ಮೈಸೂರು:ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಾವಿನ ಬಗ್ಗೆ ಸುಳ್ಳು ಲೆಕ್ಕ ಕೊಟ್ಟಿದ್ದಾರೆ. ಸುಳ್ಳು ಲೆಕ್ಕ ಕೊಡೋಕೆ ಐಎಎಸ್ ಏಕೆ ಬೇಕು? ಎಸ್ಎಸ್ಎಲ್‌ಸಿ ಓದಿದವರೂ ಕೊಡಬಹುದು. ರೋಹಿಣಿ ಸಿಂಧೂರಿಯ ಸಾರ್ವಜನಿಕ ಸೇವೆ ಎಲ್ಲವೂ ಮೋಸದ್ದು. ಮೈಸೂರು ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಾವು ಇಳಿಸಿದ್ದೇನೆ. ಸಾಧನೆ ಮಾಡಿದ್ದೇನೆ ಅಂತ ಪೋಸು ಕೊಡಲು ಈ ರೀತಿ ಮಾಡಿದ್ದಾರೆ. ಮಂಡ್ಯದಲ್ಲಿ ಅವರ ಇತಿಹಾಸ ಗೊತ್ತಿಲ್ಲವಾ? ಹಾಸನದ ಇತಿಹಾಸ ಗೊತ್ತಿಲ್ಲವಾ? ಅಧಿಕಾರಿಗಳು ಏನೇ ಮಾಡಿದರೂ ಜನ ನಂಬುತ್ತಾರೆ. ರಾಜಕಾರಣಿಗಳು ಸತ್ಯ ಹೇಳಿದರೂ ನಂಬುವುದಿಲ್ಲ. ಜನಪ್ರತಿನಿಧಿಗಳು 5 ವರ್ಷಕ್ಕೆ ಒಂದೊಂದು ಐಎಎಸ್ ಮಾಡಿದಂತೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ. ಮಹೇಶ್​ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯಲ್ಲಿನ ಕರೊನಾ ಸ್ಥಿತಿ-ಗತಿ, ಸಾವು-ನೋವಿನ ಅಂಕಿಅಂಶ ಸಹಿತ ಮೈಸೂರು ಜಿಲ್ಲಾಡಳಿತ ನಿನ್ನೆ ಮಾಹಿತಿ ಬಿಡುಗಡೆ ಮಾಡಿತ್ತು. ಈ ಕುರಿತು ಸೋಮವಾರ ಸುದ್ದಿಗೋಷ್ಠಿ ನಡೆಸಿದ ಸಾ.ರಾ.ಮಹೇಶ್​, ರಾಜ್ಯ ಸರ್ಕಾರ, ಸಿಎಂ, ರಾಜ್ಯಪಾಲರು ಮತ್ತು ಸತ್ತವರ ಕುಟುಂಬ, ಸತ್ತವರ ಆತ್ಮಕ್ಕೆ ಜಿಲ್ಲಾಧಿಕಾರಿ ತಪ್ಪು ಲೆಕ್ಕ ಕೊಟ್ಟಿದ್ದಾರೆ. ಜಿಲ್ಲೆಗೆ ಕಳಂಕ ರಹಿತ ಒಳ್ಳೆಯ ಅಧಿಕಾರಿ ಬೇಕು ಎಂದರು.ಇದನ್ನೂ ಓದಿರಿಹಿಂದು ಯುವತಿಯನ್ನ ಮದ್ವೆಯಾದ 7 ಮಕ್ಕಳ ತಂದೆ! ಖಾಸಗಿ ದೃಶ್ಯ ಸೆರೆಹಿಡಿದು ಇಸ್ಲಾಂಗೆ ಮತಾಂತರ
