ಬಳ್ಳಾರಿ:ಕರೊನಾ ವಾಕ್ಸಿನ್​ ಹಾಕಿಸಿಕೊಳ್ಳಲು ನಿತ್ಯ ಸಾವಿರಾರು ಮಂದಿ ಆಸ್ಪತ್ರೆ ಬಾಗಿಲ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಲಸಿಕೆ ಸಿಕ್ಕರೆ ಸಾಕಪ್ಪಾ.. ಎಂದು ಲೆಕ್ಕವಿಲ್ಲದಷ್ಟು ಮಂದಿ ಮನಸಲ್ಲೇ ದೇವರಿಗೆ ಪ್ರಾರ್ಥಿಸುತ್ತಿದ್ದಾರೆ. ಆದರೆ ಈ ಊರಲ್ಲಿ ವ್ಯಾಕ್ಸಿನ್​ ಹಾಕಲು ಮನೆ ಬಾಗಿಲಿಗೆ ಆರೋಗ್ಯ ಸಿಬ್ಬಂದಿ ಬರುತ್ತಿದ್ದಂತೆ ಹಲವರು ನೆಪ ಹೇಳಿ ತಪ್ಪಿಸಿಕೊಂಡಿದ್ದಾರೆ. ಆದರೂ ಅವರನ್ನ ಹುಡುಕಿ ಅವರಿರುವಲ್ಲೇ ಬೇಡ ಎಂದರೂ ಲಸಿಕೆ ಹಾಕಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಅರೆ, ಇದ್ಹೇನಿದು ಕರೊನಾ ಸಂಕಷ್ಟಕಾಲದಲ್ಲಿ ಲಕ್ಷಾಂತರ ಮಂದಿ ಲಸಿಕೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅಂತಹದ್ದರಲ್ಲಿ ಆರೋಗ್ಯ ಸಿಬ್ಬಂದಿಯೇ ಬಂದು ಲಸಿಕೆ ಹಾಕ್ತಾರಾ? ಎಂಬ ಆಶ್ಚರ್ಯ ಮನದಲ್ಲಿ ಮೂಡುವುದು ಸಹಜ. ಹೌದು, ಇದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದರೋಜಿ ಹಾಗೂ ಕರೆಕುಪ್ಪ ಗ್ರಾಮದ ನೈಜನೋಟ. ಈ ಗ್ರಾಮದ ಬಹುತೇಕರು ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಆರೋಗ್ಯ ಸಿಬ್ಬಂದಿಯೇ ವ್ಯಾಕ್ಸಿನ್ ಹಾಕಲು ಮನೆ ಬಾಗಿಲಿಗೆ ಹೋದರೂ ತಪ್ಪಿಸಿಕೊಂಡು ಹೊಲದತ್ತ ಹೋಗಿಬಿಡುತ್ತಿದ್ದರು.
ಕೊನೆಗೆ ಆರೊಗ್ಯ ಸಿಬ್ಬಂದಿ ಹೊಲಗಳಿಗೇ ಹೋಗಿ ಆ ಜನರನ್ನ ಹುಡುಕಿ ಅಲ್ಲೇ ವ್ಯಾಕ್ಸಿನ್ ಹಾಕಿದ್ದಾರೆ. ಕೆಲವರು ಲಸಿಕೆ ಬೇಡ ಎಂದು ಹಠ ಮಾಡಿದ್ದು, ಅವರ ಮನವೊಲಿಸಿ ವ್ಯಾಕ್ಸಿನ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಸಾವಿಗೂ 4 ದಿನ ಮೊದಲೇ ಸಂಚಾರಿ ವಿಜಯ್​ ಬರೆದಿದ್ದ ಈ ಬರಹ ಓದಿದ್ರೆ ಕಣ್ಣು ತುಂಬಿ ಬರುತ್ತೆ

5 ದಿನದ ಬಾಣಂತಿ ಕರೊನಾಗೆ ಬಲಿ! ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ.. 3 ಮಕ್ಕಳನ್ನ ತಬ್ಬಲಿ ಮಾಡಿಬಿಟ್ಟೆಯಲ್ಲ…

ಕೆಲಸಕ್ಕಾಗಿ ಮನೆಗೆ ಬಂದ ಯುವತಿಗೆ ಗ್ರಾಪಂ ಸದಸ್ಯ ಹೀಗಾ ಮಾಡ್ಹೋದು? ಈ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕ್ತೀರಿ

ಕಲಬುರಗಿಯಲ್ಲಿ ಪ್ರೇಯಸಿ ಹಂತಕ ರವಿ ಪೂಜಾರಿ ಭೀಕರ ಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
