ತಿಪಟೂರು:ತಂದೆಯಾದ ಖುಷಿಯಲ್ಲಿರಬೇಕಿದ್ದ ಯುವಕನೊಬ್ಬ ಸಂಬಂಧಿಕರ ಮಾತಿಗೆ ಮನನೊಂದು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದ ಅಯ್ಯನಬಾವಿಯಲ್ಲಿ ಸೋಮವಾರ ಸಂಭವಿಸಿದೆ.
ಅಯ್ಯನಬಾವಿಯ ಎಸ್.ನಾಗರಾಜು (26) ಮೃತ ದುರ್ದೈವಿ. ಅರಸೀಕೆರೆ ತಾಲೂಕು ಚಿಂದೇನಹಳ್ಳಿ ಗಡಿ ಸಮೀಪದ ಸೋಮೇನಹಳ್ಳಿಯ ಬೇಬಿಕಲಾ ಎಂಬಾಕೆ ಜತೆ ನಾಗರಾಜುವಿನ ಮದುವೆ ಕಳೆದ ವರ್ಷ ಆಗಿತ್ತು. ಈ ದಂಪತಿಗೆ ಮೂರು ದಿನದ ಹಿಂದಷ್ಟೇ ಗಂಡು ಮಗು ಕೂಡ ಜನಿಸಿದೆ. ಆದರೆ ಹೆರಿಗೆ ವೇಳೆ ಪತ್ನಿ ತೆಗೆದುಕೊಂಡ ಆ ಒಂದು ನಿರ್ಧಾರಕ್ಕೆ ಗಂಡ ನಾಗರಾಜುಗೆ ಒಂದಿಷ್ಟು ಒಪ್ಪಿಗೆ ಆಗಿಲ್ಲ. ಇದೇ ವಿಚಾರಕ್ಕೆ ಪತ್ನಿಯ ಕುಟುಂಬಸ್ಥರ ಬಳಿಯೂ ಆತ ಗಲಾಟೆ ಮಾಡಿಕೊಂಡಿದ್ದ. ಇದಾದ ಮೂರು ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಇದನ್ನೂ ಓದಿರಿವಿಷ ಕುಡಿದು ಪ್ರಿಯಕರನ ಮಡಿಲಲ್ಲೇ ರಕ್ತಕಾರಿ ಪ್ರಾಣಬಿಟ್ಟ ಪ್ರೇಯಸಿ! ಇವರಿಬ್ಬರ ಕಥೆ ಭಯಾನಕ
ಆಗಿದ್ದೇನು?: ಮೂರು ದಿನದ ಹಿಂದೆ ನಾಗರಾಜುವಿನ ಪತ್ನಿ ಬೇಬಿಕಲಾ ಹೆರಿಗೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಆ ವೇಳೆ ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಳು. ಈ ವಿಚಾರ ತಿಳಿಯುತ್ತಿದ್ದ ಕುಪಿತಗೊಂಡ ನಾಗರಾಜು, ನನ್ನನ್ನೂ ಕೇಳದೆ ಪತ್ನಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದನ್ನು ವಿರೋಧಿಸಿ ಸಂಬಂಧಿಕರ ಜತೆ ಗಲಾಟೆ ಮಾಡಿದ್ದ.
ಈ ವೇಳೆ ನಾಗರಾಜು ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಡುವುದಾಗಿ ಸಂಬಂಧಿಕರು ಬೆದರಿಸಿದ್ದರು. ಇದೇ ವಿಚಾರವಾಗಿ ನೊಂದಿದ್ದ ನಾಗರಾಜು ಸೋಮವಾರ ಬೆಳಗ್ಗೆ 7.30ರ ಸುಮಾರಿನಲ್ಲಿ ಅಯ್ಯನಬಾವಿ ಸಮೀಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಅರಸೀಕೆರೆ ರೈಲ್ವೆ ಪೊಲೀಸರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ, ಸಂಬಂಧಿಕರಿಗೆ ಶವ ಹಸ್ತಾಂತರಿಸಿದ್ದಾರೆ.
ದೇವರಿಗೆ ಹುಣ್ಣಿಮೆ ಪೂಜೆ ಸಲ್ಲಿಸಲು ಹೋದ ತಾಯಿ ಜತೆ ಮಕ್ಕಳನ್ನೂ ಹೊತ್ತೊಯ್ದ ಜವರಾಯ!

ಗ್ರಾಪಂ ಕಾರ್ಯದರ್ಶಿ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್! ಅದೇ ಮನೆಯಲ್ಲಿ ಅಪ್ಪ-ಅಕ್ಕನೂ ನೇಣಿಗೆ ಶರಣಾಗಿದ್ದರು…

https://www.vijayavani.net/a-illicit-relationship-poisoning-by-lovers/
ವರದಕ್ಷಿಣೆಗೆ ವೈದ್ಯೆ ಬಲಿ! ಸಾವಿಗೂ ಮುನ್ನ ಸೋದರನ ಬಳಿ ಆಕೆ ಬಿಚ್ಚಿಟ್ಟ ನೋವಿನ ಸಂದೇಶ ಇಲ್ಲಿದೆ

ಪೊಲೀಸರ ಕಿರುಕುಳ ಸಹಿಸಲಾಗ್ತಿಲ್ಲ, ನನಗೆ ದಯಾಮರಣ ಕೊಡಿ: ಮಧುಗಿರಿಮೋದಿ

ಪತ್ನಿಯ ಗೆಳತಿಯರು ಮನೆಗೆ ಬರುತ್ತಿದ್ದಂತೆ ಅವರ ಬಟ್ಟೆ ಬಿಚ್ಚುತ್ತಾನೆ ಗಂಡ! ಬೆಚ್ಚಿಬೀಳಿಸುತ್ತೆ ದಂಪತಿ ಕೃತ್ಯ

ಸತ್ತು ಮಲಗಿದ್ದವ ಕರುಳ ಕೂಗಿಗೆ ಓಗೊಟ್ಟು ಮತ್ತೆ ಬದುಕಿದ! ಅಂತ್ಯಸಂಸ್ಕಾರ ವೇಳೆ ನಡೆದ ಪವಾಡ ಕೇಳಿದ್ರೆ ಶಾಕ್​ ಆಗ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
