ಬೆಂಗಳೂರು:ನಿರಂತರ ಆದಾಯ ಹೆಚ್ಚಳ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ವಿರುದ್ಧ ಇಡಿ ಅಧಿಕಾರಿಗಳು ಗುರುವಾರ ದೆಹಲಿ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರ ಪಾರ್ಟಿನೇ ಬಿಡೋಲ್ಲ. ಇನ್ನು ನಮ್ಮನ್ನು ಬಿಡ್ತಾರಾ? ಅಹಮದ್ ಪಟೇಲ್​ಗೆ ಸಹಾಯ ಮಾಡಿದ್ದಕ್ಕೆ ಇದೆಲ್ಲ. ಪೋಲಿಟಿಕಲಿ ಎಲ್ಲ ಅಸ್ತ್ರ ಉಪಯೋಗಿಸ್ತಿದ್ದಾರೆ. ನಾನೇನು ತಪ್ಪು ಮಾಡಿಲ್ಲ ಅಂತ ಇಡೀ ದೇಶಕ್ಕೆ ಗೊತ್ತಿದೆ ಎಂದರು.
ಚಾರ್ಜ್​ಶೀಟ್ ಫೈಲ್ ಮಾಡಿರೋದು ಮಾಧ್ಯಮಗಳ ಸುದ್ದಿ ನೋಡಿ ನನಗೆ ಗೊತ್ತಾಯ್ತು. ನಮಗೆ ಇನ್ನೂ ಕಾಪಿ ಸಿಕ್ಕಿಲ್ಲ. ಸಾಮನ್ಯವಾಗಿ 6 ತಿಂಗಳಲ್ಲಿ ಚಾರ್ಜ್​ಶೀಟ್​ ಫೈಲ್ ಮಾಡ್ತಾರೆ. ಬಹಳ ದೊಡ್ಡ ತನಿಖೆ ಮಾಡಿದ್ದಾರೆ. ಅವರು ಹೊಸದಾಗಿ ಸೃಷ್ಠಿ ಮಾಡಲು ಸಾಧ್ಯವಿಲ್ಲ. ಕಾಪಿ ಬರಲಿ ಕಾನೂನಿದೆ ದೇಶದಲ್ಲಿ. ಸತ್ಯ-ಧರ್ಮ ಇದೆ. ಅವರು ನಮಗೆ ಫರ್ದರ್ ನೋಟಿಸ್ ಕೊಡ್ತಾರೆ. ಆಗ ಖಂಡಿತ ಪರಿಶೀಲಿಸ್ತೀವಿ. ನಾವು ಕಾನೂನು ಪರಿಪಾಲನೆ ಮಾಡುವವರು. ರಾಜಕೀಯವಾಗಿ ಎದುರಿಸುವವರಿಗೆಲ್ಲ ಬಿಜೆಪಿ ಹೀಗೆ ಮಾಡ್ತಾ ಇದೆ. ಅವರಿಗೆ ನಾವು ಶರಣಾಗಬೇಕು, ಇಲ್ಲ ಅವರ ಜೊತೆ ಸೇರಿಕೊಳ್ಳಬೇಕು ಅಂತ. ಐ ವಿಶ್ ದೆಮ್ ಆಲ್ ದಿ ಬೆಸ್ಟ್… ಎಂದು ಡಿಕೆಶಿ ಕಿಡಿಕಾರಿದರು.
https://www.vijayavani.net/a-a-dk-suresh-about-ed-filed-a-chargesheet-against-kpcc-president-dks/
ಊಟ ಇಲ್ಲ ಎಂದಿದ್ದಕ್ಕೆ ಸಿಬ್ಬಂದಿಯನ್ನು ಕೂಡಿಹಾಕಿ ಡಾಬಾಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು! ಕೊಪ್ಪಳದಲ್ಲಿ ಅಮಾನವೀಯ ಕೃತ್ಯ

ಕುಂದಾಪುರದ ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಭೋಜಣ್ಣ ಶೆಟ್ಟಿ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
