ಶ್ರವಣಬೆಳಗೊಳ:ಬೆಂಗಳೂರಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಶಿಕ್ಷಕಿಯೊಬ್ಬರ ಮೇಲೆ ಲಾರಿ ಹರಿದು ಶಿಕ್ಷಕಿ ಮೃತಪಟ್ಟ ದುರ್ಘಟನೆ ಮಾಸುವ ಮುನ್ನವೇ ಮತ್ತೊಂದು ಇಂತಹದ್ದೇ ಘಟನೆ ರಾಜ್ಯದಲ್ಲಿ ಸಂಭವಿಸಿದ್ದು, ದಂಪತಿ ದುರಂತ ಅಂತ್ಯಕಂಡಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್​.ಪೇಟೆ ತಾಲೂಕಿನ ಅಣ್ಣೇಚಾಕನಹಳ್ಳಿ ಗ್ರಾಮದ ದಂಪತಿ ಧನಂಜಯ (45) ಮತ್ತು ಕಾಮಿನಿ (35) ಮೃತ ದುರ್ದೈವಿಗಳು. ಇವರ ಪುತ್ರ ರತ್​ಗೌಡ (15) ತೀವ್ರವಾಗಿ ಗಾಯಗೊಂಡಿದ್ದಾನೆ.
ಬೆಂಗಳೂರಿಗೆ ಬುಧವಾರ ಮಧ್ಯಾಹ್ನ ಮಗನ ಜತೆ ದಂಪತಿ ಬೈಕ್​ನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ದಮ್ಮನಿಂಗಳ ಗ್ರಾಮದ ರಚನಾ ಶಾಲೆ ಬಳಿ ರಸ್ತೆಬದಿಯ ಗುಂಡಿ ಮೇಲೆ ಬೈಕ್​ ಚಲಿಸಿದ್ದು, ಆಯತಪ್ಪಿ ಮೂವರೂ ಕೆಳಕ್ಕೆ ಬಿದ್ದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಕಾಮಿನಿ ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಧನಂಜಯರನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದರು. 15 ವರ್ಷದ ಬಾಲಕ ರತ್​ಗೌಡ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಶ್ರವಣಬೆಳಗೊಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡ್ಡ ಬಂದ ಹಾವನ್ನು ತಪ್ಪಿಸಲು ಹೋಗಿ ನಾಲೆಗೆ ಬಿದ್ದ ಕಾರು! ಗಂಡನ ಕಣ್ಣೆದುರಲ್ಲೇ ಪತ್ನಿ ದುರ್ಮರಣ, ಬೆಚ್ಚಿಬಿದ್ದ ಸ್ಥಳೀಯರು

4 ವರ್ಷದಿಂದ ಅಪ್ಪ ಲೈಂಗಿಕವಾಗಿ ಹಿಂಸಿಸ್ತಿದ್ದಾನೆ, ಈ ನರಕ ಸಹಿಸೋಕೆ ಆಗ್ತಿಲ್ಲಮ್ಮ… ಶಿವಮೊಗ್ಗದಲ್ಲಿ ತಾಯಿ-ಮಗಳ ನರಳಾಟ

ವಿದೇಶದಲ್ಲಿರುವೆ, ಬೆಂಗಳೂರಿಗೆ ಬಂದು ಮದ್ವೆ ಆಗ್ತೀನಿ… ಎಂದು ಯುವತಿಗೆ ಆಸೆ ಹುಟ್ಟಿಸಿದವ ಮಾಡಬಾರದು ಮಾಡಿಬಿಟ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + six =
Remember me
