ಬೆಂಗಳೂರು:ಬಿ.ಎಸ್.ಯಡಿಯೂರಪ್ಪರ ಕಾಲದಲ್ಲಿ ರಾಜ್ಯಮಟ್ಟದ ನಿಗಮ- ಮಂಡಳಿ- ಪ್ರಾಧಿಕಾರಗಳಿಗೆ ನೇಮಕವಾಗಿದ್ದ ಅಧ್ಯಕ್ಷರ-ಉಪಾಧ್ಯಕ್ಷರ ನಾಮನಿರ್ದೇಶನವನ್ನ ರದ್ದು ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಬಿಎಸ್​ವೈ ಬೆಂಬಲಿಗರಲ್ಲಿ ಮೂವರನ್ನ ಉಳಿಸಿಕೊಳ್ಳಲಾಗಿದೆ. ಈ ಆದೇಶ ಇಂದೇ ಜಾರಿಯಾಗಿದೆ. ಜು.14ರಂದು ಹೊಸ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಪಟ್ಟಿ ಪ್ರಕಟವಾಗಲಿದೆ.
ನಿಗಮ-ಮಂಡಳಿ-ಪ್ರಾಧಿಕಾರಕ್ಕೆ ನಡೆದಿದ್ದ ನಾಮನಿರ್ದೇಶನ ರದ್ದತಿಯ ಹಠಾತ್ ಪ್ರಕ್ರಿಯೆಯು ಆಡಳಿತಾರೂಢ ಭಾರತೀಯ ಜನತಾ ಪಕ್ಷದಲ್ಲಿ ಸಂಚಲನ ಹುಟ್ಟು ಹಾಕಿದ್ದು,   ಅತೃಪ್ತಿಯ ಹೊಗೆಯಾಡಲು ಪುಷ್ಠಿ ನೀಡಿದೆ. ಜತೆಗೆ ಕುತೂಹಲವನ್ನೂ ಮೂಡಿಸಿದೆ. ಹೊಸ ನಿಗಮ ಮಂಡಳಿಗಳ ನೇಮಕದ‌ ಹಿಂದೆ ಮುಂಬರುವ ವಿಧಾನಸಭಾ ಚುನಾವಣೆಯ ಲೆಕ್ಕಾಚಾರ ಅಡಗಿದ್ದು, ತಳಮಟ್ಟದ ಕಾರ್ಯಕರ್ತರು ಹಾಗೂ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಹೊಸ ಪಟ್ಟಿಯಲ್ಲಿ ಸ್ಥಾನ ನೀಡುವ ಸಾಧ್ಯತೆ ಎಂಬ ಚರ್ಚೆ ಶುರುವಾಗಿದೆ.
ಈ ಹಿಂದೆ ನಿಗಮ-ಮಂಡಳಿ- ಪ್ರಾಧಿಕಾರಗಳ ಅಧ್ಯಕ್ಷರ-ಉಪಾಧ್ಯಕ್ಷರ ನೇಮಕದಲ್ಲಿ ಬಿಎಸ್​ವೈ ಬೆಂಬಲಿಗರಿಗೆ ಮಣೆ ಹಾಕಲಾಗಿತ್ತು ಎಂಬ ಆರೋಪ ಇತ್ತು. ಇದೀಗ ಆರ್​ಎಸ್​ಎಸ್ ತಿರ್ಮಾನದಂತೆ ನಿಷ್ಟಾವಂತ ಕಾರ್ಯಕರ್ತರಿಗೆ ಮಣೆ ಹಾಕುವ ಯೋಜನೆ ಇದೆ ಎಂಬ ಮಾತೂ ಕೇಳಿಬರುತ್ತಿದೆ. ಇನ್ನು ನಿಗಮ- ಮಂಡಳಿ- ಪ್ರಾಧಿಕಾರಗಳಿಗೆ ಈ ಹಿಂದೆ ನಡೆದಿದ್ದ ನೇಮಕಾತಿಯನ್ನ ರದ್ದು ಮಾಡುವ ವಿಚಾರವಾಗಿ ಇತ್ತೀಚಿಗೆ ನಳಿನ್​ ಕುಮಾರ್​ ಕಟೀಲ್​ ಅವರು ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿ ಚರ್ಚಿಸಿದ್ದರು. ಅವರ ಅನುಮತಿಯನ್ನೂ ಪಡೆದಿದ್ದರು ಎನ್ನಲಾಗಿದೆ. ಬಿಎಸ್​ವೈ ಬೆಂಬಲಿಗರಲ್ಲಿ ಅರಣ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ತಾರಾ, ಕ್ರೆಡಲ್‌ ಅಧ್ಯಕ್ಷ ರುದ್ರೇಶ್, ಕೆಎಸ್​ಟಿಡಿಎಸ್​ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಅವರನ್ನ ಉಳಿಸಿಕೊಳ್ಳಲಾಗಿದೆ. ಈ ಮೂವರ ಪರವಾಗಿ ಸಿಎಂ ಬಳಿ ಬಿಎಸ್​ವೈ ಮಾತನಾಡಿದ್ದು, ತಾರಾ, ರುದ್ರೇಶ್​, ಸಿದ್ದಲಿಂಗಸ್ವಾಮಿ ಅವರು ಮುಂದುವರಿಯಲಿದ್ದಾರೆ.
ಸಂಪುಟ ಪುನಾರಚನೆ ಬದಲು ನಿಗಮ ಮಂಡಳಿಯಲ್ಲಿ ಬದಲಾವಣೆ ಮಾಡಿ, ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕೊಟ್ಟು ಸಮಾಧಾನ‌ ಪಡಿಸುವ ಲೆಕ್ಕಾಚಾರದಲ್ಲಿರುವ ರಾಜ್ಯ ಸರ್ಕಾರ, ಕೆಲ ಶಾಸಕರಿಗೂ ಅವಕಾಶ ನೀಡಬಹುದು.
ಇವರು ನಮ್ಮ ಪಕ್ಷದ ಕಾರ್ಯಕರ್ತ, ಇವರ ಕಾರನ್ನು ಹಿಡಿದು ತೊಂದರೆ ಕೊಡಬಾರದು: ಬಿಜೆಪಿ MLA ಶಿಫಾರಸು

ಬಜರಂಗದಳ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ: ಹರ್ಷನ ಶವಯಾತ್ರೆಯಲ್ಲಿ ಪಾಲ್ಗೊಂಡದ್ದೇ ತಪ್ಪಾಯ್ತಾ?

ದಾಂಡೇಲಿಯಲ್ಲಿ ಮಗನಿಂದಲೇ ತಾಯಿ ಮೇಲೆ ಅತ್ಯಾಚಾರ: ಒಂದೇ ದಿನ 2 ಬಾರಿ ಬಲತ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − seven =
Remember me
