ಶಿವಮೊಗ್ಗ:ಎನ್‌ಸಿಸಿ ಕಮಾಂಡರ್ ಮತ್ತು ಕಾರ್ಯಕರ್ತರಿಗೆ ಕರೊನಾ ನಿರೋಧಕ ಔಷಧ ಬೇಕೆಂದು ಮಿಲಿಟರಿ ಅಧಿಕಾರಿ ಹೆಸರಲ್ಲಿ ಶಿವಮೊಗ್ಗ ನಗರದ ವೈದ್ಯೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದ ವ್ಯಕ್ತಿಯೊಬ್ಬ 1 ಲಕ್ಷದ 1 ಸಾವಿರ ರೂ. ವಂಚಿಸಿದ್ದಾನೆ.
ನಗರದಲ್ಲಿ ಕ್ಲಿನಿಕ್ ಇಟ್ಟಿಕೊಂಡಿರುವ ವೈದ್ಯೆ ಮೋಸ ಹೋಗಿದ್ದಾರೆ. ಕ್ಯಾಪ್ಟನ್ ಶಶಿಕುಮಾರ್ ಹೆಸರಲ್ಲಿ ವೈದ್ಯೆಯನ್ನು ಮೊಬೈಲ್ ಮೂಲಕ ಸಂಪರ್ಕಿಸಿದ್ದ ವಂಚಕ ತನ್ನನ್ನು ಮಿಲಿಟರಿ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ. ಎನ್‌ಸಿಸಿ ಕಮಾಂಡರ್ ಮತ್ತು ಕಾರ್ಯಕರ್ತರಿಗೆ ಕರೊನಾ ಲಸಿಕೆ ಬೇಕಿದೆ. ಅದಕ್ಕೆ ತಗುಲುವ ವೆಚ್ಚವನ್ನು ಬ್ಯಾಂಕ್ ಖಾತೆಗೆ ಹಾಕುವುದಾಗಿ ತಿಳಿಸಿದ್ದ.
ಇದನ್ನು ನಂಬಿದ ವೈಧ್ಯೆ ಆತನಿಗೆ ತನ್ನ ಬ್ಯಾಂಕ್ ಖಾತೆಯ ವಿವರ ನೀಡಿದ್ದರು. ವಂಚಕ ಮೊಬೈಲ್ ಮೂಲಕ ಹಣ ವರ್ಗಾವಣೆ ಮಾಡುತ್ತೇನೆ. ಅದಕ್ಕೆ ನಿಮ್ಮ ಖಾತೆಯಿಂದ ಒಂದು ರೂ. ಕಳುಹಿಸಿ ಎಂದು ಹಾಕಿಸಿಕೊಂಡಿದ್ದ. ನಂತರ ವಿವಿಧ ಕಾರಣ ಹೇಳಿ ವೈದ್ಯೆಯಿಂದಲೇ 2,500 ರೂ., 9562 ರೂ. ಹಾಕಿಸಿಕೊಂಡಿದ್ದ. ಬಳಿಕ ಹಣ ಹಾಕಲು ಬ್ಯಾಂಕ್ ಖಾತೆಯಲ್ಲಿ ಕನಿಷ್ಠ 50 ಸಾವಿರ ರೂ. ಇರಬೇಕು. 50 ಸಾವಿರ ರೂ. ಇರುವ ಬೇರೆ ಖಾತೆ ನೀಡುವಂತೆ ಸೂಚಿಸಿದ್ದ. ಅದರಂತೆ ವೈದ್ಯೆ ತಮ್ಮ ಮತ್ತೊಂದು ಬ್ಯಾಂಕ್ ಖಾತೆ ನಂಬರ್ ನೀಡಿದ್ದರು. ಅದರಿಂದ ವಂಚಕ ಕ್ರಮವಾಗಿ 43,248 ರೂ., 21,500 ರೂ. ಹಾಗೂ 15 ಸಾವಿರ ರೂ. ಹಾಕಿಸಿಕೊಂಡಿದ್ದ. ಮತ್ತಷ್ಟು ಹಣ ಹಾಕುವಂತೆ ಕೇಳಿಕೊಂಡಾಗ ವೈದ್ಯೆ ಗದರಿಸಿದ್ದಾರೆ. ವಂಚಕ ಕರೆ ಸ್ಥಗಿತಗೊಳಿಸಿದ್ದಾನೆ. ಆ ಬಳಿಕ ವೈದ್ಯೆಗೆ ವಂಚನೆಗೆ ಒಳಗಾಗಿರುವುದು ಅರಿವಾಗಿದ್ದು ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ.
ಕಂಠದಲ್ಲಿ ಶ್ರೀಕೃಷ್ಣ! ಗಂಟಲು ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಕಾದಿತ್ತು ಶಾಕ್​

ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:9 + nine =
Remember me
