ಬೆಂಗಳೂರು:ರಾಜ್ಯಕ್ಕೆ ಚಂಡಮಾರುತ ಭೀತಿ ಎದುರಾಗಿದ್ದು, ಮಳೆ ಇನ್ನಷ್ಟು ಬಿರುಸುಗೊಳ್ಳಲಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಅ.24ರಂದು ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ.
ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಕರಾವಳಿಗೆ ಅ.25ರಂದು ತಲುಪುವ ಮಾರುತಗಳು ಅಂದಿನ ದಿನದಂದು ಒಡಿಶಾ ಕರಾವಳಿಗೆ ಅಪ್ಪಳಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮೂನ್ಸೂಚನೆ ನೀಡಿದೆ. ಸಮುದ್ರದಲ್ಲಿ ಗಾಳಿ ವೇಗ ಹೆಚ್ಚಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಮುದ್ರ ತೀರದಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆಯಿಂದ ಇರುವಂತೆ ಐಎಂಡಿ ಹೇಳಿದೆ. ಆದರೆ, ಶುಕ್ರವಾರ (ಅ.21) ಸಂಜೆ ವೇಳೆಗೆ ಚಂಡಮಾರುತ ರೂಪುಗೊಳ್ಳುತ್ತದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ನಿಖರ ಮಾಹಿತಿ ಗೊತ್ತಾಗಲಿದೆ ಎಂದು ಹವಾಮಾನ ವೈಪರಿತ್ಯ ವಿಜ್ಞಾನ ಎಂ.ಬಿ.ರಾಜೇಗೌಡ ಸ್ಪಷ್ಟಪಡಿಸಿದ್ದಾರೆ.
ಬುಧವಾರ ರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ 80 ಮಿ.ಮೀ. ಮಳೆಯಾಗಿದ್ದು, ಗುರುವಾರ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಸುರಿದಿದೆ. ಅ.20ರಿಂದ 23ರ ವರೆಗೆ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಬೀಳಲಿದೆ. ಉತ್ತರ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಚದುರಿದಂತೆ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸಮ್ಮಿಶ್ರ ಸರ್ಕಾರ ಬಂದ್ರೆ ನಾನು ಸಿಎಂ ಆಗಲ್ಲ… ಚಾಮುಂಡಿ ಸನ್ನಿಧಿಯಲ್ಲೇ ಘೋಷಿಸಿ ಎಚ್​ಡಿಕೆ ಕೊಟ್ಟ ಕಾರಣ ಹೀಗಿದೆ…

ಕಾಂಗ್ರೆಸ್​-ಬಿಜೆಪಿಯವರೇ ದಯವಿಟ್ಟು ಕ್ಷಮಿಸಿ, ದೇವೇಗೌಡರು ಇರೋವರೆಗೂ ನಾನು ಜೆಡಿಎಸ್ ಬಿಡಲ್ಲ… ಎನ್ನುತ್ತಲೇ ಕಣ್ಣೀರಿಟ್ಟ ಜಿಟಿಡಿ

ಹಾಸನಾಂಬೆ ದೇವಾಲಯದಲ್ಲಿ ಹೃದಯಾಘಾತದಿಂದ ಭಕ್ತ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
