ಮೈಸೂರು:ನಟ ದರ್ಶನ್ ಹೆಸರಲ್ಲಿ ಹಣ ವಂಚನೆ ಯತ್ನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಈ ಪ್ರಮುಖ ಆರೋಪಿ ಅರುಣಾಕುಮಾರಿ ಕುರಿತು ಸ್ಫೋಟಕ ರಹಸ್ಯವನ್ನು ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್​ ಬಿಚ್ಚಿಟ್ಟಿದ್ದಾರೆ
ಆರೋಪಿ ಅರುಣಾಕುಮಾರಿ ವಿವಾಹಿತ ಮಹಿಳೆ. ಗಂಡನ ಹೆಸರು ಕುಮಾರ್. ಈ ದಂಪತಿಗೆ ಮಗನಿದ್ದು, 7ನೇ ತರಗತಿ ಓದುತ್ತಿದ್ದಾನೆ. ಆದರೂ ತನಗಿಂತ 9 ವರ್ಷ ಚಿಕ್ಕವನೊಂದಿಗೆ 2ನೇ ಮದುವೆ ಆಗಲು ಅರುಣಾಕುಮಾರಿ ಮಾಸ್ಟರ್​ ಪ್ಲ್ಯಾನ್ ಮಾಡಿದ್ದಳಂತೆ. ಗಂಡ ಕುಮಾರ್​ ಮತ್ತು ಅರುಣಾ ಏಳೆಂಟು ವರ್ಷದಿಂದ ಪರಸ್ಪರ ದೂರವಿದ್ದಾರೆ. ಪುತ್ರನೊಂದಿಗೆ ಬೆಂಗಳೂರಿನಲ್ಲಿ ವಾಸವಿರುವ ಅರುಣಾ, 26 ವರ್ಷದ ಯುವಕ ಮಧುಕೇಶ ಎಂಬಾತನಿಗೆ ಕೆಲಸ ಕೊಡಿಸುವ ನೆಪದಲ್ಲಿ ಆತನನ್ನೇ ತನ್ನ ಬುಟ್ಟಿಗೆ ಹಾಕಿಕೊಂಡು ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದಳಂತೆ.
65 ಸಾವಿರ ರೂ. ವೇತನ ಬರುವ ಕೆಲಸ ಕೊಡಿಸುತ್ತೇನೆ ಎಂದು ಬ್ಯಾಂಕ್​ ಸೀಲ್​ ನಕಲು ಮಾಡಿ ನೇಮಕಾತಿ ಆದೇಶವನ್ನೂ ಮಧುಕೇಶನಿಗೆ ಕೊಟ್ಟು, ಆತನಿಂದ 2 ಲಕ್ಷ ರೂ. ಲಂಚ ಸ್ವೀಕರಿದ್ದಳು ಅರುಣಾಕುಮಾರಿ. ಈ ನಡುವೆ ಇಬ್ಬರ ನಡುವೆ ಲವ್ವಿಡವ್ವಿ ಶುರುವಾಗಿ ಕಳೆದ ಆಗಸ್ಟ್​​ನಲ್ಲಿ ಮದುವೆಯಾಗಲು ಸಿದ್ಧತೆಯನ್ನೂ ಮಾಡಿಕೊಂಡಿದ್ದಳು. ತನ್ನ ಮಗನನ್ನು ಅಕ್ಕನ ಮಗ ಎಂದು ಸುಳ್ಳು ಹೇಳಿದ್ದಳು. ಕೊನೆಗೆ ಅರುಣಾಳ ಗಂಡ ಕುಮಾರ್​ನನ್ನು ಮಧುಕೇಶ್​ಗೆ ಪರಿಚಯ ಮಾಡಿಕೊಟ್ಟು ಆತನಿಗೆ ಬುದ್ಧಿ ಹೇಳಿ ಕಳುಹಿಸಿದ್ದರಂತೆ ನಟ ದರ್ಶನ್. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್ ವಿವರಿಸಿದರು.
ದರ್ಶನ್‌ ಹೆಸರಲ್ಲಿ ವಂಚನೆ ಯತ್ನ ಕೇಸ್‌: ಆರೋಪಿ ಅರುಣಾ ಕುಮಾರಿಯ ಅಸಲಿ ಮುಖವಾಡ ಬಯಲು!

ಅನ್​ಲಾಕ್​ ಬೆನ್ನಲ್ಲೇ ನಂದಿಬೆಟ್ಟಕ್ಕೆ ಶನಿವಾರ-ಭಾನುವಾರ ಪ್ರವಾಸಿಗರ ಪ್ರವೇಶ ನಿಷಿದ್ಧ!

ಪಕ್ಕದೂರಲ್ಲಿ 22 ವರ್ಷದ ಯುವತಿ ಸಾವು! ಶವದ ಪಕ್ಕದಲ್ಲೇ ಇತ್ತು ಆಸಿಡ್​, ಚಾಕು…

ಪ್ರಿಯಕರನ ಮನೆಯಲ್ಲಿ ಯುವತಿ ಶವ ಪತ್ತೆ! ಮೃತಳ ಪೋಷಕರಿಂದ ನಡೆದೇ ಹೋಯ್ತು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
