|ಎಚ್​.ಎಸ್​. ಭರತ್​ಕುಮಾರ್​ಶ್ರೀರಂಗಪಟ್ಟಣರಾಜ್ಯದ ಪ್ರಸಿದ್ಧ ಶಕ್ತಿದೇವತಾ ಕೇಂದ್ರಗಳಲ್ಲಿ ಒಂದಾದ ಗಂಜಾಂನ ಶ್ರೀನಿಮಿಷಾಂಬ ದೇವಾಲಯದಲ್ಲಿ ಭಕ್ತರ ಕಾಣಿಕೆಯ ಹುಂಡಿಯ ಜತೆ ಜತೆಗೆ ಇ-ಕಾಣಿಕೆ ಯೋಜನೆಗೆ ಚಾಲನೆ ಸಿಕ್ಕಿದೆ. ಗೂಗಲ್​ ಪೇ, ಫೋನ್​ ಪೇ, ಪೇಟಿಎಂ ಮೂಲಕ ಭಕ್ತರು ಕಾಣಿಕೆ ಹಣವನ್ನ ಪಾವತಿಸಬಹುದು. ಅದಕ್ಕಾಗಿ ದೇವಲಾಯದಲ್ಲಿ 2 ಕಡೆ ಬೃಹತ್​ ಇ-ಸ್ಕ್ಯಾನರ್​ ಪರದೆ ಅಳವಡಿಸಲಾಗಿದೆ.
ಶಕ್ತಿ ದೇವತೆಯ ಆರಾಧನೆಯಲ್ಲಿ ಪ್ರಮುಖ ಸ್ಥಳವಾಗಿರುವ ನಿಮಿಷಾಂಬ ದೇವಾಲಯವು ಭಕ್ತರ ಕಾಣಿಕೆ ಸಂಗ್ರಹದಿಂದ ಆರ್ಥಿಕವಾಗಿಯೂ ಮುಂಚೂಣಿಯಲ್ಲಿದೆ. ಮಂಗಳವಾರ, ಶುಕ್ರವಾರ, ಶನಿವಾರ, ಭಾನುವಾರ ಹಾಗೂ ರಜೆ ದಿನಗಳಲ್ಲಿ ಸಾಕಷ್ಟು ಜನರ ಇಲ್ಲಿಗೆ ಭೇಟಿ ನೀಡುತ್ತಾರೆ. ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಭಕ್ತರ ಸಂಖ್ಯೆಯನ್ನು ನಿಯಂತ್ರಿಸುವುದು ದೊಡ್ಡ ಸಾಹಸದ ಕೆಲಸ. ಇಷ್ಟೆಲ್ಲಾ ಭಕ್ತರನ್ನು ಹೊಂದಿರುವ ಈ ದೇವಾಲಯದಲ್ಲಿ ಪ್ರಸ್ತುತ 19 ಹುಂಡಿಗಳಿದ್ದು, ಪ್ರತಿ 3 ತಿಂಗಳಿಗೊಮ್ಮೆ ದೇವಾಲಯದ ಆಡಳಿತ ಮಂಡಳಿ, ಶ್ರೀರಂಗಪಟ್ಟಣದ ಎಸ್​ಬಿಐ ಶಾಖೆಯ ವ್ಯವಸ್ಥಾಪಕರು, ಸಿಬ್ಬಂದಿಯೊಂದಿಗೆ ಹುಂಡಿ ತೆರದು ಸ್ತ್ರೀಶಕ್ತಿ ಸ್ವಸಹಾಯ ಸಂಘದ ನೂರಾರು ಸದಸ್ಯರೊಂದಿಗೆ 1 ದಿನಪೂರ್ತಿ ವಿಡಿಯೋ ಚಿತ್ರೀಕರಣದ ಕಣ್ಗಾವಲಿನೊಂದಿಗೆ ಎಣಿಕೆ ಕಾರ್ಯ ನಡೆಸಿ ಲೆಕ್ಕಾಚಾರ ಮಾಡಿ ಬ್ಯಾಂಕಿನಲ್ಲಿ ಜಮಾ ಮಾಡಲಾಗುತ್ತದೆ.
