಾಕ್​! ಕಾಮದಾಟಕ್ಕೆ ಬಂದವಳು ದುರಂತ ಅಂತ್ಯ

ಗಂಡನಿದ್ದರೂ ಪರಪುರುಷನೊಂದಿಗೆ 2 ಮಕ್ಕಳ ತಾಯಿ ಕಾಮದಾಟ! ತಡರಾತ್ರಿ ನಡೆದೇ ಹೋಯ್ತು ಭೀಕರ ದುರಂತ

ಕರೊನಾಗೆ ಬಾಣಂತಿ ಬಲಿ! ಅವಳ ಚಿತೆಯಲ್ಲೇ ನನ್ನನ್ನೂ ಸುಟ್ಟುಹಾಕಿ … ಎಂದವ ವಿಷ ಕುಡಿದು ಆಸ್ಪತ್ರೆ ಆವರಣದಲ್ಲೇ ಒದ್ದಾಡಿದ

ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
