​ಬೆಂಗಳೂರು:ಪತ್ನಿ, ಇಬ್ಬರು ಮುದ್ದಾದ ಮಕ್ಕಳಿದ್ದರೂ ಈತನಿಗೆ ಅವಿವಾಹಿತ ಮಹಿಳೆಯರ ಜತೆ ಡೇಟಿಂಗ್​ ಮಾಡುವ ಚಟ. ಡೇಟಿಂಗ್​ ಅನ್ನೇ ಬಂಡವಾಳ ಮಾಡಿಕೊಂಡ ಈತ ಮಹಿಳೆಯರನ್ನ ಪುಸಲಾಯಿಸಿ ಅವರ ಮನೆಗೇ ತೆರಳುತ್ತಿದ್ದ… ಮಹಿಳೆಯರ ವಿವಸ್ತ್ರಗೊಳಿಸಿ ಮೊಬೈಲ್​ನಲ್ಲಿ ಫೋಟೋಗಳನ್ನು ಸೆರೆ ಹಿಡಿದಿದು ವರಸೆ ಬದಲಿಸುತ್ತಿದ್ದ…
ಕೊಡಿಗೇಹಳ್ಳಿ ವ್ಯಾಪ್ತಿಯ ಅವಿವಾಹಿತ ಮಹಿಳೆಯೊಬ್ಬರು ಕೊಟ್ಟ ದೂರಿನ ಮೇರೆಗೆ ಛತ್ತೀಸ್​ಗಢ ಮೂಲದ ಅಭಿಷೇಕ್​ (33) ಎಂಬಾತನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಾಪ್ಟ್​ವೇರ್​ ಉದ್ಯೋಗಿಯಾಗಿರುವ ಅಭಿಷೇಕ್​, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಎಚ್​ಎಸ್​ಆರ್​ ಲೇಔಟ್​ನಲ್ಲಿ ನೆಲೆಸಿದ್ದ.
ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಡೇಟಿಂಗ್​ ಆ್ಯಪ್​ನಲ್ಲಿ ಅವಿವಾಹಿತ ಮಹಿಳೆಯರನ್ನು ಪರಿಚಯಿಸಿಕೊಂಡು ಪುಸಲಾಯಿಸಿ ಡೇಟಿಂಗ್​ ನೆಪದಲ್ಲಿ ಮನೆಗೆ ತೆರಳಿ ವಿವಸ್ತ್ರಗೊಳಿಸಿ ಫೋಟೋ ತೆಗೆದುಕೊಳ್ಳುತ್ತಿದ್ದ. ಆನಂತರ ಹಣಕ್ಕಾಗಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ. ಇದೇ ರೀತಿ ಕೊಡಿಗೇಹಳ್ಳಿ ವ್ಯಾಪ್ತಿಯ ಅವಿವಾಹಿತ ಮಹಿಳೆಯೊಬ್ಬರನ್ನು ಡೇಟಿಂಗ್​ ಆ್ಯಪ್​ನಲ್ಲಿ ಪರಿಚಯಿಸಿಕೊಂಡು ಅವರ ಮೊಬೈಲ್​ ನಂಬರ್​ ಪಡೆದಿದ್ದ. ಕರೆ ಮತ್ತು ಮೆಸೇಜ್​ ಮಾಡಿ ಪುಸಲಾಯಿಸಿ ಫೆ.1ರಂದು ಆ ಮಹಿಳೆಯ ಮನೆಗೆ ತೆರಳಿದ್ದ. ಅಲ್ಲಿ ಆಕೆಯ ವಿವಸ್ತ್ರಗೊಳಿಸಿ ಮೊಬೈಲ್​ನಲ್ಲಿ ಫೋಟೋಗಳನ್ನು ಸೆರೆ ಹಿಡಿದಿದ್ದ.
ಮನೆಯಿಂದ ಹೊರ ಬಂದಾತ ಆ ಮಹಿಳೆಗೆ ಕರೆ ಮಾಡಿ ಲಕ್ಷಾಂತರ ರೂ.ಗೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದಲ್ಲಿ ಅಶ್ಲೀಲ ಫೋಟೋಗಳನ್ನು ಜಾಲತಾಣದಲ್ಲಿ ಅಪ್​ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿದ್ದ. ಸಂತ್ರಸ್ತೆ ದೂರು ನೀಡಿದ ಮೂರು ತಾಸಿನೊಳಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗ್ಳೂರಲ್ಲಿ ವೈಫ್ ಸ್ವಾಪಿಂಗ್ ದಂಧೆ: ತನ್ನ ಪತ್ನಿ ಜತೆ ಪರಪುರುಷರ ಸಮ್ಮಿಲನ ಮಾಡಿಸಿ ಲೈವ್ ವಿಡಿಯೋ ಮಾಡಿ ಖುಷಿ ಪಡ್ತಿದ್ದ ಗಂಡ!

ಬ್ರೇಕ್ ಪೆಡಲ್​ಗೆ ನೀರಿನ ಬಾಟಲಿ ಸಿಲುಕಿ ಯದ್ವಾತದ್ವಾ ಚಲಿಸಿದ ಕಾರು! 4 ವಾಹನ ಜಖಂ

ಹಿಜಾಬ್​ ಬೇಕು ಅಂದ್ರೆ ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿ: ಪ್ರಮೋದ್ ಮುತಾಲಿಕ್​ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − three =
Remember me
