ಬೆಂಗಳೂರು:ನಿನ್ನ ಪತಿ ತೀರಿಕೊಂಡಿದ್ದಾನೆ, ನನ್ನ ಜತೆಗೆ ಅನುಸರಿಸಿಕೊಂಡು ಹೋದರೆ ಎಲ್ಲ ರೀತಿಯಲ್ಲೂ ನಿನ್ನನ್ನು ನೋಡಿಕೊಳ್ಳುತ್ತೇನೆ, ಇಲ್ಲದಿದ್ದರೆ ಮುಗಿಸಿ ಬಿಡುತ್ತೇನೆ. ನಿನಗೆ ಸೆಕ್ಸ್​ ಬಗ್ಗೆ ಗೊತ್ತಿಲ್ಲದಿದ್ದರೆ ಹೇಳು, ನಾನು ಹೇಳಿ ಕೊಡುತ್ತೇನೆ… ಎಂದು ಕಾಮುಕ ಮಾವನೊಬ್ಬ ತನ್ನ ಸೊಸೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಇದೀಗ ಮಾವನ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಸಂತ್ರಸ್ತೆ, ತನ್ನ ಗಂಡನ ಸತ್ತ ಬಳಿಕ ಮಾವ ಕೊಟ್ಟ ಚಿತ್ರಹಿಂಸೆಯನ್ನ ದೂರಿನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ತಿಲಕ್​ನಗರದ ನಿವಾಸಿ 24 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇರೆಗೆ ಬಸನಗುಡಿ ಠಾಣೆ ಪೊಲೀಸರು ಸದ್ದುಗುಂಟೆ ಪಾಳ್ಯದ ವೆಂಕಟೇಶ್​ (63) ಎಂಬಾತನ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ 2015ರಲ್ಲಿ ಮಹೇಶ್​ ಎಂಬುವವರನ್ನು ವಿವಾಹವಾಗಿದ್ದು, ದಂಪತಿಗೆ 6 ವರ್ಷದ ಮಗನಿದ್ದಾನೆ. ಪತಿ ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದಾದ ಕೆಲ ದಿನಗಳ ನಂತರ ಸಂತ್ರಸ್ತೆಯ ಮಾವ ಆಕೆಗೆ ಲೈಂಗಿಕ ಕಿರುಕುಳ ಕೊಡಲು ಆರಂಭಿಸಿದ್ದ.
ನನ್ನ ಗಂಡ ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟರು. ನನಗೆ 6 ವರ್ಷದ ಮಗನಿದ್ದಾನೆ. ನಿನಗೆ ಸೆಕ್ಸ್​ ಬಗ್ಗೆ ಗೊತ್ತಿಲ್ಲದಿದ್ದರೆ ಹೇಳು ಹೇಳಿ ಕೊಡುತ್ತೇನೆ ಎಂದು ಆಗಾಗ ಮಾವ ಪೀಡಿಸುತ್ತಿದ್ದ. ನಾನು ಸ್ನಾನಕ್ಕೆ ಹೋದ ವೇಳೆ ಕಿಟಕಿಯಲ್ಲಿ ನೋಡಿ ಹಿಂಸೆ ಕೊಡುತ್ತಿದ್ದ. ನಿನ್ನ ಪತಿ ತೀರಿಕೊಂಡಿದ್ದಾನೆ. ನನ್ನ ಜತೆಗೆ ಅನುಸರಿಸಿಕೊಂಡು ಹೋದರೆ ಎಲ್ಲ ರೀತಿಯಲ್ಲೂ ನಿನ್ನನ್ನು ನೋಡಿಕೊಳ್ಳುತ್ತೇನೆ. ಇಲ್ಲದಿದ್ದರೆ ಮುಗಿಸಿ ಬಿಡುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದೀಗ ಪೊಲೀಸರು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಥೂ ಇದೆಂಥಾ ಅಸಹ್ಯ? ಅಣ್ಣ-ತಂಗಿ ನಡುವೆಯೇ ಅಕ್ರಮ ಸಂಬಂಧ, ಅಡ್ಡಿಬಂದ ತಾಯಿಯನ್ನೇ ಕೊಂದ ಕಾಮುಕರು!

ವಿಜಯಪುರದಲ್ಲಿ ಹಾಡಹಗಲೇ ಪಿಎಸ್‌ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
