ಬೆಂಗಳೂರು:ನಾವು ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡುವಂತೆ ಕೇಳಿದ್ದೆವು. ನೆಪಮಾತ್ರಕ್ಕೆ ಮಾಡಿದ್ದಾರಷ್ಟೆ. ಆದರೆ ಈ ಪ್ಯಾಕೇಜ್​ ಯಾವುದಕ್ಕೂ ಸಾಲುವುದಿಲ್ಲ. ಇದು ಬಡಜನರ ಪರವಾಗಿ ಇರುವ ಸರ್ಕಾರ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ವಾಗ್ದಾಳಿ ನಡೆಸಿದ್ದಾರೆ.
ಕರೊನಾ ಲಾಕ್​ಡೌನ್​ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಬಡವರ್ಗದ ಜನರ ಅನುಕೂಲಕ್ಕಾಗಿ ಸಿಎಂ ಯಡಿಯೂರಪ್ಪ 1,250 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್​ ಘೋಷಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಈ ಪ್ಯಾಕೇಜ್​ನಲ್ಲಿ ಕೃಷಿಕರನ್ನು ಕಡೆಗಣಿಸಲಾಗಿದೆ. ರೈತರಿಗೆ ಯಾವುದೇ ಸಹಾಯಧನ ಕೊಟ್ಟಿಲ್ಲ. ಬೆಳೆ ಹಾನಿ ಬಗ್ಗೆ ಸರ್ವೇ ಕಾರ್ಯ ಆಗಬೇಕಿದೆ. ಪಡಿತರ ವಿತರಣೆ ಬಗ್ಗೆಯೂ ಗೊಂದಲ ಇದೆ. ಕರೊನಾ ವಾರಿಯರ್ಸ್ ಆಗಿ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ ಎಂದು ಕಿಡಿಕಾರಿದರು. ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತ ಊಟ ಕೊಡುತ್ತಿದ್ದಾರೆ. ಇದಕ್ಕೂ ಆಧಾರ್​ ಕಾರ್ಡ್​ ತರಬೇಕು ಅಂತಿದ್ದಾರೆ ಎಂದು ಡಿಕೆಶಿ ಟೀಕಿಸಿದರು.
ಕರೊನಾ ಹಿನ್ನೆಲೆ ವಿಶೇಷ ಪ್ಯಾಕೇಜ್​ ಘೋಷಿಸಿದ ಸಿಎಂ ಯಡಿಯೂರಪ್ಪ! ಯಾರಿಗೆಲ್ಲ ಸಹಾಯಧನ? ಇಲ್ಲಿದೆ ಡಿಟೇಲ್ಸ್​

ತಾಯಿ ಗರ್ಭದಿಂದ ಮಗುವಿನ ಕಾಲು ಹೊರ ಬಂದಿದೆ.. ಯಾರಾದರೂ ಹೆರಿಗೆ ಮಾಡಿ… ಆಸ್ಪತ್ರೆ ಬಾಗಿಲಲ್ಲಿ ಕುಟುಂಬಸ್ಥರ ಆಕ್ರಂದನ

ವಿವಾಹಿತೆ ಜತೆ ಪರಪುರುಷನ ಕಾಮದಾಟ! 5 ವರ್ಷದ ಅಕ್ರಮ ಸಂಬಂಧಕ್ಕೆ ಬಿತ್ತು ಮೂವರ ಹೆಣ

ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಕರೊನಾ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:4 × five =
Remember me
