ರಾಮನಗರ:ಮಹಾಮಾರಿ ಕರೊನಾ ಸೃಷ್ಟಿಸುತ್ತಿರುವ ಸಾವು-ನೋವು ಹೇಳತೀರದು. ಪ್ರೀತಿ ಪಾತ್ರರನ್ನ ಕಳೆದುಕೊಂಡವರ ಗೋಳಾಟವನ್ನ ನೋಡಲಾಗುತ್ತಿಲ್ಲ. ಕೆಲವರು ಬದುಕೇ ಮುಗಿಯಿತೆಂದು ಸಾವಿನ ಮನೆಯ ಕದ ತಟ್ಟುತ್ತಿರುವುದಂತೂ ಆತಂಕಕಾರಿ.
ಇಂತಹದ್ದೇ ಕರುಣಾಜನಕ ಘಟನೆಯೊಂದು ರಾಮನಗರ ಜಿಲ್ಲೆ ಕನಕಪುರದ ಬಸವೇಶ್ವರ ನಗರದಲ್ಲಿ ಗುರುವಾರ ಸಂಭವಿಸಿದೆ. ಗಂಡನ ಅಗಲಿಕೆಯ ನೋವನ್ನು ಸಹಿಸಲಾಗದ ಮೂರು ಗರ್ಭಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಸ್ಕಾಂ ಸಹಾಯಕ ಉದ್ಯೋಗಿ ನಂದಿನಿ (28) ಮೃತ ದುರ್ದೈವಿ. ಮೈಸೂರು ಮೂಲದ ಸತೀಶ್​ ಎಂಬಾತನನ್ನು ಪ್ರೀತಿಸಿ 2 ವರ್ಷಗಳ ಹಿಂದೆ ಮದುವೆಯಾಗಿ ಕನಕಪುರದಲ್ಲಿ ಸಂಸಾರ ನಡೆಸುತ್ತಿದ್ದರು. ಸತೀಶ್​ರ ತಾಯಿ ಕರೊನಾ ಸೋಂಕಿನಿಂದ ಮೃತಪಟ್ಟ ಬೆನ್ನಲ್ಲೇ ಸತೀಶ್​ಗೂ ಸೋಂಕು ದೃಢಪಟ್ಟಿತ್ತು. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಾಲ್ಕು ದಿನದ ಹಿಂದೆ ಮೃತಪಟ್ಟಿದ್ದರು.ಇದನ್ನೂ ಓದಿರಿಕರೊನಾ ಲಸಿಕೆಯಲ್ಲೂ ಹಣ ಪೀಕಿದ ವೈದ್ಯೆ! ಈಕೆ ಬಳಿ ವ್ಯಾಕ್ಸಿನ್​ ಪಡೆದವರಿಗೆ ಇಲ್ಲಿದೆ ಶಾಕಿಂಗ್​ ನ್ಯೂಸ್
ಗಂಡನ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಗೊಂಡಿದ್ದ ನಂದಿನಿ ನಾಲ್ಕು ದಿನದ ಬಳಿ ಡೆತ್ ನೋಟ್ ಬರೆದಿಟ್ಟು ಮಧ್ಯಾಹ್ನ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್​ಐ ಕರೊನಾಗೆ ಬಲಿ!

ಪರಸ್ತ್ರೀ ಜತೆ ಯುವಕನ ಸಲ್ಲಾಪ! ಸೆಕ್ಸ್​ ಮಾಡುತ್ತಿರುವಾಗಲೇ ಸಿಕ್ಕಿಬಿದ್ದ ಜೋಡಿ… ಕ್ಷಣಾರ್ಧದಲ್ಲೇ ನಡೆಯಿತು ದುರಂತ

ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + eight =
Remember me
