ಕೋಲಾರ:ಭೂ ಪರಿವರ್ತನೆ ಆದೇಶದ ನಕಲು ಪ್ರತಿ ನೀಡಲು ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಕೋಲಾರ ಜಿಲ್ಲಾಧಿಕಾರಿ ಕಚೇರಿ ಕಂದಾಯ ಶಾಖೆಯ ಉಪತಹಸೀಲ್ದಾರ್​ ಎಂ.ಪ್ರಭಾಕರನ್​ ಸೇರಿ ಮೂವರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.
ಬೆಂಗಳೂರು ಕಾಮಾಕ್ಷಿಪಾಳ್ಯದ ವ್ಯಕ್ತಿಯೊಬ್ಬರು ಕೋಲಾರ, ಮಾಲೂರು ತಾಲೂಕು ವ್ಯಾಪ್ತಿಯ ವಿವಿಧ ಸರ್ವೇ ನಂಬರ್​ಗಳಲ್ಲಿನ ಜಮೀನುಗಳ ಭೂ ಪರಿವರ್ತನೆ ಆದೇಶದ ನಕಲು ಪ್ರತಿ ಕೋರಿ ಫೆ.4 ಮತ್ತು 22ರಂದು ಜಿಲ್ಲಾಧಿಕಾರಿ ಕಚೇರಿ ಕಂದಾಯ ಶಾಖೆಗೆ 56 ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿ ದಾಖಲಾತಿ ನೀಡಲು ಪ್ರತಿ ಅರ್ಜಿಗೆ ತಲಾ 5 ಸಾವಿರ ರೂ.ನಂತೆ ಒಟ್ಟು 2.80 ಲಕ್ಷ ರೂ. ಲಂಚ ಕೊಡುವಂತೆ ಪ್ರಭಾಕರನ್ ಕೇಳಿದ್ದರು.​ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಜನಾರ್ದನಗೌಡ ಮುಂಗಡವಾಗಿ 10 ಸಾವಿರ ರೂ. ಪಡೆದಿದ್ದರು. ಆದರೆ ಇದೇ ವಿಷಯವಾಗಿ ಅರ್ಜಿದಾರರು ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಕೊಟ್ಟಿದ್ದರು.
ದೂರು ಆಧರಿಸಿ ಶುಕ್ರವಾರ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಪ್ರಭಾಕರನ್​, ಜನಾರ್ದನಗೌಡ ಹಾಗೂ ಅವರಿಗೆ ನೆರವಾಗಿದ್ದ ಜಿಲ್ಲಾಧಿಕಾರಿ ಕಚೇರಿಯ ಗುತ್ತಿಗೆ ನೌಕರ ಮನೋಜ್​ ಅವರನ್ನು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಜಿಲ್ಲಾಡಳಿತ ಭವನದಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಂದ ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ. ಎಸಿಬಿ ಅಧಿಕಾರಿಗಳು ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ ಕಚೇರಿಗೆ ಆಗಮಿಸಿ ವಿಚಾರಣೆ ನಡೆಸಿದ್ದು, ಸಾಮಾಜಿಕ ಜಾಲತಾಣ ಮತ್ತು ಸುದ್ದಿವಾಹಿನಿಗಳಲ್ಲಿ ಅವರನ್ನೇ ವಿಚಾರಣೆ ನಡೆಸಲಾಗುತ್ತಿದೆ ಎಂಬರ್ಥದ ವಿಡಿಯೋಗಳು ಹಾಗೂ ಫೋಟೋಗಳು ಹರಿದಾಡಿದ್ದವು. ಕಚೇರಿ ಸಿಬ್ಬಂದಿಯ ವಿಚಾರಣೆ ಹಿನ್ನೆಲೆಯಲ್ಲಿ ಎಡಿಸಿ ಕಡೆಯವರೆಗೂ ಇದ್ದರೆಂದು ತಿಳಿದುಬಂದಿದೆ.
ಭೀಕರ ಅಪಘಾತ, ಸ್ಥಳದಲ್ಲೇ ಐವರ ಸಾವು: ದತ್ತಾತ್ರೇಯನ ದರ್ಶನ ಪಡೆದು ವಾಪಸ್​ ಬರುವಾಗ ದುರಂತ

ಮಗನ ಸಾವಿನ ಹಿಂದೆ ಸೊಸೆ ಕೈವಾಡ? ಅಂತ್ಯಸಂಸ್ಕಾರ ಆಗಿದ್ದ ಶವ ಹೊರತೆಗಿಸಿ ಮರಣೋತ್ತರ ಪರೀಕ್ಷೆ

ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ರೆ ವಿಷಾದಿಸುವೆ… ಮಾಜಿ ಶಾಸಕರಿಗೆ ಪತ್ರ ಬರೆದು ಕ್ಷಮೆ ಕೋರಿದ ಡಿಕೆಶಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
