ರಾಮನಗರ:ಜಿಲ್ಲೆಯ ವ್ಯಕ್ತಿಯೊಬ್ಬನಿಗೆ ಅಪರಿಚಿತ ಸುಂದರ ಯುವತಿಯೇ ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ ಮಾಡಿ, ಮಧುರವಾಗಿ ಮಾತಾನಾಡಿದ್ದಾಳೆ. ಇದಾದ ಕೆಲವೇ ಕ್ಷಣದಲ್ಲಿ ವಿಡಿಯೋ ಕಾಲ್​ನಲ್ಲೇ ಬೆತ್ತಲಾಗಿ ಕಾಣಿಸಿಕೊಂಡೂ ನುಲಿದಾಡಿದ್ದಾಳೆ… ಮುಂದೇನಾಯ್ತು ಗೊತ್ತಾ?
ಎರಡು ದಿನದ ಹಿಂದೆ ಮಾಗಡಿಯ ವ್ಯಕ್ತಿಯೊಬ್ಬರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಕರೆ ಬಂದಿದೆ. ಆ ವೇಳೆ ಆತ ಬಿಜಿ ಇದ್ದಿದ್ದರಿಂದ ಕರೆ ಸ್ವೀಕರಿಸಿರಲಿಲ್ಲ. ನಂತರ ತಾನೇ ಸ್ವಲ್ಪ ಹೊತ್ತಿನ ನಂತರ ಕರೆ ಮಾಡಿದ್ದಾನೆ. ಆಗ ಯುವತಿಯೊಬ್ಬಳು ಇಂಗ್ಲಿಷ್‌ನಲ್ಲಿಯೇ ಉಲಿಯತೊಡಗಿದ್ದಳು. ನೋಡಲು ಸುಂದರವಾಗಿದ್ದ ಆ ಯುವತಿ ಕೆಲವು ಸೆಕೆಂಡ್‌ ಮಾತನಾಡಿ ಕರೆಯನ್ನು ಡಿಸ್ಕನೆಕ್ಟ್ ಮಾಡಿದ್ದಾಳೆ. ಮತ್ತೆ ಕರೆ ಮಾಡಿದ ಯುವತಿ ಬೆತ್ತಲಾಗಿ ನುಲಿಯುತ್ತಾ ಆ ವ್ಯಕ್ತಿಯೊಂದಿಗೆ ಮಾತನಾಡಲು ಶುರು ಮಾಡಿದ್ದಾಳೆ.
ಬೆತ್ತಲಾಗಿ ವಿಡಿಯೋ ಕರೆ ಮಾಡಿದ ಆಕೆಗೆ ಈ ವ್ಯಕ್ತಿ ಬಾಯಿಗೆ ಬಂದಂತೆ ಬೈದರೂ ಲೆಕ್ಕಿಸದೆ ಸುಮಾರು 20 ಸೆಕೆಂಡ್‌ಗೂ ಹೆಚ್ಚು ಕಾಲ ಮಾತನಾಡಿ ಕಾಲ್ ಡಿಸ್ಕನೆಕ್ಟ್ ಮಾಡಿದ್ದಾಳೆ. ಇದಾದ ಕೆಲವೇ ಹೊತ್ತಿನಲ್ಲಿ ಈ ವ್ಯಕ್ತಿಯೊಂದಿಗೆ ತಳುಕು ಹಾಕಿಕೊಂಡಿರುವ ಬೆತ್ತಲೆ ಫೋಟೋ, ವಿಡಿಯೋವನ್ನ ವಾಟ್ಸ್​ಆ್ಯಪ್​ ಮೂಲಕ ಕಳುಹಿಸಿದ್ದಾಳೆ. ಅಯ್ಯೋ ಇದೆಂಥ ಅಸಹ್ಯ, ನಾನೆಲ್ಲಿ ಆಕೆಯೊಂದಿಗೆ ಹೋಗಿದ್ದೆ, ಏನಾಯ್ತು ಎಂದು ಆತಂಕಗೊಳ್ಳುವಷ್ಟರಲ್ಲೇ ಅತ್ತಿಂದ ‘ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಮಾನ ಕಳೆಯುತ್ತೇನೆ’ ಎಂದು ಬೆದರಿಕೆಯ ಸಂದೇಶ ಬಂದಿದೆ.ಇದನ್ನೂ ಓದಿರಿಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ
ಇದ್ಯಾವುದಕ್ಕೂ ಜಗ್ಗದ ಆ ವ್ಯಕ್ತಿ ಪೊಲೀಸರನ್ನು ಸಂಪರ್ಕಿಸಿ ರಾಮನಗರ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೌದು, ಸುಂದರ ಹುಡುಗಿಯನ್ನು ಮುಂದಿಟ್ಟುಕೊಂಡು, ಆಕೆಯೊಂದಿಗೆ ಬೆತ್ತಲೆ ವಿಡಿಯೋ ಮೂಲಕ ಯಾಮಾರಿಸಿ ಹಣ ಕೀಳುವ ಗ್ಯಾಂಗ್ ಕಾರ್ಯಾಚರಣೆಗೆ ಇಳಿದಿದೆ. ಮೈಮರೆತರೆ ಖಂಡಿತವಾಗಿ ಮರ್ಯಾದೆಯೊಂದಿಗೆ ಹಣ ಕಳೆದುಕೊಳ್ಳಬೇಕಾದೀತು ಜಾಗ್ರತೆ.
