ಚಾಮರಾಜನಗರ:ಜಿಲ್ಲೆಯಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕರೊನಾ ಗಂಡ-ಹೆಂಡತಿ ಇಬ್ಬರನ್ನು ಬಲಿ ಪಡೆದು 4 ವರ್ಷದ ಮಗಳನ್ನು ಅನಾಥೆ ಮಾಡಿದೆ.
ತಾಲೂಕಿನ ಕೊತ್ತಲವಾಡಿ ಗ್ರಾಮದ ಗುರುಪ್ರಸಾದ್ ಮತ್ತು ರಶ್ಮಿ ದಂಪತಿ ಕೋವಿಡ್​ನಿಂದ ಮೃತಪಟ್ಟಿದ್ದು, 4 ವರ್ಷದ ಮಗಳು ಸುಧಾರಾಣಿ ಅನಾಥೆಯಾಗಿದ್ದಾಳೆ.
ಗುರುಪ್ರಸಾದ್ ಕಳೆದ ಐದು ದಿ‌ನಗಳ ಹಿಂದೆ ಆಸ್ಪತ್ರೆಯಲ್ಲಿ ಕೋವಿಡ್​ನಿಂದ ಮೃತಪಟ್ಟಿದ್ದರು. ಗಂಡನ ಅಂತ್ಯ ಸಂಸ್ಕಾರದ ಧಾರ್ಮಿಕ ಕಾರ್ಯ ಮಾಡಿ ರೋಗ ಲಕ್ಷಣ‌ ಕಂಡು ಬಂದ ಹಿನ್ನೆಲೆ ಆಸ್ಪತ್ರೆ ಸೇರಿದ್ದ ರಶ್ಮಿ ಕೂಡ ಮೃತಪಟ್ಟರು. ರಶ್ಮಿಯ ತಂದೆ-ತಾಯಿಗೂ ಕೋವಿಡ್ ಪಾಸಿಟಿವ್ ಆಗಿದೆ. ಅವರೂ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಧಾರಾಣಿ ಸದ್ಯ ತನ್ನ ಚಿಕ್ಕಪ್ಪನ ಆಶ್ರಯದಲ್ಲಿದ್ದಾಳೆ.
ಹೆತ್ತವರನ್ನ ಕಳೆದುಕೊಂಡರೂ ಇದ್ಯಾವುದರ ಪರಿವೇ ಇಲ್ಲದ ಕಂದಮ್ಮ ಚಿಕ್ಕಪ್ಪನ ಮನೆಯಲ್ಲಿ ಆಟವಾಡಿಕೊಂಡಿದೆ. ಅಪ್ಪ-ಅಮ್ಮ ಎಲ್ಲೋ ಹೋಗಿದ್ದಾರೆ, ಆಮೇಲೆ ಬರುತ್ತಾರೆ ಎಂದುಕೊಂಡು ತನ್ನಷ್ಟಕ್ಕೆ ತಾನು ಆಟವಾಡಿಕೊಂಡಿದ್ದ ದೃಶ್ಯ ಮನಕಲಕುವಂತಿತ್ತು.
ಏಣಿ ಮೇಲೆ ಶವ ಇಟ್ಟುಕೊಂಡು ಬೈಕ್​ನಲ್ಲಿ ಸಾಗಿಸಿ ಅಂತ್ಯಕ್ರಿಯೆ! ಗ್ರಾಮಸ್ಥರ ಅಮಾನವೀಯ ವರ್ತನೆ ಕೇಳಿದ್ರೆ ಬೆಚ್ಚಿಬೀಳ್ತೀರಿ

ಕರೊನಾಗೆ ಬಾಣಂತಿ ಬಲಿ! ಅವಳ ಚಿತೆಯಲ್ಲೇ ನನ್ನನ್ನೂ ಸುಟ್ಟುಹಾಕಿ … ಎಂದವ ವಿಷ ಕುಡಿದು ಆಸ್ಪತ್ರೆ ಆವರಣದಲ್ಲೇ ಒದ್ದಾಡಿದ

ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು

ಕಾಲ್ ​ಗರ್ಲ್​ ಜತೆ ಸೆಕ್ಸ್​​ ಮೂಡ್​ನಲ್ಲಿದ್ದ ಉದ್ಯಮಿ ಪುತ್ರನಿಗೆ ಕಾದಿತ್ತು ಶಾಕ್​! ಕಾಮದಾಟಕ್ಕೆ ಬಂದವಳು ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
