ಚಿತ್ರದುರ್ಗ:ಕರೊನಾ ಹೆಸರು ಕೇಳಿದ್ರೆ ಸಾಕು ಮಾರುದ್ದ ಓಡುವ ಜನರ ನಡುವೆ ಕೆಲ ಸೋಂಕಿತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಆದರೆ, ಇಲ್ಲೊಬ್ಬ ಪತ್ನಿಗೆ ಕೋವಿಡ್ ಬಂದಿದ್ದಕ್ಕೆ ಹೆದರಿ ಸಾವಿನ ಮನೆಯ ಕದ ತಟ್ಟಿದ್ದಾನೆ.
ಇಂತಹ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ರಂಗನಾಥಪುರದಲ್ಲಿ ಸಂಭವಿಸಿದೆ. ರಾಜು (32) ಆತ್ಮಹತ್ಯೆ ಮಾಡಿಕೊಂಡವ. ಇವರ ಪತ್ನಿ ರಶ್ಮಿಗೆ ಮೇ 27ರಂದು ಕರೊನಾ ಪಾಸಿಟಿವ್ ಬಂದಿತ್ತು. ರಾಜುವಿನ ಕೋವಿಡ್ ಟೆಸ್ಟ್ ವರದಿ ನೆಗಟಿವ್ ಬಂದಿತ್ತು.
ರಶ್ಮಿಯನ್ನ ದೇವರಕೊಟ್ಟ ಕೋವಿಡ್ ಕೇರ್ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಪತ್ನಿಗೆ ಕರೊನಾ ಪಾಸಿಟಿವ್​ ಬಂದಿದ್ದಕ್ಕೆ ಗಾಬರಿಗೊಂಡಿದ್ದ ರಾಜು, ಅಂದಿನಿಂದ ಖಿನ್ನತೆಗೆ ಒಳಗಾಗಿದ್ದರು. ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.
ಬೆಂಗಳೂರಲ್ಲಿ ಗ್ಯಾಂಗ್​ ರೇಪ್​, ಗುಪ್ತಾಂಗಕ್ಕೆ ಬಿಯರ್​ ಬಾಟಲಿ ಇಟ್ಟು ವಿಕೃತಿ ಮೆರೆದಿದ್ದ ಕಾಮುಕರಿಗೆ ಪೊಲೀಸರಿಂದ ಗುಂಡೇಟು!

ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ

ಹೆರಿಗೆ ವೇಳೆ ದಾದಿಯ ಕೈಜಾರಿ ಬಿದ್ದು ನವಜಾತ ಶಿಶು ಸಾವು? ಆಸ್ಪತ್ರೆ ಬಳಿ ಮುಗಿಲುಮುಟ್ಟಿದ ಪಾಲಕರ ಆಕ್ರಂದನ

ನಾನಂತೂ ಓದಿಲ್ಲ, ನೀನಾದ್ರೂ ಓದು ಎಂದು ಪತ್ನಿಯನ್ನ ಕೆಎಎಸ್​ ಅಧಿಕಾರಿ ಮಾಡಿಸಿದ್ದವ ಕರೊನಾಗೆ ಬಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
