ಬೆಂಗಳೂರು:ರಾಜ್ಯಸಭಾ ಚುನಾವಣೆಯ 6 ಅಭ್ಯರ್ಥಿಗಳ ಪೈಕಿ ಜೆಡಿಎಸ್​ ಅಭ್ಯರ್ಥಿ ಕುಪೇಂದ್ರರೆಡ್ಡಿ ಅವರೇ ಶ್ರೀಮಂತ. ಇವರು ಘಟಾನುಘಟಿ ನಾಯಕರಿಗೇ ಕೋಟಿ ಕೋಟಿ ಹಣ ಸಾಲ ಕೊಟ್ಟಿದ್ದಾರೆ. ಎಚ್​.ಡಿ.ದೇವೇಗೌಡರ ಕುಟುಂಬವೂ ಇವರಿಂದ ಸಾಲ ಪಡೆದಿದೆ. ನೂರಾರು ಆಸ್ತಿ ಒಡೆಯ ಕುಪೇಂದ್ರರೆಡ್ಡಿ ಅವರು 31.50 ಕೋಟಿಗೂ ಹೆಚ್ಚು ಹಣವನ್ನು ರಾಜ್ಯದ ಜೆಡಿಎಸ್​ ಮತ್ತು ಕಾಂಗ್ರೆಸ್​ನ ಕೆಲ ನಾಯಕರಿಗೆ ಸಾಲವಾಗಿ ಕೊಟ್ಟಿದ್ದಾರೆ.
ಕುಪೇಂದ್ರ ರೆಡ್ಡಿ ಅವರು ಒಟ್ಟು 353.42 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 222,47,60,624 ರೂ. ಮೌಲ್ಯದ ಸ್ತಿರಾಸ್ತಿ ಸೇರಿ 575,89,75,550 ರೂ. ಒಡೆಯರಾಗಿದ್ದಾರೆ. ಕುಪೇಂದ್ರ ರೆಡ್ಡಿ 21,12,381 ರೂ. ನಗದು ಹೊಂದಿದ್ದರೆ, ಅವರ ಪತ್ನಿ ಆರ್.ಪುಷ್ಪಾವತಿ 43,41,108 ರೂ. ಹೊಂದಿದ್ದಾರೆ. ಅವಿಭಕ್ತ ಕುಟುಂಬದಲ್ಲಿ 9,32,408 ರೂ. ನಗದು ಇದೆ.ವಿವಿಧ ಹೂಡಿಕೆಗಳು: ಬಾಂಡ್, ಷೇರು, ಮ್ಯೂಚುವಲ್ ಫಂಡ್​ಗಳಲ್ಲಿ 88.44 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಪತ್ನಿ ಹೆಸರಿನಲ್ಲಿ 9.06 ಲಕ್ಷ ರೂ. ಹೂಡಿಕೆ ಮಾಡಲಾಗಿದೆ. ವೈಯಕ್ತಿಕ ಸಾಲ, ಮುಂಗಡ ಸೇರಿ ಒಟ್ಟು 244.46 ಲಕ್ಷ ರೂ. ಮತ್ತು ಪತ್ನಿ ಹೆಸರಿನಲ್ಲಿ 242.18 ಲಕ್ಷ ರೂ. ಹಾಗೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ 43.95 ಲಕ್ಷ ರೂ. ಇದೆ. 1 ಆಡಿ ಹಾಗೂ 2 ಟೊಯೋಟಾ ಫಾರ್ಚುನರ್ ಕಾರುಗಳನ್ನು ಹೊಂದಿದ್ದು, ಅವುಗಳ ಒಟ್ಟು ಮೌಲ್ಯ 1.35 ಕೋಟಿ ರೂ.ಗಳಾಗಿದೆ. ರೆಡ್ಡಿ ಬಳಿ 1.74 ಕೋಟಿ ರೂ. ಮೌಲ್ಯದ ಚಿನ್ನಾಭರಣವಿದ್ದರೆ, ಅವರ ಪತ್ನಿ ಹೆಸರಿನಲ್ಲಿ 3.51 ಕೋಟಿ ರೂ. ಬೆಲೆಯ ಚಿನ್ನಾಭರಣಗಳಿವೆ.
576 ಕೋಟಿ ರೂ. ಆಸ್ತಿ ಒಡೆಯ ಕುಪೇಂದ್ರ ರೆಡ್ಡಿ: ರಾಜ್ಯಸಭಾ ಅಖಾಡಕ್ಕಿಳಿದ 6 ಜನರ ಆಸ್ತಿ ವಿವರ ಇಲ್ಲಿದೆ

ಪತ್ನಿಗೆ PSI ಕಿರುಕುಳ: ಬೇರೆ ಸ್ತ್ರೀಯರ ಜತೆ ನನ್ನ ಗಂಡನಿಗೆ ಸಂಪರ್ಕ ಇದೆ, ದಯವಿಟ್ಟು​ ನನಗೆ ನ್ಯಾಯ ಕೊಡ್ಸಿ… ಕಣ್ಣೀರಿಟ್ಟ ಪತ್ನಿ

ಟ್ರಿಪ್ ನೆಪದಲ್ಲಿ ಶಾಸಕ ಗೌರಿಶಂಕರ್ ನಾಪತ್ತೆ! ಜೆಡಿಎಸ್​ಗೆ ತಲೆನೋವಾದ ತುಮಕೂರು ಜಿಲ್ಲೆಯ ಶಾಸಕರಿಬ್ಬರ ನಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − fifteen =
Remember me
