ಬೀದರ್:ಇಲ್ಲಿನ ಖಾಸಗಿ ಆಸ್ಪತ್ರೆ ವೈದ್ಯರೋರ್ವರು ದೇವಸ್ಥಾನವೊಂದರಲ್ಲಿ ಉಚಿತವಾಗಿ ಮಾಸ್ಕ್​ ವಿತರಣೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ನಗರದಲ್ಲಿ ಐತಿಹಾಸಿಕ ಪ್ರಸಿದ್ಧವಾದ ಪಾಪನಾಶ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವೈದ್ಯ ಅಲ್ಲಮ ಪ್ರಭು ಆನಂದವಾಡೆ ಎಂಬುವರು ಪ್ರಸಾದ ರೂಪದಲ್ಲಿ ಎನ್​95 ಮಾಸ್ಕ್​ ವಿತರನೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಅಷ್ಟಾದರೂ ಕೆಲವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಅಂಥವರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಡಾ. ಅಲ್ಲಮ ಪ್ರಭು ಮಾಡುತ್ತಿದ್ದಾರೆ.ಇದನ್ನೂ ಓದಿ:ದೇಶದಲ್ಲಿ ಇಂದು 28,701 ಮಂದಿಯಲ್ಲಿ ಕರೊನಾ; 9 ಲಕ್ಷದ ಸಮೀಪಕ್ಕೆ ಬಂತು ಸೋಂಕಿತರ ಸಂಖ್ಯೆ
ಅಲ್ಲಮ ಪ್ರಭು ಅವರು ಭಾಲ್ಕಿಯ ಕುಂಟೆಸಿರ್ಸಿ ಗ್ರಾಮದವರು. ಹೈದರ್​ಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮೂರಿನ ಜನರಿಗಾಗಿ ಸ್ವಂತ ಖರ್ಚಿನಲ್ಲಿಯೇ ಮಾಸ್ಕ್​ ವಿತರಣೆ ಮಾಡುತ್ತಿದ್ದಾರೆ. ಇದುವರೆಗೆ ಒಟ್ಟು ಒಂದು ಸಾವಿರ ಎನ್​ 95 ಮಾಸ್ಕ್​ಗಳನ್ನು ನೀಡಿದ್ದಾರೆ.
ಈ ಹಿಂದೆ ಡಾ. ಅಲ್ಲಮ ಅವರು ಹೈದರಾಬಾದ್​ನಲ್ಲಿ ನೆಲೆಸಿರುವ ಕನ್ನಡಿಗರಿಗೆ 1300 ಮಾಸ್ಕ್​ಗಳನ್ನ ವಿತರಣೆ ಮಾಡಿದ್ದರು.
ಕೊವಿಡ್​-19 ರೋಗಿಗಳಿಗೆ ಪ್ರವೇಶ ನಿರಾಕರಿಸಿದ 2 ಆಸ್ಪತ್ರೆಗಳಿಗೆ ಸೀಲ್​ಡೌನ್​ ಎಚ್ಚರಿಕೆ ನೀಡಿದ ಆರೋಗ್ಯ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + three =
Remember me
