ಕಳೆದ ಕೆಲವು ವಾರಗಳಿಂದ ಬೆಂಗಳೂರು ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಹುಸಿ ಬಾಂಬ್ ಕರೆಗಳ ಹಾವಳಿ ಹೆಚ್ಚಾಗಿದೆ. ಶಾಲೆಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳು ಹುಸಿ ಬಾಂಬ್ ಕರೆಗಳನ್ನು ಸ್ವೀಕರಿಸಿವೆ. ಮೇ 1ರಂದು ದೆಹಲಿಯ ನೂರಕ್ಕೂ ಹೆಚ್ಚು ಶಾಲೆಗಳಿಗೆ ಏಕಕಾಲಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂತು. ವಿದ್ಯಾರ್ಥಿಗಳು, ಪಾಲಕರು, ಶಾಲಾ ಸಿಬ್ಬಂದಿಯನ್ನು ಗಾಬರಿಗೊಳಿಸಿತು.
ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಬಂದು ಹಲವು ಗಂಟೆಗಳ ಕಾಲ ತಪಾಸಣೆ ಮಾಡಿದ ಬಳಿಕ ಅದು ಹುಸಿ ಬೆದರಿಕೆ ಎಂಬುದು ದೃಢಪಟ್ಟಿತು. ಸೈಬರ್ ಪೊಲೀಸರು ಇಮೇಲ್​ನ ಐಪಿ (ಇಂಟರ್​ನೆಟ್ ಪ್ರೋಟೋಕಾಲ್) ಅಡ್ರೆಸ್ ಜಾಲಾಡಿದಾಗ ಇದು ರಷ್ಯಾದಿಂದ ಬಂದಿದ್ದು ಎಂಬುದು ಗೊತ್ತಾಯಿತು. ಅಥವಾ ದುಷ್ಕರ್ವಿುಗಳು ಭಾರತದಲ್ಲೇ ಕುಳಿತು ವಿಪಿಎನ್ (ವರ್ಚುವಲ್ ಪ್ರೖೆವೇಟ್ ನೆಟ್​ವರ್ಕ್) ಬಳಸಿ, ರಷ್ಯಾದ ಸರ್ವರ್​ನಿಂದ ಕಳಿಸಿದ ಇಮೇಲ್ ಇದಾಗಿರಬಹುದು. ವಿಪಿಎನ್ ಬಳಸಿದರೆ ದುಷ್ಕರ್ವಿುಯ ಕಂಪ್ಯೂಟರ್​ಗೂ ವಿಪಿಎನ್ ಮಾಲೀಕರ ಸರ್ವರ್​ಗೂ ನೇರ ಸಂಪರ್ಕ ಏರ್ಪಡುತ್ತದಲ್ಲದೆ, ಎನ್ಕ್ರಿಪ್ಷನ್ ಮೂಲಕ ದುಷ್ಕರ್ವಿುಯ ವೈಯಕ್ತಿಕ ವಿವರಗಳು ಮರೆಮಾಚುತ್ತವೆ.
ಇದಾಗಿ, ಒಂದು ವಾರದಲ್ಲೇ, ಮೇ 6ರಂದು ಅಹ್ಮದಾಬಾದ್​ನ ಹಲವಾರು ಶಾಲೆಗಳಿಗೆ ಇಮೇಲ್ ಮೂಲಕ ಇಂಥದೇ ಬಾಂಬ್ ಬೆದರಿಕೆ ಕರೆ ಬಂತು. ಅದರ ಮೂಲವೂ ರಷ್ಯಾ ಐಪಿ ಅಡ್ರೆಸ್ಸೇ ಆಗಿತ್ತು. ಯೂರೋಪ್ ಮೂಲದ ಮೇಲಿಂಗ್ ಸರ್ವಿಸ್ ಕಂಪನಿಯಿಂದ ಬೆದರಿಕೆ ಇಮೇಲ್​ಗಳು ಬಂದಿದ್ದೂ ಉಂಟು. ಇದೀಗ ಬೆಂಗಳೂರಿನ ಆರು ಖಾಸಗಿ ಆಸ್ಪತ್ರೆಗಳಿಗೆ ಮತ್ತು ಶಾಲೆಯೊಂದಕ್ಕೆ ಬಾಂಬ್ ಕರೆ ಬಂದಿವೆ. ಈ ಕರೆ ಮಾಡುವವರು ಯಾರು, ಅವರ ಉದ್ದೇಶ ಏನು ಎಂಬುದರ ಬಗ್ಗೆ ಅಧಿಕಾರಿಗಳು ಹಲವು ಬಾರಿ ವಿಶ್ಲೇಷಿಸಿದ್ದಾರೆ. ಉದಾಹರಣೆಗೆ, ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದಂತಹ ಘಟನೆಗಳು ದೃಶ್ಯ ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಸಾರವಾದಾಗ, ಕೆಲವರು ಅದರಿಂದ ಪ್ರೇರೇಪಿತರಾಗುತ್ತಾರೆ. ತಮ್ಮ ವೈಯಕ್ತಿಕ ಲಾಭಕ್ಕೆ ಬಾಂಬ್ ಬೆದರಿಕೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂದು ಯೋಚಿಸುತ್ತಾರೆ. ಚುನಾವಣೆ ಸಂದರ್ಭದಲ್ಲಿ ಅಥವಾ ಅಶಾಂತಿಯ ವಾತಾವರಣ ಇದ್ದರೆ ಇಂಥ ಚೇಷ್ಟೆ-ಚೆಲ್ಲಾಟಗಳು ಹೆಚ್ಚಾಗುತ್ತವೆ.
