ಬಾಗಲಕೋಟೆ:ಆಕ್ಸಿಜನ್​ ಬೆಡ್​ ಸಿಗದೆ ಕೋವಿಡ್​ನಿಂದ ಅಣ್ಣನನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಶಾಸಕರಿಗೆ ಕರೆ ಮಾಡಿದರೆ, ಅವರಿಗೆ ಸಮಾಧಾನ ಹೇಳುವ ಬದಲು ‘ನಾಲಾಯಕ್ ಇಡು ಫೋನ್.. ದೊಡ್ಡ ಕಿಸಾಮತಿ ಮಾಡ್ತಿ’ ಎಂದು ಬೈದಿರುವ ಆಡಿಯೋ ವೈರಲ್​ ಆಗಿದೆ.
ಅಶೋಕ ದೊಂಡಿಬಾಗ ಗಾಯಕವಾಡ ಎಂಬುವರ ಸಹೋದರ ಕೋವಿಡ್​ಗೆ ಬಲಿಯಾಗಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಆಕ್ಸಿಜನ್​ ಸಿಗದೆ ತನ್ನ ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಅವರಿಗೆ ಫೋನ್ ಮಾಡಿದ್ದ ಅಶೋಕ, ‘ನೀವು ಶಾಸಕರು ಇದ್ದೀರಿ. ಆಕ್ಸಿಜನ್ ವ್ಯವಸ್ಥೆ ಮಾಡಬೇಕು, ಸರ್ಕಾರಿ ದವಾಖಾನೆ ಮುಂದೆ ಕೂರಬೇಕು. ಮನೆಯಲ್ಲಿ ಕೂರಲಿ ಎಂದು ನಿಮ್ಮನ್ನು ಆರಿಸಿ ಕಳಿಸಿಲ್ಲ’ ಎನ್ನುತ್ತಿದ್ದಂತೆ ಗರಂ ಆದ ಶಾಸಕರು, ‘ಶಾಣ್ಯಾ ಅದಿ ಫೋನ್ ಇಡು, ನಾಲಾಯಕ್ ಇಡು ಪೋನ್, ದೊಡ್ಡ ಕಿಸಾಮತಿ ಮಾಡ್ತಿ…’ ಎಂದು ಬೈದಿದ್ದಾರೆ.ಇದನ್ನೂ ಓದಿರಿVIDEO| ಕಾರಿನ ಮುಂದೆ ‘ಕೋವಿಡ್ ಡ್ಯೂಟಿ’ ಬೋರ್ಡ್​, ಒಳಗೆ ಇದ್ದದ್ದು ಮಾತ್ರ ಅರ್ಚಕರು!
ಅಶೋಕ ದೊಂಡಿಬಾಗ ಅವರ ಅಣ್ಣ ಸಂಜಯ್ ದೊಂಡಿಬಾಗ(41) ಕೋವಿಡ್​ನಿಂದ ಶನಿವಾರ ಮೃತಪಟ್ಟಿದ್ದರು. ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ನಿವಾಸಿ ಆಗಿದ್ದ ಸಂಜಯ್​ಗೆ ಆಕ್ಸಿಜನ್ ಬೆಡ್ ಸಿಕ್ಕಿರಲಿಲ್ಲ. ಬೆಡ್​ಗಾಗಿ ಸಂಜಯ್​ ಕುಟುಂಬ ಬಾಗಲಕೋಟೆ, ಜಮಖಂಡಿ, ವಿಜಯಪುರ ಎಲ್ಲೆಡೆ ಅಲೆದಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೂ ಆಕ್ಸಿಜನ್ ಸಿಗದೆ ವಿಜಯಪುರದಲ್ಲಿ ಸಂಜಯ್ ಮೃತಪಟ್ಟಿದ್ದರು. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ. ಇದೇ ಕಾರಣಕ್ಕೆ ಮೃತನ ಸಹೋದರ ಶಾಸಕರಿಗೆ ಈ ಅವ್ಯವಸ್ಥೆಯಿಂದ ನನ್ನಣ್ಣ ಸತ್ತ ಎಂದು ಹೇಳಲು ಪೋನ್ ಮಾಡಿದ್ದ. ಶಾಸಕರು ಸಮಾಧಾನಿಸುವ ಬದಲು ಸಿಡುಮಿಡಿಗೊಂಡು ಬೈದಾಡಿದ್ದಾರೆ.
ಕೋವಿಡ್​ನಿಂದ ಮೃತಪಟ್ಟವನ ಸಹೋದರನಿಗೆ ಶಾಸಕರ ಬೈಗುಳ ಆಡಿಯೋ ವೈರಲ್​ ಆಗಿದೆ. ಅದೆಂಥಾ ಮಾತು ಹೇಳಿಬಿಟ್ಟಿರಿ ಶಾಸಕರೇ? ನಿಮ್ಮನ್ನು ಆಯ್ಕೆ ಮಾಡಿದ್ದಕ್ಕೂ ಸಾರ್ಥಕ ಆಯ್ತು ಬಿಡಿ. ಸಾವಿನ ಮನೆಯ ದುಃಖ ಅನುಭವಿಸೋರಿಗೆ ಗೊತ್ತು ಎಂದು ಶಾಸಕರ ನಡೆಯನ್ನ ಸಾರ್ವಜನಿಕರು ಟೀಕಿಸಿದ್ದಾರೆ.
ಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ

ಪ್ರೀತಿ ಹೆಸರಲ್ಲಿ ಶಾಲಾ ವಿದ್ಯಾರ್ಥಿನಿ ಜತೆ ಯುವಕನ ಸೆಕ್ಸ್: ಮಾತ್ರೆ ನುಂಗಿಸಿ ಸಿಕ್ಕಿಬಿದ್ದ ಕಾಮುಕನ ಕಥೆ ಏನಾಯ್ತು?

ಅಪ್ಪ-ಅಮ್ಮ ಕೋವಿಡ್​ಗೆ ಬಲಿ! ತಾತ-ಅಜ್ಜಿಗೂ ಸೋಂಕು, ಅನಾಥೆಯಾದ 4 ವರ್ಷದ ಕಂದಮ್ಮ

VIDEO| ಕಾರಿನ ಮುಂದೆ ‘ಕೋವಿಡ್ ಡ್ಯೂಟಿ’ ಬೋರ್ಡ್​, ಒಳಗೆ ಇದ್ದದ್ದು ಮಾತ್ರ ಅರ್ಚಕರು!

ಲಾಕ್​ಡೌನ್ ಇದ್ರೂ ಕಾಲೇಜು ಓಪನ್! ಒಳಗೆ ಲೆಕ್ಚರರ್​ನ ಬಿಟ್ಟು ಗೇಟ್​ ಮುಂದೆ ನಿಂತ ಪ್ರಿನ್ಸಿಪಾಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 1 =
Remember me
