ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿರೋಧಿಸುವುದಕ್ಕಾಗಿ ಕರೊನಾ ಲಸಿಕೆ ವಿರುದ್ಧ ಅಪಪ್ರಚಾರ ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವು ತಪ್ಪೊಪ್ಪಿಕೊಂಡು ದೇಶದ ಜನರ ಬಳಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಸಪ್ತ ಸಚಿವರ ವಸತಿ ಸಮುಚ್ಚಯದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರವಿ, ಮೋದಿ ವ್ಯಾಕ್ಸಿನ್ ಎಂದು ಹೀಗೆಳೆದರು. ವಿಜ್ಞಾನಿಗಳ ಬಗ್ಗೆ ಅಪನಂಬಿಕೆ ಸೃಷ್ಟಿಸಿದರು. ವೈದ್ಯರು ಸೇರಿದಂತೆ ಮುಂಚೂಣಿ ಸೇನಾನಿಗಳ ಆರೋಗ್ಯದ ಹಿತದೃಷ್ಟಿಯಿಂದ ಮೊದಲ ಆದ್ಯತೆ ನೀಡಿದರೆ ಮೋದಿ ಮೊದಲು ಲಸಿಕೆ ಚುಚ್ಚಿಸಿಕೊಳ್ಳಲಿ ಎಂದು ನಂಬಿಕೆ ಇಲ್ಲವೆಂಬ ರೀತಿಯಲ್ಲಿ ವರ್ತಿಸಿದರು. ನಂತರ ಸದ್ದಿಲ್ಲದೆ ಹೋಗಿ ಕದ್ದುಮುಚ್ಚಿ ಲಸಿಕೆ ಹಾಕಿಸಿಕೊಂಡರು. ಕಳೆದ 50 ವರ್ಷಗಳಲ್ಲಿ ಒಂದು ಲಸಿಕೆ ಹೊರ ಬರಲಿಲ್ಲ. ಆದರೆ, ಮೋದಿ ಅವರು ಒಂದು ವರ್ಷದಲ್ಲಿ ಎರಡು ಕರೊನಾ ಲಸಿಕೆ ನಿರೋಧಕ ಸಂಶೋದನೆ, ಉತ್ಪಾದನೆಗೆ ಒತ್ತಾಸೆಯಾಗಿ ನಿಂತರು ಎಂದು ಹೇಳಿದರು.
ಇಬ್ಬಗೆ ನೀತಿ:ಇದೀಗ ಕಾಂಗ್ರೆಸ್ ನಾಯಕರು ಲಸಿಕೆ ವಿರೋಧಿಸಿದ್ದಿಲ್ಲ, ಎಲ್ಲರಿಗೂ ಲಸಿಕೆ ಕೊಡಿ ಎಂದು ಒತ್ತಾಯಿಸುವ ಮೂಲಕ ಇಬ್ಬಗೆ ನೀತಿ ಪ್ರದರ್ಶಿಸುತ್ತಿದ್ದಾರೆ. ಲಸಿಕೆ ವಿಚಾರವಾಗಿ ಮಾಜಿ ಸಚಿವ ಯು.ಟಿ.ಖಾದರ್ ಅವರಿಂದ ಹಿಡಿದು ಯಾರು ಏನು ಮಾತನಾಡಿದರು ಎಂಬ ದಾಖಲೆಗಳಿವೆ. ದೇಶ, ದೇಶದ ವಿಜ್ಞಾನಿಗಳನ್ನು ಅಪಮಾನಿಸಿ, ಜನರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಿದರು ಎಂದು ಸಿ.ಟಿ.ರವಿ ಕಿಡಿಕಾರಿದರು.
ವ್ಯವಸ್ಥಿತ ಅಪಪ್ರಚಾರ:ಪರಿಸ್ಥಿತಿಯ ದುರ್ಲಾಭ ಪಡೆದು, ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಹವಣಿಸಿದೆ. ಚೀನಾ ವೈರಸ್ ಎಂದು ಹೇಳುವ ಧೈರ್ಯವಿಲ್ಲದೆ ಮೋದಿ ಸ್ಟ್ರೈನ್, ಇಂಡಿಯನ್ ಸ್ಟ್ರೈನ್ ಎಂದು ಹೇಳುವ ಮೂಲಕ ಜಾಗತಿಕವಾಗಿ ದೇಶದ ಘನತೆ-ಗೌರವಕ್ಕೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ ಎಂದು ಸಿ.ಟಿ.ರವಿ ದೂರಿದರು.
ಪೊಲೀಸ್​ ದಂಪತಿ ಬದುಕಿಗೆ ಕೊಳ್ಳಿ ಇಟ್ಟ ಕರೊನಾ, ಪತ್ನಿ ಆಸ್ಪತ್ರೆಗೆ ಸೇರುತ್ತಿದ್ದಂತೆ ಪತಿಗೆ ಹೃದಯಾಘಾತ! ಮುಂದೆ ಆಗಿದ್ದೆಲ್ಲವೂ ದುರಂತ
ತಾಯಿ ಗರ್ಭದಿಂದ ಮಗುವಿನ ಕಾಲು ಹೊರ ಬಂದಿದೆ.. ಯಾರಾದರೂ ಹೆರಿಗೆ ಮಾಡಿ… ಆಸ್ಪತ್ರೆ ಬಾಗಿಲಲ್ಲಿ ಕುಟುಂಬಸ್ಥರ ಆಕ್ರಂದನ
ಈ ಫೋಟೋ ಕ್ಲಿಕ್ಕಿಸಿದ್ದ ನೇತ್ರರಾಜು ಇನ್ನಿಲ್ಲ, ಬದುಕಿದ್ದಾಗ ತೆಗೆದ ಅದ್ಭುತ ಚಿತ್ರಗಳು ಇಲ್ಲಿವೆ
ಕೋವಿಡ್​ಗೆ ಗಂಡ ಬಲಿ, 4 ದಿನದ ಬಳಿಕ ಮನೆಯಲ್ಲೇ ದುರಂತ ಅಂತ್ಯ ಕಂಡ ಗರ್ಭಿಣಿ ಪತ್ನಿ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 12 =
Remember me
