ಕೋಲಾರ:ಕರೊನಾ ನೀನೆಷ್ಟು ಕ್ರೂರಿ… ಎಂದು ಪದೇಪದೆ ಶಪಿಸುವಂತೆ ದುರ್ಘಟನೆಗಳು ಸಂಭವಿಸುತ್ತಲೇ ಇದೆ. ಲೆಕ್ಕವಿಲ್ಲದಷ್ಟು ಸಾವು-ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಇಡೀ ಕುಟುಂಬವೇ ಕರೊನಾಗೆ ಬಲಿಯಾದ, ತಂದೆ-ಮಗ, ತಾಯಿ-ಮಗ, ತಾಯಿ-ಮಗು… ಹೀಗೆ ಒಟ್ಟಾಗಿ ಸಾಯುತ್ತಿರುವುದು ಮನಕಲಕುತ್ತಿವೆ.
ಇಂತಹದ್ದೇ ಮತ್ತೊಂದು ಸಾವು ಕೋಲಾರದಲ್ಲಿ ಸಂಭವಿಸಿದೆ. ಮುಳಬಾಗಿಲು ಪಟ್ಟಣದ ಜೆಮಿನಿ ಫೋಟೋ ಸ್ಟುಡಿಯೋ ಮಾಲೀಕ ರಮೇಶ್ (46) ಮತ್ತು ಇವರ ಪತ್ನಿ ಅನಸೂಯಾ(41) ಮಹಾಮಾರಿ ಕರೊನಾಗೆ ಬಲಿಯಾಗಿದ್ದು, ಸಾವಲ್ಲೂ ದಂಪತಿ ಒಂದಾಗಿದ್ದಾರೆ.
ಮೂರು ದಿನದ ಹಿಂದೆ ದಂಪತಿಗೆ ಕರೊನಾ ಪಾಸಿಟಿವ್ ಬಂದಿತ್ತು. ಕೋಲಾರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು(ಬುಧವಾರ) ಇಬ್ಬರೂ ಮೃತಪಟ್ಟಿದ್ದಾರೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ

ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

ಲಾಕ್​ಡೌನ್​ ಹಿನ್ನೆಲೆ ರಾತ್ರೋರಾತ್ರಿ ಸ್ವಗ್ರಾಮಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಮಾರ್ಗಮಧ್ಯೆ ನಾಲ್ವರು ದುರ್ಮರಣ

PHOTOS| ಜನತಾ ಕರ್ಫ್ಯೂ: ಇಡೀ ಬೆಂಗಳೂರು ಸ್ತಬ್ಧ, ಲಾಕ್​ ಆದರೂ ಗುಳೇ ತಪ್ಪಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