ಮೇ‌ 1 ರಿಂದ 29ರ ವರೆಗೆ ಮೈಸೂರು ಜಿಲ್ಲೆಯಲ್ಲಿ‌ 969 ಜನ ಕರೊನಾ ಸೋಂಕಿನಿಂದ ಮೃತಪಟ್ಟಿದ್ಧಾರೆ. ಆದರೆ ಜಿಲ್ಲಾಡಳಿತ 238 ಜನ ಸಾವನ್ನಪ್ಪಿದ್ದಾರೆ ಎಂದು ಸರ್ಕಾರಕ್ಕೆ ಲೆಕ್ಕ ತೋರಿಸಿದೆ. 731 ಸಾವುಗಳ ಲೆಕ್ಕವನ್ನು ನೀಡಿಲ್ಲ. ಜಿಲ್ಲೆಯಲ್ಲಿ‌ ಸಾವಿನ‌ ಸಂಖ್ಯೆ ಹಾಗೂ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು‌ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಪ್ಪು ಲೆಕ್ಕ ನೀಡುತ್ತಿದ್ದಾರೆ. ಈ ರೀತಿ ತಪ್ಪು ಲೆಕ್ಕ ನೀಡಿದರೆ ಮೃತರ ಕುಟುಂಬಸ್ಥರಿಗೆ ಸಿಗಬಹುದಿದ್ದ ಸಹಾಯ ಮಾಡಿದರೆ ಸಿಗದಂತೆ ಮಾಡಿ ಆ ಕುಟುಂಬಗಳಿಗೆ ವಂಚನೆ ಮಾಡಿದಂತಾಗುತ್ತದೆ ಎಂದು ಸಾ.ರಾ..ಮಹೇಶ್ ವಾಗ್ದಾಳಿ ನಡೆಸಿದರು.
ನಾವು ಯಾವ ಅಧಿಕಾರಿಯ ಸ್ಥೈರ್ಯವನ್ನೂ ಕುಗ್ಗಿಸುತ್ತಿಲ್ಲ. ಸಾವಿನ ಲೆಕ್ಕದ ಸಮಗ್ರ ತನಿಖೆಯಾಗಬೇಕು. ಶಾಸಕ ಜಿ ಟಿ ದೇವೇಗೌಡರ ಜತೆಯಲ್ಲಿ ಹೋಗಿ ರಾಜ್ಯಪಾಲರಿಗೆ ದೂರು ನೀಡುವೆ ಎಂದರು. ಸರ್ಕಾರ ಈಗಲಾದರೂ ಕಣ್ಣು ತೆರೆಯಲಿ. ಒಂದು ಸಾವಾದರೂ ಅದು ಸಾವೇ. ಜಿಲ್ಲೆಯಲ್ಲಿ ಅದೆಷ್ಟು ಜನ ಸಾವನ್ನಪ್ಪಿದ್ದಾರೋ ಗೊತ್ತಿಲ್ಲ. ಅದರ ಮಾಹಿತಿ ಕೂಡ ಕಲೆ ಹಾಕುತ್ತೇನೆ. ವೈದ್ಯರು ಸುಳ್ಳಾ? ಅಥವಾ ಅಂತ್ಯಕ್ರಿಯೆ ಮಾಡಿದ್ದು ಸುಳ್ಳಾ? ಜನರು ಭಯ ಬೀಳುತ್ತಾರೆ ಅಂತ ಮಾಧ್ಯಮಗಳಿಗೆ ಕಡಿಮೆ ಕೊಡಬಹುದೇನೋ. ಆದರೆ ಇವರು ಸರ್ಕಾರಕ್ಕೆ ಕಡಿಮೆ ಲೆಕ್ಕ ಕೊಟ್ಟಿದ್ದಾರೆ ಎಂದರು.
ಹಿಂದು ಯುವತಿಯನ್ನ ಮದ್ವೆಯಾದ 7 ಮಕ್ಕಳ ತಂದೆ! ಖಾಸಗಿ ದೃಶ್ಯ ಸೆರೆಹಿಡಿದು ಇಸ್ಲಾಂಗೆ ಮತಾಂತರ

ಕ್ಲೋಸ್ ಡೋರ್​ ಮೀಟಿಂಗ್​ನಲ್ಲಿ ರೋಹಿಣಿ ಸಿಂಧೂರಿಗೆ ಹಿಗ್ಗಾಮುಗ್ಗಾ ತರಾಟೆ! ಮೌನವಾಗಿಯೇ ಹೊರಟ ಡಿಸಿ

ಕರೊನಾಗೆ ಒಂದೇ ದಿನ ತಾಯಿ-ಮಗ ಬಲಿ! ಒಂದೇ ಚಿತೆಯಲ್ಲಿ ಇಬ್ಬರ ಅಂತ್ಯಸಂಸ್ಕಾರ

ಮಹಾವಂಚಕಿಗೆ ಸಾಥ್ ಕೊಟ್ಟ ಸ್ಯಾಂಡಲ್​ವುಡ್​ ನಟ? ಸಾವಿರಾರು ಕೋಟಿ ರೂ. ರಹಸ್ಯ ಬಯಲು

ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one × 5 =
Remember me
