ಬೆಂಗಳೂರು:ಕರೊನಾ ಲಾಕ್​ಡೌನ್​ ಕೃಷಿಕರಿಗೆ ಭಾರಿ ಹೊಡೆತ ಕೊಟ್ಟಿದೆ, ಲಕ್ಷಾಂತರ ಮಂದಿ ಕಷ್ಟಪಟ್ಟು ಬೆಳೆದ ಫಸಲು ಜಮೀನಿನಲ್ಲೇ ಕೊಳೆಯುತ್ತಿದೆ. ತರಕಾರಿ, ಹೂವು, ಹಣ್ಣು, ಧಾನ್ಯ ಬೆಳದು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಸೂಕ್ತ ಮಾರುಕಟ್ಟೆ ಸಿಗದೆ, ಅತ್ತ ವ್ಯಾಪಾರವೂ ಆಗದೆ ಕಂಗಾಲಾಗಿದ್ದಾರೆ. ಈಗಾಗಲೇ ನೂರಾರು ಮಂದಿ ಫಸಲನ್ನ ರಸ್ತೆ ಸುರಿದು ಆಕ್ರೋಶ ಹೊರಹಾಕಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ರೈತರ ನೆರವಿಗೆ ಬಂದಿದ್ದಾರೆ ಸ್ಯಾಂಡಲ್​ವುಡ್​ನ ಸೂಪರ್​ ಸ್ಟಾರ್​ ಉಪೇಂದ್ರ. ಬೆಳೆ ಬೆಳೆದ ರೈತರು ಕೆಳಗೆ ಕೊಟ್ಟಿರುವ ಮೊಬೈಲ್​ ನಂಬರ್​ಗೆ ಕರೆ ಮಾಡಿದ್ರೆ ಉಪ್ಪಿ ತಂಡ ಸೂಕ್ತ ಬೆಲೆ ಕೊಟ್ಟು ಖರೀದಿಸುತ್ತೆ.
ಸಾಮಾಜಿಕ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಕರೊನಾ ಸಂಕಷ್ಟ ಕಾಲದಲ್ಲೂ ಹಲವರಿಗೆ ನೆರವಿನ ಹಸ್ತಚಾಚಿದ್ದಾರೆ. ಬಡ ಜನರಿಗೆ ಆಹಾರ ಕಿಟ್​ಗಳನ್ನು ವಿತರಿಸುತ್ತಿದ್ದಾರೆ. ಉಪ್ಪಿ ಅವರ ಕಾರ್ಯಕ್ಕೆ ಸಾಥ್​ ನೀಡಲು ದಾನಿಗಳು ಹಣ ಸಹಾಯ ಮಾಡುತ್ತಿದ್ದಾರೆ.
‘ಕರೊನಾ ಲಾಕ್​ಡೌನ್​ ಪರಿಣಾಮ ರೈತರು ಬೆಳೆದ ಬೆಳೆ ಮಾರಾಟ ಆಗದೆ ಸಂಕಷ್ಟದಲ್ಲಿದ್ದಾರೆ. ನಮಗೆ ದಾನಿಗಳಿಂದ ಬಂದ ಹಣದಲ್ಲಿ ರೈತರ ಬಳಿ ನೇರವಾಗಿ ತರಕಾರಿಗಳನ್ನು ಖರೀದಿಸಿ ದಿನಸಿ ಕಿಟ್ ಜತೆಯಲ್ಲಿ ನೀಡುತ್ತೇವೆ’ ಎಂದು ನಟ ಉಪೇಂದ್ರ ಇತ್ತೀಚಿಗೆ ಟ್ವೀಟ್​ ಮೂಲಕ ತಿಳಿಸಿದ್ದರು.
ಇದೀಗ ಮತ್ತೊಮ್ಮೆ ಟ್ವೀಟ್​ ಮಾಡಿರುವ ಉಪೇಂದ್ರ, ‘ಬೆಳೆದ ಬೆಳೆ ವ್ಯಾಪಾರವಾಗದೆ ಸಂಕಷ್ಟದಲ್ಲಿರುವ ರೈತರ ಗಮನಕ್ಕೆ. ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಖರೀದಿಸಿ ಬೇಕಿರುವವರಿಗೆ ಹಂಚುತ್ತೇವೆ. ಈ ನಂಬರ್​ಗೆ98457 63396ಕರೆ ಮಾಡಿ (24ರ ಮೇ 2021ರ ಒಳಗೆ).
ರೈತರು ಬೆಳೆದ ಬೆಳೆ ಯಾವುದು? ಆ ಬೆಳೆ ಎಷ್ಟು ಕೆಜಿ/ ಕ್ವಿಂಟಾಲ್ ಇದೆ? ಅದರ ಅಂತಿಮ ಬೆಲೆ ಎಷ್ಟು? ಅದನ್ನು ಬೆಂಗಳೂರಿಗೆ ಸಾಗಿಸಲು ಸಾರಿಗೆ ವಚ್ಚ ಎಷ್ಟು? ಈ ವಿವರಗಳನ್ನು ದಯವಿಟ್ಟು ಈ ಮೊಬೈಲ್​ ನಂಬರ್​ಗೆ 98457 63396 ವಾಟ್ಸ್ಆ್ಯಪ್​ ಮಾಡಿ ಎಂದು ಉಪೇಂದ್ರ ಮನವಿ ಮಾಡಿದ್ದಾರೆ.
ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಗಮನಕ್ಕೆ….ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ.ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ( 24 ಮೇ 2021 ರ ಒಳಗೆ )Mbl no 9845763396
— Upendra (@nimmaupendra)May 15, 2021

https://www.vijayavani.net/a-corona-lockdown-effect-tomato-rate-decline/
ಪ್ರೀತಿ ಹೆಸರಲ್ಲಿ ಶಾಲಾ ವಿದ್ಯಾರ್ಥಿನಿ ಜತೆ ಯುವಕನ ಸೆಕ್ಸ್: ಮಾತ್ರೆ ನುಂಗಿಸಿ ಸಿಕ್ಕಿಬಿದ್ದ ಕಾಮುಕನ ಕಥೆ ಏನಾಯ್ತು?

ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

ಬೆಳಗಾವಿ ಲೋಕಸಭೆ ಬೈಎಲೆಕ್ಷನ್​ನ ಚುನಾವಣಾಧಿಕಾರಿಯಾಗಿದ್ದ ಶಿರಸ್ತೇದಾರ್​ ವಿಜಯಶ್ರೀ ಕರೊನಾಗೆ ಬಲಿ

ಅನುಮಾನಾಸ್ಪದವಾಗಿ ಪತ್ನಿ ಸತ್ತ 5 ದಿನಕ್ಕೆ ಸಾವಿನ ಮನೆಯ ಕದ ತಟ್ಟಿದ ಟೆಕ್ಕಿ! ಕಳೆದ ತಿಂಗಳಷ್ಟೆ ಮದ್ವೆ ಆಗಿದ್ದವರ ಬದುಕಲ್ಲಿ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