2 ಬೃಹತ್​ ಇ-ಸ್ಕ್ಯಾನರ್​ ಪರದೆ ಅಳವಡಿಕೆ:ಇದೀಗ ಈ ಎಲ್ಲ ಶ್ರಮವನ್ನು ಕಡಿತಗೊಳಿಸುವ ಜತೆಗೆ ದೇವಾಲಯಗಳಲ್ಲಿ ನಡೆಯುವ ಕಳ್ಳತನ, ಹುಂಡಿ ಹಣ ಲೂಟಿ, ದೇವಾಲಯದಲ್ಲಿ ಹುಂಡಿಗಳನ್ನು ಇರಿಸಿರುವ ಕಾರಣ ಎದುರಾಗಿರುವ ಸ್ಥಳಾವಕಾಶದ ಕೊರತೆ ಸೇರಿದಂತೆ -ಎಣಿಕೆ ಕಾರ್ಯಗಳಲ್ಲಿ ನಡೆಯುವ ಕೆಲವೊಂದು ಸಮಸ್ಯೆಗಳನ್ನು ಸಾಧ್ಯವಾದಷ್ಟು ತಗ್ಗಿಸಿ ಆಧುನಿಕತೆ ಸದ್ಬಳಕೆಯೊಂದಿಗೆ ದೇವಾಲಯದ ಲೆಕ್ಕಾಚಾರವನ್ನು ಇನ್ನಷ್ಟು ಪಾರದರ್ಶಕತೆಯಿಂದ ನಿಯಮಾನುಸಾರಕ್ಕೆ ತರಲು ತಿರ್ಮಾನಿಸಲಾಗಿದೆ. ಎಸ್​ಬಿಐ ಬ್ಯಾಂಕ್​ ಸಹಕಾರದೊಂದಿಗೆ ದೇವಾಲಯದಲ್ಲಿ 2 ಸ್ಥಳಗಳಲ್ಲಿ ಭಕ್ತರಿಂದ ಕಾಣಿಕೆ ಸಂಗ್ರಹಿಸಲು ಬೃಹತ್​ ಇ-ಸ್ಕಾನರ್​ ಪರದೆಗಳನ್ನು ಇಟ್ಟು ಕಾಣಿಕೆಯನ್ನು ಭಕ್ತರ ಖಾತೆಯಿಂದ ನೇರವಾಗಿ ದೇವಾಲಯದ ಖಾತೆಗೆ ಜಮಾ ಮಾಡಿಕೊಂಡು ಸಂಗ್ರಹಿಸುವ ಕಾರ್ಯಕ್ಕೆ ಗುರುವಾರ(ಆ.11) ಚಾಲನೆ ನೀಡಲಾಗಿದೆ.

ಅನ್ನಸಂತರ್ಪಣೆ ಕೇಂದ್ರಕ್ಕೆ ಚಾಲನೆ:ನಿಮಿಷಾಂಬ ದೇಗುಲದಲ್ಲಿ ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ ಕಾರ್ಯಕ್ಕೆ ಮುಂಬರುವ ಹುಣ್ಣಿಮೆ ದಿನದಂದು ಚಾಲನೆ ನೀಡಲಾಗುತ್ತಿದೆ. ದೇವಾಲಯದಲ್ಲಿ 4.84 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಭೋಜನ ಶಾಲೆಯಲ್ಲಿ ಮಧ್ಯಾಹ್ನ 12.30 ರಿಂದ 3 ಗಂಟೆವರೆಗೆ ಪ್ರಸಾದ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದೀಗ ಅನ್ನಸಂತರ್ಪಣೆಗೆ ನೆರವಾಗಲು ಮೊದಲನೆಯದಾಗಿ ಮೈಸೂರಿನ ಉದ್ಯಮಿ ಮೋಹನ್​ ಎಂಬುವರು ದೇವಾಲಯದಲ್ಲಿ ಅಳವಡಿಸಿರುವ ಬೃಹತ್​ ಸ್ಕಾನರ್​ ಪರದೆ ಮುಖಾಂತರ 50 ಸಾವಿರ ರೂ. ಕಾಣಿಕೆಯನ್ನು ಇ-ಹುಂಡಿಗೆ ಕಳಿಸಿ ಚಾಲನೆ ನೀಡಿದರು. ಇದಾದ ಅರ್ಧ ತಾಸಿನಲ್ಲಿ 70 ಸಾವಿರ ರೂ. ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಯಿತು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಶಕ್ತಿ ದೇವತೆಗೆ ಲೆಕ್ಕವಿಲ್ಲದಷ್ಟು ಆರಾಧಕರು ಕೆಲವೊಂದು ಸಂಕಲ್ಪ ಮಾಡಿಕೊಂಡು ಅವುಗಳು ಈಡೇರಿದ ಬಳಿಕ ಕಾಣಿಕೆ ರೂಪದಲ್ಲಿ ಅರ್ಪಿಸುತ್ತಾರೆ. ದೇವಾಲಯದಲ್ಲಿ ಕಾಣಿಕೆ ಹುಂಡಿಗಳ ಸಂಖ್ಯೆ ಹೆಚ್ಚಿರುವ ಕಾರಣ ಭಕ್ತರು ಹಾಗೂ ಪ್ರವಾಸಿಗರು ಜಮಾವಣೆಗೊಂಡ ವೇಳೆ ಸ್ಥಳಾವಕಾಶ ಕೊರತೆ ಇರುತ್ತದೆ. ಭಕ್ತರು ಹಣ ತೆಗೆದು ಹಾಕುವ ವೇಳೆ ಒಡವೆ, ಹಣ ಅಥವಾ ಪರ್ಸ್​ ಬೀಳಿಸಿಕೊಳ್ಳುವ ಅಥವಾ ಗುಂಪಿನಲ್ಲಿ ಕಳ್ಳರು ತಮ್ಮ ಕೈ ಚಳಕ ತೋರುವ ಗೋಜು ಇ-ಸ್ಕ್ಯಾನರ್​ ಅಳವಡಿಕೆಯಿಂದ ತಪ್ಪುತ್ತದೆ.| ಸೂರ್ಯನಾರಾಯಣ ಭಟ್​ದೇವಾಲಯದ ಪ್ರಧಾನ ಅರ್ಚಕ
ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಹುಂಡಿಯಲ್ಲಿ ಕಾಣಿಕೆ ಹಾಕುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಸಾಕಷ್ಟು ಜನರು ಗೂಗಲ್​ ಪೇ, ಫೋನ್​ ಪೇ, ಪೇಟಿಎಂ ಬಳಸುವ ಕಾರಣದಿಂದ ಹುಂಡಿಗೆ ಹಣ ಹಾಕಲು ಚಿಲ್ಲರೆಗಾಗಿ ಪರದಾಡುತ್ತಾರೆ. ಹೀಗಾಗಿ ಕಾಣಿಕೆ ಹಣವನ್ನು ಇ-ಹುಂಡಿಯ ಮುಖಾಂತರ ಇದೀಗ ಹಾಕಬಹುದು. ಜತೆಗೆ ದೇವಾಲಯಗಳಲ್ಲಿನ ಹುಂಡಿ ದೋಚುವ ಪ್ರಕರಣಕ್ಕೂ ಕಡಿವಾಣ ಹಾಕಿ ರಕ್ಷಣೆ ಒದಗಿಸಬಹುದು. ಮೊದಲು ನಿಮಿಷಾಂಬ ದೇವಾಲಯದಲ್ಲಿ ಈ ವ್ಯವಸ್ಥೆ ತರಲಾಗಿದ್ದು, ಶ್ರೀರಂಗನಾಥಸ್ವಾಮಿ ದೇವಾಲಯದಲ್ಲೂ ಜಾರಿಗೆ ತರಲಾಗುವುದು.| ಎಚ್​.ಎಸ್​.ಮಹೇಶ್​ದೇವಾಲಯದ ಕಾರ್ಯನಿರ್ವಹಣಾ ಅಧಿಕಾರಿ
ಮನೆ ಬಾಗಿಲಿಗೆ ಬಂದ ಗಿಫ್ಟ್​ ಕೂಪನ್​ ಆಸೆಗಾಗಿ 65 ಸಾವಿರ ರೂ. ಕಳೆದುಕೊಂಡ ಮಧುಗಿರಿಯ ಕುರಿಗಾಹಿ!

ಮೈಸೂರು-ಚೆನ್ನೈಗೆ ಬೆಳಗಿನ ವಿಮಾನಯಾನ ಸೇವೆ ಇಂದಿನಿಂದ ಆರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − eight =
Remember me
