ಬೆಂಗಳೂರು:ಎಲ್ಲಿಯವರೆಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಇರ್ತಾರೋ ಅಲ್ಲಿಯವರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಲ್ಲ ಎಂದು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಶಪಥ ಮಾಡಿದರು.
ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಸಮಾವೇಶದಲ್ಲಿ ಮಾತನಾಡಿದ ಬಿಎಸ್​ವೈ, ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿಕೊಳ್ಳುವ ಕೆಲಸ ಕಾಂಗ್ರೆಸ್​ ಮಾಡ್ತಿದೆ. ನಿಮ್ಮ ಆಸೆ ಈಡೇರಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರುಗಳು ತಾವು ಅಧಿಕಾರಕ್ಕೆ ಬಂದೇ ಬಿಟ್ವಿ ಎಂಬ ಭ್ರಮೆಯಲ್ಲಿದ್ದಾರೆ. ಎಲ್ಲೀವರೆಗೆ ಪ್ರದಾನಿಯಾಗಿ ಮೋದಿ ಇರ್ತಾರೋ ಅಲ್ಲಿಯವರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಅಧಿಕಾರ ಸಿಗಲ್ಲ ಎಂದರು.
ಇನ್ನು ಸಚಿವ ಸುಧಾಕರ್​ರನ್ನು ಹಾಡಿಹೊಗಳಿದ ಯಡಿಯೂರಪ್ಪ, ಈ ಭಾಗದಲ್ಲಿ ಬಿಜೆಪಿ ಅಷ್ಟೊಂದು ಶಕ್ತಿಯುತವಾಗಿ ಬೆಳೆಯದ ಸಂದರ್ಭದಲ್ಲಿ ಸುಧಾಕರ್ ನೇತೃತ್ವದಲ್ಲಿ ಲಕ್ಷಾಂತರ ಜನ ಇಲ್ಲಿ ಸೇರಿದ್ದೀರಾ. ಸುಧಾಕರ್​ರ ಪರಿಶ್ರಮದಿಂದ ಈ ಭಾಗದಲ್ಲಿ ಹೆಚ್ಚಿನ ಶಾಸಕರು ಗೆದ್ದು, ಬಿಜೆಪಿ 150 ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತೆ. ಇಲ್ಲಿ ನೇಕಾರರ ಸಂಖ್ಯೆ ಹೆಚ್ಚಿದೆ, ನೇಕಾರರು ನನ್ನ ಕಣ್ಣಿದ್ದಂತೆ ಎಂದು ನಾನು ಅಧಿಕಾರಕ್ಕೆ ಬಂದ ವೇಳೆ ಹೇಳಿದ್ದೆ. ರೈತರಿಗೆ ನಮ್ಮ ಸರ್ಕಾರ ನೀಡಿದಷ್ಟು ಕೊಡುಗೆ ಬೇರೆ ಯಾರೂ ಮಾಡಿಲ್ಲ ಎಂದು ಬಿಎಸ್​ವೈ ಹೇಳಿದರು.
ರಾಹುಲ್ ಗಾಂಧಿ ಅವರು ಈಗ ಬಡವರ ಬಗ್ಗೆ ಮಾತಾಡ್ತಾರೆ. ಅವರ ಮನೆಯಲ್ಲಿ ಮೂವರು ಪ್ರಧಾನಿಯಾಗಿದ್ದರು. ಆದರೆ ಅವರೆಲ್ಲ ಬಡತನ ನಿವಾರಣೆ ಮಾಡಿದ್ರೇನು? ನಮ್ಮ ಪ್ರಧಾನಿ ಬಡವರ ಪರ ಕೆಲಸ ಮಾಡ್ತಿದ್ದಾರೆ ಎಂದ ಬಿಎಸ್​ವೈ, ಸಿದ್ದರಾಮಯ್ಯನವರು ಬೋಟ್​ನಲ್ಲಿ ಓಡಾಡುವ ಪರಿಸ್ಥಿತಿ ಬಂದಿದೆ ಎಂದು ಹೇಳ್ತಾರೆ. ಸಿದ್ದರಾಮಯ್ಯನವರೇ ನೀವು ಸಿಎಂ ಆದವರು. ಬೆಂಗಳೂರಿನಲ್ಲಿ ಹೆಚ್ಚಿನ ಮಳೆಯಾಗಿದ್ದು ನಿಮಗೆ ಅರಿವಿಲ್ಲವೆ? ಇದಕ್ಕೆಲ್ಲ ಅಧಿವೇಶನದಲ್ಲಿ ಉತ್ತರ ಕೂಡ್ತೇವೆ ಎಂದರು.
ಈ ಭಾಗದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದು ಬಿಜೆಪಿ ಮತ್ತು ಪ್ರಧಾನಿ ಅವರ ಬಗ್ಗೆ ಎಷ್ಟು ನಂಬಿಕೆ ಇಟ್ಟಿದ್ದೀರಾ ಎಂದು ಗೊತ್ತಾಗುತ್ತೆ. ಇಂತಹ ಜನಬೆಂಬಲ ನೋಡಿದ್ರೆ ನಮ್ಮ ಸರ್ಕಾರದ ಜನಪ್ರಿಯತೆ ತಿಳಿಯುತ್ತೆ ಎಂದರು.
ಯಡಿಯೂರಪ್ಪ ಅವರೇ ನಮ್ಮ ಪರಮೋಚ್ಛ ನಾಯಕ: ಜನಸ್ಪಂದನ ಸಮಾವೇಶದಲ್ಲಿ ಡಾ.ಸುಧಾಕರ್​ ಘೋಷಣೆ

ಜನಸ್ಪಂದನ ವೇದಿಕೆಯಲ್ಲಿ ‘ಕುಲದಲ್ಲಿ ಕೀಳ್ಯಾವುದೋ..’ ಹಾಡಿಗೆ ಮಸ್ತ್​ ಡಾನ್ಸ್​ ಮಾಡಿ ಸಭಿಕರನ್ನು ರಂಜಿಸಿದ ಎಂಟಿಬಿ ನಾಗರಾಜ್!

ಬೆಂಗ್ಳೂರಲ್ಲಿ 14 ವರ್ಷದ ಬಾಲಕಿಯನ್ನ ಮದ್ವೆಯಾದ 45 ವರ್ಷದ ಅಂಕಲ್​! ಮದ್ವೆಯಾದ 3 ದಿನದಲ್ಲೇ ಆಯ್ತು ತಕ್ಕಶಾಸ್ತಿ

ದಸರಾ ಜಂಬೂಸವಾರಿ ಆನೆಗಳ ತೂಕ ಪರೀಕ್ಷೆ: ತೂಕದಲ್ಲಿ ಅರ್ಜುನನೇ ಮೊದಲಿಗ, ಭಾರ ಹೆಚ್ಚಿಸಿಕೊಂಡ ಭೀಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 13 =
Remember me
