ಬೆಂಗಳೂರು:ಬಿಜೆಪಿ ಸರ್ಕಾರಕ್ಕೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು ಮೂರು ವರ್ಷವಾಗಿದೆ. ಬಸವರಾಜ ಬೊಮ್ಮಾಯಿ ಅವರಿ ಸಿಎಂ ಆಗಿ ಒಂದು ವರ್ಷ. ಈ ಹೊತ್ತಲ್ಲಿ ರಾಜ್ಯದ ಜನರ ನಾಡಿಮಿಡಿತ ಏನುಮತ್ತು ಎತ್ತ? ಈ ಸರ್ಕಾರದ ಬಗ್ಗೆ ಜನರ ಅಭಿಪ್ರಾಯವೇನು? ಜನ ಯಾವ ಬದಲಾವಣೆ ಬಯಸುತ್ತಿದ್ದಾರೆ? ಯಾರ ಪರವಾಗಿ ತಕ್ಕಡಿ ವಾಲುತ್ತಿದೆ? ಈ ಕ್ಷಣ ವಿಧಾನಸಭಾ ಚುನಾವಣೆ ನಡೆದರೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ? ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬರಬಹುದು? ಮುಂದಿನ ಸಿಎಂ ಯಾರಾಗಬೇಕು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಡುವ ಪ್ರಯತ್ನ ಮಾಡುತ್ತಿದೆ ದಿಗ್ವಿಜಯ ನ್ಯೂಸ್​. ಅದಕ್ಕಾಗಿ ರಾಜ್ಯಾದ್ಯಂತ ಜನರ ಬಳಿಗೇ ಹೋಗಿ ಮೆಗಾ ಸರ್ವೇ ಮಾಡಿದೆ.
ರಾಜ್ಯದ 31 ಜಿಲ್ಲೆಗಳಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ 20,424 ಜನರಿಂದ ಸ್ಯಾಂಪಲ್​ ಸಂಗ್ರಹಿಸಲಾಗಿದೆ. ದಿಗ್ವಿಜಯ ನ್ಯೂಸ್​ ಮತ್ತು ವಿಜಯವಾಣಿ ದಿನ ಪತ್ರಿಕೆ ಜಂಟಿಯಾಗಿ ನಡೆಸಿದ ಸರ್ವೇಯಲ್ಲಿ ಕರ್ನಾಟಕ ಜನರ ನಾಡಿಮಿಡಿತ ಅರಿಯಲಾಗಿದೆ, ಜುಲೈ 10ರಿಂದ 22ರ ವರೆಗೂ 60 ವರದಿಗಾರರು ಮತ್ತು 200ಕ್ಕೂ ಹೆಚ್ಚು ಸಿಬ್ಬಂದಿ ಸರ್ವೇ ಕಾರ್ಯ ನಡೆಸಿದ್ದಾರೆ. ಸರ್ವೇ ಪ್ರಕಾರ ಕರ್ನಾಟಕದ ನಾಡಿಮಿಡಿತ ಏನು? ಎಂಬುದರ ಡೀಟೇಲ್ಸ್​ ಇಲ್ಲಿದೆ ನೋಡಿ.
ಈ ಕ್ಷಣದಲ್ಲಿ ವಿಧಾನಸಭೆ ಬೈ ಎಲೆಕ್ಷನ್ ಆದ್ರೆ ಯಾರು ಗೆಲ್ತಾರೆ? ಯಾರಿಗೆ ‘ರಾಜ್ಯಾಧಿಕಾರ?

ಈ ಮೂರು ಸರ್ಕಾರಗಳಲ್ಲಿ ಯಾವುದು ಉತ್ತಮ?

ರಾಜ್ಯದಲ್ಲಿ ಮುಂದಿನ ಸಿಎಂ ಸ್ಥಾನಕ್ಕೆ ನಿಮ್ಮ ಆಯ್ಕೆ?

ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಯಾರು?

ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿ ಯಾರಾಗಬೇಕು? ಕರಾವಳಿ ಭಾಗದಲ್ಲಿ, ಹಳೇ ಮೈಸೂರು ಭಾಗದಲ್ಲಿ ಯಾವ ಪಕ್ಷ ಪ್ರಾಬಲ್ಯ ಮೆರೆಯಲಿದೆ? ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರಲ್ವಾ?ಬಸವರಾಜ ಬೊಮ್ಮಾಯಿ ಸರ್ಕಾರದ ಆಡಳಿತ ಹೇಗಿದೆ? ಯಾವ ಕ್ಷೇತ್ರದಲ್ಲಿ ಸಾಧನೆ ಚೆನ್ನಾಗಿದೆ? ಜನರ ಅಭಿಪ್ರಾಯವೇನು?..ಹೀಗೆ ನಾನಾ ಪ್ರಶ್ನೆಗಳಿಗೆ ಜನರರ ಉತ್ತರ ಏನೆಂದು ಅರಿಯಲು ದಿಗ್ವಿಜಯ ನ್ಯೂಸ್​ ನೋಡಿ ಅಥವಾ ಈ ಲಿಂಕ್​ ಅನ್ನು ಕ್ಲಿಕ್​ ಮಾಡಿ…https://www.facebook.com/DighvijayNews/videos/1234122867404116/https://m.facebook.com/story.php?story_fbid=2754858021325417&id=197987604008654https://www.facebook.com/DighvijayNews/videos/635342687561560/https://youtu.be/uAWtKiYMZDYhttps://youtu.be/YSwGWaEIsGs
ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

ಮಧುಚಂದ್ರಕ್ಕೆ ಹೋಗಬೇಕಿದ್ದ ನವವಿವಾಹಿತ ಆಸ್ಪತ್ರೆಗೆ… ತಡರಾತ್ರಿ ಕುಸಿದುಬಿದ್ದ ಮನೆಯ ಗೋಡೆ, ಛಾವಣಿ…

ಗಾಂಜಾ ಗ್ಯಾಂಗ್​ ಹಿಡಿಯಲು ಹೊರಟ್ಟಿದ್ದ ವೇಳೆ ಅಪಘಾತ: ಪಿಎಸ್​ಐ ದೀಕ್ಷಿತ್​ರ ಆರೋಗ್ಯ ವಿಚಾರಿಸಿದ ಗೃಹಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 18 =
Remember me
