ಮಂಗಳೂರು:ದಕ್ಷಿಣ ಕನ್ನಡ ಎಸ್​ಪಿ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದ ಎಎಸ್​ಐ ತಿಪ್ಪಣ್ಣ ನಾಗವ್ವ ಮಾದರ(37) ದಾರಿಯಲ್ಲೇ ಕುಸಿದು ಬಿದ್ದು ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್​ ಇಲಾಖೆಯ ಬೆರಳು ಮುದ್ರೆ ಘಟಕದಲ್ಲಿ ಸಹಾಯಕ ಪೊಲೀಸ್​ ಉಪನಿರೀಕ್ಷಕರಾಗಿ ತಿಪ್ಪಣ್ಣ ನಾಗವ್ವ ಮಾದರ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಮೂಲತಃ ಬೆಳಗಾವಿ ಜಿಲ್ಲೆ ರಾಮದುರ್ಗ ಚಿಪ್ಪಾಲ್​ಕಟ್ಟಿ ಗ್ರಾಮದವರು.
ಶುಕ್ರವಾರ ಸಂಜೆ 4 ಗಂಟೆಗೆ ನಗರದ ಪಾಂಡೇಶ್ವರದ ಎಸ್​ಪಿ ಕಚೇರಿಯಲ್ಲಿರುವ ಬೆರಳು ಮುದ್ರೆ ಘಟಕದ ಕಚೇರಿಗೆ ನಡೆದುಕೊಂಡು ಹೋಗುತ್ತಿರುವಾಗ ಎ.ಬಿ.ಶೆಟ್ಟಿ ವೃತ್ತದ ಬಳಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದ ಸಿಎಆರ್​ ಸಿಬ್ಬಂದಿ ಎಎಚ್​ಸಿ ರಮೇಶ್​ ಅವರು ಉಪಚರಿಸಿ ಪಕ್ಕದ ಎಂ.ವಿ. ಶೆಟ್ಟಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಅಲ್ಲಿಂದ ಆಂಬುಲೆನ್ಸ್​ ಮೂಲಕ ಅಂಬೇಡ್ಕರ್​ ವೃತ್ತದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
2011ರಲ್ಲಿ ಪೊಲೀಸ್​ ಕಾನ್​ಸ್ಟೆಬಲ್​(ಎಫ್​ಪಿಬಿ) ಆಗಿ ಇಲಾಖೆಗೆ ಸೇರ್ಪಡೆಗೊಂಡಿದ್ದು, ಬಾಗಲಕೋಟೆಯಲ್ಲಿ ಹೆಡ್​ ಕಾನ್​ಸ್ಟೆಬಲ್​ ಆಗಿ ಕರ್ತವ್ಯದಲ್ಲಿದ್ದವರು. ಮುಂಬಡ್ತಿಗೊಂಡು ದಕ್ಷಿಣ ಕನ್ನಡ ಜಿಲ್ಲಾ ಬೆರಳು ಮುದ್ರೆ ಘಟಕದಲ್ಲಿ ಆರು ತಿಂಗಳಿಂದ ಎಎಸ್​ಐ ಕರ್ತವ್ಯ ನಿರ್ವಹಿಸುತ್ತಿದ್ದರು.
ಪತ್ನಿ ದೀಪಾ ತಿಪ್ಪಣ್ಣ ಮಾದರ ಮತ್ತು ಮೂರು ಪುಟ್ಟ ಮಕ್ಕಳಾದ ನಿಹಾರಿಕಾ(6), ಅನ್ವಿತಾ(3.6 ವರ್ಷ) ಹಾಗೂ ನಿಶಾಂತ್​(1.6 ವರ್ಷ) ಅವರನ್ನು ತಿಪ್ಪಣ್ಣ ನಾಗವ್ವ ಮಾದರ ಅಗಲಿದ್ದಾರೆ.
ಮಳವಳ್ಳಿಯ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ 8 ತಿಂಗಳ ಗರ್ಭಿಣಿ ಸಾವು

ಇನ್ನು 2 ತಿಂಗಳು ಕಳೆದಿದ್ರೆ ಡಾಕ್ಟರ್ ಆಗಿ ತಾಯ್ನಾಡಿಗೆ ಬರ್ತಿದ್ದೆ.. ಭಾರತೀಯ ರಾಯಭಾರ ಕಚೇರಿಯವರೇ ಓಡಿ ಹೋಗಿದ್ದಾರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