ಈ ಸಲವೂ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಈ ಹಾವಳಿ ಹೆಚ್ಚಾಗಿರುವುದನ್ನು ನೋಡಿದರೆ, ಶಾಂತಿಯುತ ಚುನಾವಣಾ ಪ್ರಕ್ರಿಯೆಗೆ ಭಂಗ ತರುವ ಉದ್ದೇಶ ಇದರ ಹಿಂದೆ ಇರಬಹುದೆಂದು ಅನ್ನಿಸದೇ ಇರದು. ತಮಗೆ ಏನೂ ಆಗುವುದಿಲ್ಲ ಎಂಬ ಹುಂಬ ಧೈರ್ಯ ಕೆಲವು ದುಷ್ಕರ್ವಿುಗಳದ್ದಾದರೆ, ವಿಕೃತ ಸಂತೋಷ ಅನುಭವಿಸುವ ಕುತ್ಸಿತ ಇರಾದೆ ಇನ್ನು ಕೆಲವರದು. ಬೇರೆಯವರ ಹೆಸರು ಕೆಡಿಸಲು ಅವರ ಸಂಖ್ಯೆಯಿಂದ ಅಥವಾ ಇಮೇಲ್ ಐಡಿಯಿಂದ ಬೆದರಿಕೆ ಹಾಕುವ ‘ಚಾಲಾಕಿ’ಗಳೂ ಇದ್ದಾರೆ. ಭಾರತೀಯ ದಂಡ ಸಂಹಿತೆಯ ಚಾಪ್ಟರ್ 22ರಲ್ಲಿ ಹೇಳಿರುವಂತೆ, ಇಂಥ ಅಪರಾಧಕ್ಕೆ ಅದರ ಗಂಭೀರತೆ ಆಧರಿಸಿ 2ರಿಂದ 7 ವರ್ಷದವರೆಗೆ ಜೈಲು ವಿಧಿಸಲು ಅವಕಾಶವಿದೆ. ಆದರೆ ಎಷ್ಟೋ ಸಲ ಪೊಲೀಸರು ತಮ್ಮ ಹಂತದಲ್ಲೇ ಕಠಿಣ ಎಚ್ಚರಿಕೆ ನೀಡಿ, ಬಿಟ್ಟುಬಿಡುತ್ತಾರೆ. ಇದರ ಬದಲು ಕೆಲವರಿಗಾದರೂ ಕಠಿಣ ಶಿಕ್ಷೆಯಾಗುವಂತೆ ಮಾಡಿ ಆ ಸುದ್ದಿಯನ್ನು ವ್ಯಾಪಕವಾಗಿ ಪ್ರಚುರಪಡಿಸಿದರೆ ಬೇರೆಯವರೂ ಇಂತಹ ಕೃತ್ಯಕ್ಕೆ ಕೈಹಾಕಲು ಹಿಂಜರಿಯುತ್ತಾರೆ.
ಜೈಲಿನಿಂದ ಹೊರಬರುತ್ತಿದ್ದಂತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಎಚ್​.ಡಿ ರೇವಣ್ಣ! ಹೇಳಿದಿಷ್ಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + one =
Remember me
