ಹಾವೇರಿ:ಕರೊನಾ ಸೋಂಕಿಗೆ ಒಂದು ತಿಂಗಳ ಬಾಣಂತಿ ಬಲಿಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಕಂಗೆಟ್ಟ ಪತಿ ವಿಷ ಕುಡಿದು ಆಸ್ಪತ್ರೆ ಆವರಣದಲ್ಲಿ ಒದ್ದಾಡಿದ ಹೃದಯ ವಿದ್ರಾವಕ ಘಟನೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಬ್ಯಾಡಗಿ ತಾಲೂಕಿನ ಸತೀಶ್ ವಿಷ ಸೇವಿಸಿದವ. ಸತೀಶ್​ರ ಪತ್ನಿಗೆ ತಿಂಗಳ ಹಿಂದೆ ಹೆರಿಗೆ ಆಗಿತ್ತು. ಮಗು ಬದುಕಲಿಲ್ಲ. ಇದಾದ ಬಳಿಕ ಅನಾರೋಗ್ಯಕ್ಕೀಡಾಗಿದ್ದ ಬಾಣಂತಿಗೆ ಕರೊನಾ ಸೋಂಕು ಇರುವುದು ಗೊತ್ತಾಗಿ ಆಸ್ಪತ್ರೆಗೆ ಸೇರಿಸಿದ್ದರು. ನಿನ್ನೆ(ಗುರುವಾರ) ರಾತ್ರಿ ಬಾಣಂತಿ ಮೃತಪಟ್ಟಿದ್ದಾಳೆ. ಇತ್ತ ಮಗುವೂ ಇಲ್ಲಾ, ಅತ್ತ ಪತ್ನಿಯೂ ಉಳಿಯಲಿಲ್ಲ… ತೀವ್ರ ಆಘಾತಗೊಂಡ ಸತೀಶ್​, ಹೆಂಡತಿ-ಮಗು ಇಲ್ಲದೇ ಜೀವನ ನನಗ್ಯಾಕೆ ಎಂದು ವಿಷ ಕುಡಿದು ಪತ್ನಿಯ ಮೃತದೇಹ ನೋಡಲು ಆಸ್ಪತ್ರೆಗೆ ಬಂದಿದ್ದ.

ಈ ವೇಳೆ ಸಂಬಂಧಿಕರಿಗೆ ನಾನು ಸಾಯುತ್ತಿದ್ದೇನೆ. ನನ್ನ ಪತ್ನಿಯ ಜತೆ ನನ್ನ ಚಿತೆಗೂ ಬೆಂಕಿ ಇಡಬೇಕು. ಇದೇ ನನ್ನ ಕೊನೆಯಾಸೆ ಎಂದು ಸತೀಶ್ ಹೇಳಿದ್ದ. ಬಹುಶಃ ನೋವಿನಿಂದ ಈ ಮಾತು ಹೇಳುತ್ತಿರಬಹುದು ಎಂದು ಸಂಬಂಧಿಕರು ಸುಮ್ಮನಾಗಿದ್ದರು. ಆದರೆ. ಆಸ್ಪತ್ರೆ ಆವರಣದಲ್ಲಿ ಬಿದ್ದು ಒದ್ದಾಡುತ್ತಾ ಪ್ರಜ್ಞಾಹೀನ ಸ್ಥಿತಿಗೆ ತಲುಪಿದಾಗ ಕೂಡಲೇ ಆತನನ್ನು ಸಂಬಂಧಿಕರು ಆಸ್ಪತ್ರೆಗೆ ಹೊತ್ತೊಯ್ದರು. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)
ಗಂಡನಿದ್ದರೂ ಪರಪುರುಷನೊಂದಿಗೆ 2 ಮಕ್ಕಳ ತಾಯಿ ಕಾಮದಾಟ! ತಡರಾತ್ರಿ ನಡೆದೇ ಹೋಯ್ತು ಭೀಕರ ದುರಂತ

ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು

ಬೆಳ್ಳಂಬೆಳಗ್ಗೆ ಅಣ್ಣಮ್ಮ ದೇವಿ ದರ್ಶನ ಪಡೆದ ಸಿಎಂ, ಕಂಪ್ಲೀಟ್​ ಲಾಕ್​ಡೌನ್ ಸುಳಿವು ಕೊಟ್ಟೇಬಿಟ್ರು

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:1 × three =
Remember me
