ಬೆಂಗಳೂರು:ಆಗಸ್ಟ್​ನಲ್ಲಿ ಕರೊನಾ 4ನೇ ಅಲೆ ಬರಲಿದೆ ಎಂಬ ಆಘಾತಕಾರಿ ಸುದ್ದಿ ನಡುವೆ ಮತ್ತೊಂದು ವರದಿ ಸಮಾಧಾನಕರ ತರಿಸಿದೆ. ರಾಜ್ಯದ 29 ಜಿಲ್ಲೆಗಳು ಕೋವಿಡ್​ ಸಾವಿನಿಂದ ಮುಕ್ತಗೊಂಡಿದೆ. ಹೌದು, ಶನಿವಾರ ಕೋವಿಡ್​ ಸೋಂಕಿನಿಂದ ಬೆಂಗಳೂರು ನಗರದ ಮಹಿಳೆಯೊಬ್ಬರು ಮೃತಪಟ್ಟಿದ್ದು, ದಿನದ ಮರಣ ಪ್ರಮಾಣ ದರ ಶೇ. 1.26ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ 29 ಜಿಲ್ಲೆಗಳು ಕೋವಿಡ್​ ಸಾವಿನಿಂದ ಮುಕ್ತಗೊಂಡಂತಾಗಿದೆ.
ಕಳೆದ 24 ಗಂಟೆಗಳಲ್ಲಿ 79 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ದಿನದ ಸೋಂಕು ಪ್ರಮಾಣ ದರ ಶೇ.0.26ಕ್ಕೆ ಕುಸಿದಿದೆ. 94 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರ ಸಂಖ್ಯೆ 39.03 ಲಕ್ಷ ಮೀರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,776ಕ್ಕೆ ತಲುಪಿದೆ. ಈವರೆಗೂ 40,049 ಸೋಂಕಿತರು ಮೃತಪಟ್ಟಿದ್ದು, 39.45 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ. ಬೆಂಗಳೂರು ನಗರದಲ್ಲಿ 58 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 7 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿದೆ.
ಮಹಿಳೆಯ ಕಾಟ ಸಹಿಸಲಾಗದೆ ಯುವಕ ಆತ್ಮಹತ್ಯೆ: ಸಾವಿಗೂ ಮುನ್ನ ಆತ ಮಾಡಿಟ್ಟ ವಿಡಿಯೋದಲ್ಲಿದೆ ರಹಸ್ಯ

ಒಂದೇ ದಿನ ವಿದ್ಯಾರ್ಥಿ-ಶಿಕ್ಷಕಿ ನಾಪತ್ತೆ! ಮದ್ವೆ ಆಗಿ ಬಾಲಕನ ಜತೆ ಸಂಸಾರ ನಡೆಸುತ್ತಿದ್ದಾಕೆ ಸಿಕ್ಕಿಬಿದ್ದದ್ದೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
