ಬೆಂಗಳೂರು:ರಾಜ್ಯದಲ್ಲಿ ಒಮಿಕ್ರಾನ್​ನ ಹೊಸ ಉಪತಳಿಗಳಾದ ಬಿಎ3, ಬಿಎ4 ಮತ್ತು ಬಿಎ5 ಪತ್ತೆಯಾಗಿದ್ದು, ಇದರೊಂದಿಗೆ ನಾಲ್ಕನೇ ಅಲೆಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿರುವ ಬಿಎ 5 ವೈರಸ್​ ರಾಜ್ಯದಲ್ಲೂ ಕಂಡು ಬಂದಿದೆ. ಮೇ ಮತ್ತು ಜೂನ್​ನಲ್ಲಿ ನಡೆದ ವಂಶವಾಹಿ ಪರೀಕ್ಷೆಯಲ್ಲಿ ಶೇ.98 ಒಮಿಕ್ರಾನ್​ ಬಿಎ1.1.529, ಬಿಎ1, ಬಿಎ2 ಪತ್ತೆಯಾಗಿದ್ದು, ಶೇ.2 ಒಮಿಕ್ರಾನ್​ನ ಹೊಸ ಉಪತಳಿಗಳು ಪತ್ತೆಯಾಗಿರುವ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಟ್ವೀಟ್​ ಮಾಡಿದ್ದಾರೆ.
ರಾಜ್ಯದಲ್ಲಿ ಮೂರನೇ ಅಲೆ ಸಂದರ್ಭದಲ್ಲಿ ಒಮಿಕ್ರಾನ್​ ಉಪತಳಿಗಳಾದ ಬಿಎ1.1.529, ಬಿಎ1, ಬಿಎ2 ಮಾತ್ರ ಪತ್ತೆಯಾಗಿದ್ದವು. ಮೂರನೇ ಅಲೆ ತಗ್ಗಿದ ನಂತರ ಏಪ್ರಿಲ್​ನಲ್ಲಿ ಕೋವಿಡ್​ ಸೋಂಕು ಪ್ರಕರಣಗಳು ಸರಾಸರಿ 100 ವರದಿಯಾಗುತ್ತಿದ್ದವು. ಆದರೆ, ಮೇ ಕೊನೆಯ ವಾರಕ್ಕೆ ಪ್ರಕರಣಗಳ ಸಂಖ್ಯೆ 200ಕ್ಕೆ ಏರಿಕೆಯಾಗಿದ್ದವು. ಜೂನ್​ ಆರಂಭದೊಂದಿಗೆ ಸೋಂಕು ಪ್ರಕರಣಗಳ ಸಂಖ್ಯೆ ನಿರಂತರ ಏರಿಕೆಯಾಗುತ್ತಿದ್ದು ದಿನದ ಸರಾಸರಿ ಪ್ರಕರಣಗಳ ಸಂಖ್ಯೆ 800 ಗಡಿ ದಾಟಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5 ಸಾವಿರ ಗಡಿ ದಾಟಿದೆ.
ಈ ಹಿನ್ನೆಲೆ ಆರೋಗ್ಯ ಇಲಾಖೆ ವಂಶವಾಹಿ ಪರೀಕ್ಷೆ ತೀವ್ರಗೊಳಿಸಿತ್ತು. ಜತೆಗೆ ಮಕ್ಕಳ ಸಿರೋ ಸಮೀಕ್ಷೆ ಸಹ ನಡೆಸಿದೆ. ಮೇ ಮತ್ತು ಜೂನ್​ನಲ್ಲಿ ನಡೆಸಿದ ವಂಶವಾಹಿ ಪರೀಕ್ಷೆಗಳಲ್ಲಿ ಹೊಸ ಉಪತಳಿಗಳು ಒಂದಿಷ್ಟು ಪ್ರಮಾಣದಲ್ಲಿರುವುದು ದೃಢಪಟ್ಟಿದ್ದು, ಇವುಗಳಿಂದಲೇ ಕಳೆದ ಒಂದು ತಿಂಗಳಿಂದ ಹೊಸ ಪ್ರಕರಣ ಹೆಚ್ಚಳವಾಗಿರಬಹುದು ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

ಸಹೋದ್ಯೋಗಿ ಪತ್ನಿಯ ಮೇಲೆ 8 ಕಾನ್​ಸ್ಟೇಬಲ್​ಗಳಿಂದ ನಿರಂತರ ಅತ್ಯಾಚಾರ: ಆರೋಪಿಗಳಿಗೆ ಹೈಕೋರ್ಟ್​ನಲ್ಲೂ ಹಿನ್ನಡೆ

ಕೂಲಿ ಕೆಲಸಕ್ಕಾಗಿ ಆಂಧ್ರದಿಂದ ಚಿಕ್ಕಬಳ್ಳಾಪುರಕ್ಕೆ ಬಂದವ ಈಗ ಕೋಟ್ಯಧೀಶ! ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + fifteen =
Remember me
