ಹನೂರು:ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ದೇವರ ದರ್ಶನ ಪಡೆಯುವ ವಿಶೇಷ ದರದ ಟಿಕೆಟ್​ ಕೌಂಟರ್​ನಲ್ಲಿ ಗುರುವಾರ ಸಿಬ್ಬಂದಿ ಎಡವಟ್ಟಿನಿಂದ ಭಕ್ತನೊಬ್ಬನ ಕೈ ಸೇರಿದ್ದ 2.93 ಲಕ್ಷ ರೂಪಾಯಿ ಶನಿವಾರ ಸಂಜೆ ಪ್ರಾಧಿಕಾರದ ಕೈ ಸೇರಿದೆ.
ಬೆಂಗಳೂರಿನ ದಾಸರಹಳ್ಳಿ ತಾಲೂಕು ಮೇದರಹಳ್ಳಿ ಗ್ರಾಮ ನಿವಾಸಿ, ಭಕ್ತ ವೆಂಕಟೇಶ್​ಮೂರ್ತಿ ಅವರು ಹಣವನ್ನು ಪೊಲೀಸರ ಸಮ್ಮುಖದಲ್ಲಿ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜುಗೆ ವಾಪಸ್​ ಮಾಡಿದ್ದು, ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.
ಏನಾಗಿತ್ತು?:ಭೀಮನ ಅಮಾವಾಸ್ಯೆ ಹಿನ್ನೆಲೆ ಗುರುವಾರ ಮಾದಪ್ಪನ ಸನ್ನಿಧಿಗೆ ದೇವರ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದರು. 500 ರೂ. ಟಿಕೆಟ್​ ಕೌಂಟರ್​ನಲ್ಲಿ ಸಿಬ್ಬಂದಿ ನಾಗಭೂಷಣ್​ ಎಂಬುವರು ಸಂಗ್ರಹವಾಗಿದ್ದ 2.93 ಲಕ್ಷ ರೂ.ಗಳನ್ನು ಲಾಡು ಪ್ರಸಾದದ ಬ್ಯಾಗ್​ನಲ್ಲಿ ಕಟ್ಟಿ ಟೇಬಲ್​ನಲ್ಲಿ ಇಟ್ಟಿದ್ದರು. ಈ ವೇಳೆ ಜತೆಗಿದ್ದ ಸಹಾಯಕ ಹಣದ ಬ್ಯಾಗ್​ ಪರಿಶೀಲಿಸದೆ ಲಾಡು ಪ್ರಸಾದದ ಬ್ಯಾಗ್​ಗಳ ಜತೆ ಸೇರಿಸಿದ್ದ. ಆದರೆ, ಇದನ್ನು ಪರಿಶೀಲಿಸದೆ ನಾಗಭೂಷಣ್​ ಅವರು ವೆಂಕಟೇಶ್​ಮೂರ್ತಿಗೆ ಟಿಕೆಟ್​, ಲಾಡು ಪ್ರಸಾದದ ಜತೆಗೆ ಹಣವಿದ್ದ ಬ್ಯಾಗ್​ ಅನ್ನೂ ನೀಡಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹಣ ಕಳೆದುಕೊಂಡ ಬಗ್ಗೆ ಸುದ್ದಿ ಪ್ರಸಾರವಾಗಿತ್ತು.
ಅತ್ತ ವೆಂಕಟೇಶ್​ಮೂರ್ತಿ ಅವರು ತನ್ನ ಸ್ನೇಹಿತರೊಂದಿಗೆ ಮಲೆಮಹದೇಶ್ವರ ಬೆಟ್ಟದ ಪೊಲೀಸ್​ ಠಾಣೆಗೆ ಆಗಮಿಸಿ ಹಣವನ್ನು ಹಿಂತಿರುಗಿಸಿದ್ದಾರೆ. ಇನ್ಸ್​ಪೆಕ್ಟರ್​ ಸಮ್ಮುಖ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು ಅವರಿಗೆ ಹಣವನ್ನು ಹಸ್ತಾಂತರಿಸಲಾಯಿತು. ಮನೆಗೆ ತೆರಳಿ ನೋಡಿದಾಗ ಹಣ ಇರುವುದು ತಿಳಿದುಬಂತು. ಹಾಗಾಗಿ ವಾಪಸ್​ ನೀಡಿದ್ದೇನೆ ಎಂದು ವೆಂಕಟೇಶ್​ಮೂರ್ತಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಹಣ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದ ಸಿಬ್ಬಂದಿಯ ನೆರವಿಗೆ ಪ್ರಾಧಿಕಾರದ ನೌಕರರ ಸಂಘ ಧಾವಿಸಿತ್ತು. ಶುಕ್ರವಾರ ಸಂಜೆ 1 ಲಕ್ಷ ರೂ. ಚೆಕ್ ಅನ್ನು ಹಸ್ತಾಂತರಿಸಿತ್ತು. ಆದರೆ ಭಕ್ತನೇ ಬಂದು ವಾಪಸ್​ ಹಣ ಕೊಟ್ಟಿದ್ದಂತೆ ಎಲ್ಲ ಸಮಸ್ಯೆಯೂ ಬಗೆಹರಿದಿದೆ.
ಸಿದ್ದರಾಮೋತ್ಸವ ಹಿನ್ನೆಲೆ ಲಾಡ್ಜ್‌, ಹೋಟೆಲ್​, ರೆಸ್ಟೋರೆಂಟ್‌ಗಳು ಹೌಸ್‌ಫುಲ್! ಕೋಟ್ಯಂತರ ರೂಪಾಯಿ ವಹಿವಾಟು…

ಮೃತಪಟ್ಟ 30 ವರ್ಷದ ಬಳಿಕ ವಿವಾಹ! ದಕ್ಷಿಣ ಕನ್ನಡದಲ್ಲಿ ಅದ್ದೂರಿಯಾಗಿ ನಡೆಯಿತು ಪ್ರೇತಗಳ ಮದ್ವೆ

ಮನೆ-ಮನೆಗೂ ತಲಾ 5 ಸಾವಿರ ರೂಪಾಯಿ ದಾನ ಮಾಡ್ತೀನಿ: ಕೆಜಿಎಫ್​ ಬಾಬು ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 14 =
Remember me