ಫೇಸ್​‌ಬುಕ್, ಇನ್‌ಸ್ಟಾಗ್ರಾಂ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಖಾತೆಯನ್ನು ತೆರೆಯಬೇಕಾದರೆ ನಮ್ಮ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿಯನ್ನು ಸಲ್ಲಿಸುವುದು ಅನಿವಾರ್ಯ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇವುಗಳನ್ನು ಹೈಡ್ ಮಾಡದಿದ್ದರೆ ನಮ್ಮ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿಗಳು ಖದೀಮರಿಗೆ ಸುಲಭವಾಗಿ ದೊರೆಯುತ್ತವೆ. ಇದನ್ನೇ ಬಳಕೆ ಮಾಡಿಕೊಂಡು ನಮ್ಮ ಗೌರವಕ್ಕೆ ಧಕ್ಕೆ ತಂದು ಹಣ ಕಬಳಿಸಲು ದಂಧೆಕೋರರು ಮುಂದಾಗಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ.
ನಿಮ್ಮ ಮೊಬೈಲ್ ಸಂಖ್ಯೆಗೆ ಅಪರಿಚಿತ ನಂಬರ್‌ನಿಂದ ಕರೆ ಬಂದರೆ ಈ ಬಗ್ಗೆ ಎಚ್ಚರವಹಿಸುವುದು ಅಗತ್ಯ. ಯಾರೋ ಸುಂದರವಾಗಿ ಕಾಣುತ್ತಾರೆ, ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಮರುಳಾಗಿ ಬ್ಯಾಂಕ್ ಖಾತೆ ಸೇರಿ ಇತರ ಮಾಹಿತಿ ಹಂಚಿಕೊಂಡರೆ ಹಣ ಮಾಯವಾಗುವುದು ಖಂಡಿತ. ಇಲ್ಲವೇ ಅಶ್ಲೀಲ ವಿಡಿಯೋ ಮುಖಾಂತರ ಸೆಳೆಯಲು ಮುಂದಾದರೂ ಈ ಬಗ್ಗೆಯೂ ಎಚ್ಚರಿಕೆಯಿಂದ ವರ್ತಿಸಬೇಕು. ಇಲ್ಲವಾದರೆ ಎಡಿಟ್ ಮಾಡಿದ ವಿಡಿಯೋಗಳನ್ನು ಹರಿಬಿಟ್ಟು ನಿಮ್ಮಿಂದ ಹಣ ಪೀಕುವ ಕೆಲಸ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಯಾವುದೇ ಅಂಜಿಕೆ ಇಲ್ಲದೆ ನೇರವಾಗಿ ಹತ್ತಿರದ ಸೈಬರ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿ.
ವಿವಾಹಿತೆ ಜತೆ ಪರಪುರುಷನ ಕಾಮದಾಟ! 5 ವರ್ಷದ ಅಕ್ರಮ ಸಂಬಂಧಕ್ಕೆ ಬಿತ್ತು ಮೂವರ ಹೆಣ

ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಕರೊನಾ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

ಪ್ರೀತಿ ಹೆಸರಲ್ಲಿ ಶಾಲಾ ವಿದ್ಯಾರ್ಥಿನಿ ಜತೆ ಯುವಕನ ಸೆಕ್ಸ್: ಮಾತ್ರೆ ನುಂಗಿಸಿ ಸಿಕ್ಕಿಬಿದ್ದ ಕಾಮುಕನ ಕಥೆ ಏನಾಯ್ತು?

ಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ

ತಾಯಿ ಗರ್ಭದಿಂದ ಮಗುವಿನ ಕಾಲು ಹೊರ ಬಂದಿದೆ.. ಯಾರಾದರೂ ಹೆರಿಗೆ ಮಾಡಿ… ಆಸ್ಪತ್ರೆ ಬಾಗಿಲಲ್ಲಿ ಕುಟುಂಬಸ್ಥರ ಆಕ್ರಂದನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − three =
Remember me
