ದಾವಣಗೆರೆ:ಹೊನ್ನಾಳಿ ತಾಲೂಕು ಶಾಸಕ ಎಂ.ಪಿ.ರೇಣುಕಾಚಾರ್ಯರ ವಿರುದ್ಧ ಕೇಸ್​ ದಾಖಲಿಸಲು ಮುಂದಾದ ತಹಸೀಲ್ದಾರ್​ರ ನಡೆಯನ್ನ ಪ್ರಶ್ನಿಸಿ ಅರಬಗಟ್ಟೆಯ ಕೋವಿಡ್ ಕೇರ್​ ಸೆಂಟರ್​ನಲ್ಲಿ ಕರೊನಾ ಸೋಂಕಿತರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದರು. ತಹಸೀಲ್ದಾರ್​ ಸ್ಥಳಕ್ಕೆ ಬರುವವರೆಗೂ ನಾವೆಲ್ಲ ಊಟ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಕ್ಷೇತ್ರದಲ್ಲಿ ಕರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ನಿತ್ಯ ಒಂದಿಲ್ಲೊಂದು ಕಾರ್ಯದ ಮೂಲಕ ಗಮನ ಸೆಳೆಯುತ್ತಿರುವ ಶಾಸಕರು ಶುಕ್ರವಾರ ಅರಬಗಟ್ಟೆ ಗ್ರಾಮದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಮೃತ್ಯುಂಜಯ, ಧನ್ವಂತರಿ ಹೋಮ ನಡೆಸಿ ನಾಲ್ಕು ಸಾವಿರ ಹೋಳಿಗೆ ಮಾಡಿಸಿ ಸಿಹಿಯೂಟದ ವ್ಯವಸ್ಥೆ ಮಾಡಿಸಿದ್ದರು. ಖುದ್ದು ರೇಣುಕಾಚಾರ್ಯ ದಂಪತಿ ಈ ಕಾರ್ಯದಲ್ಲಿ ಉಪಸ್ಥಿತರಿದ್ದರು.ಇದನ್ನೂ ಓದಿರಿಅಂಕಲ್​… ಪ್ಲೀಸ್​ ಹೆಲ್ಪ್​ ಮಾಡ್ತೀರಾ? ಮಕ್ಕಳಿಗೇಕೆ ಕರೊನಾ ಭಯ? ಇಲ್ಲಿದೆ ವೈದ್ಯರ ಅಭಯ!
ಹೋಮ, ಹವನ ಮಾಡಿದ್ದಕ್ಕೆ ಶಾಸಕರ ವಿರುದ್ಧ ಪ್ರಕರಣ ದಾಖಲಿಸಲು ತಹಸೀಲ್ದಾರ್​​ ಮುಂದಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ತಾಲೂಕು ಆಡಳಿತದ ವಿರುದ್ಧ ಸೋಂಕಿತರು ಆಕ್ರೋಶ ಹೊರಹಾಕಿದ್ದಾರೆ. ರೇಣುಕಾಚಾರ್ಯ ಇಲ್ಲದೇ ಇದ್ದಾಗ ಕೋವಿಡ್​ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆ ಸರಿಯಾಗಿರುವುದಿಲ್ಲ. ಸರಿಯಾದ ಸಮಯಕ್ಕೆ ಊಟದ ವ್ಯವಸ್ಥೆಯೂ ಇರುವುದಿಲ್ಲ. ನಮ್ಮ ಅನುಕೂಲಕ್ಕೆಂದು ಸದಾ ನಮ್ಮ ಜತೆಗಿರುವ ಶಾಸಕ ವಿರುದ್ಧ ದೂರು ದಾಖಲಿಸಲು ಮುಂದಾದ ತಹಸೀಲ್ದಾರ್ ಸ್ಥಳಕ್ಕೆ ಬರಬೇಕು. ಅಲ್ಲಿಯವರೆಗೂ ಊಟ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಮಾಜಿ ಶಾಸಕ ಶಾಂತನಗೌಡರ ಕುಮ್ಮಕ್ಕಿನಿಂದ ಶಾಸಕರ ವಿರುದ್ಧ ತಹಸೀಲ್ದಾರ್ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ಕರೊನಾ ಸೋಂಕಿತರು ಗಂಭೀರ ಆರೋಪ ಮಾಡಿದರು.

ಸ್ಥಳಕ್ಕೆ ಬಂದ ರೇಣುಕಾಚಾರ್ಯ, ನನ್ನ ಮಾತಿಗೆ ಬೆಲೆ ಇಲ್ಲವೇ? ಪ್ರತಿಭಟನೆ ನಿಲ್ಲಿಸಿ ಹೋಗಿ ಊಟ ಮಾಡಿ ಮಲಗಿ ಎಂದು ಮನವಿ ಮಾಡಿದರು. ನಮ್ಮ ಕಷ್ಟಕ್ಕೆ ನಿಮ್ಮನ್ನು ಬಿಟ್ಟು ಯಾರಣ್ಣ ಆಗಿದ್ದಾರೆ. ನಿಮ್ಮ ಮಾತಿಗೆ ಬೆಲೆ ಕೊಡದೆ ಯಾರಗೆ ಕೊಡೋದು ಹೇಳಿ? ಕರೊನಾ ಸೋಂಕಿತರ ಸಹಾಯಕ್ಕೆ ನಿಂತ ನಿಮ್ಮ ಮೇಲೆಯೇ ಕೇಸ್​ ದಾಖಲಿಸೋಕೆ ಯಾವುದೇ ಕಾರಣಕ್ಕೂ ಬಿಡಲ್ಲಣ್ಣಾ… ಎನ್ನುತ್ತಾ ಪ್ರತಿಭಟನಾನಿರತರು ಜಾಗಬಿಟ್ಟು ಕದಲಲಿಲ್ಲ. ಕೊನೆಗೆ ಶಾಸಕು ಕೈ ಮುಗಿದು ಮನವಿ ಮಾಡಿದ್ದಕ್ಕೆ ಪ್ರತಿಭಟನೆ ಬಿಟ್ಟು ವಾರ್ಡ್​ನ ಒಳಗೆ ಹೋದರು.
ನಾನು ರೇಣುಕಾಚಾರ್ಯರ ಪತ್ನಿ ಆಗಿದ್ದು ಹಲವು ಜನ್ಮದ ಪುಣ್ಯ… ಮನಬಿಚ್ಚಿ ಮಾತನಾಡಿದ ಹೊನ್ನಾಳಿ ಶಾಸಕರ ಪತ್ನಿ

ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

ಬಾವಿಗೆ ಹಾರಿ ಪ್ರಾಣಬಿಟ್ಟ ಗಂಡ, ಮನೆಯ ಮೇಲೆ ನೇಣಿಗೆ ಕೊರಳೊಡ್ಡಿದ ಪತ್ನಿ! ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ

ಕಂದನ ಹೊತ್ತುಕೊಂಡು 90 ಕಿ.ಮೀ. ನಡೆದಳು ಈ ತಾಯಿ: ಕಾರಣವಂತೂ ವಿಚಿತ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
