ಬೆಂಗಳೂರು:‘ಬಿ.ಎಸ್​.ಯಡಿಯೂರಪ್ಪ ಅವರೇ ನಮ್ಮ ಪರಮೋಚ್ಛ ನಾಯಕ’ ಎಂದು ಸಚಿವ ಡಾ.ಕೆ.ಸುಧಾಕರ್​ ಘೋಷಿಸಿದರು.
ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಜನಸ್ಪಂದನ ಸಮಾವೇಶದಲ್ಲಿ ಸ್ವಾಗತ ಭಾಷಣ ಮಾಡಿದ ಸುಧಾಕರ್​, ಯಡಿಯೂರಪ್ಪ ಅವರನ್ನ ಹಾಡಿ ಹೊಗಳಿದರು. ಕರೊನಾ ಸಂಕಷ್ಟ ಕಾಲದಲ್ಲಿ ಯಡಿಯೂರಪ್ಪ ಅವರು ಸಮರ್ಥ ಆಡಳಿತ ನಡೆಸಿದ್ದಾರೆ. ಅವರ ಹಾದಿಯಲ್ಲೇ ಬಸವರಾಜ ಬೊಮ್ಮಾಯಿ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ನರೇಂದ್ರ ಮೋದಿ ಅವರು ‘ನಾನು ಪ್ರಧಾನ ಸೇವಕ್’ ಅಂದ್ರು, ನಮ್ಮ ಬಸವರಾಜ ಬೊಮ್ಮಾಯಿ ಅವರು ‘ನಾನು ಕಾಮನ್ ಮ್ಯಾನ್’ ಅಂದ್ರು. ಇದು ಬಿಜೆಪಿ. ಜನ ಸೇವಕರು ನಾವು ಎಂದರು.
ನಮ್ಮ ಸಿಎಂ ಅಧಿಕಾರಕ್ಕೆ ಬಂದ ತಕ್ಷಣ ರೈತ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ನೀಡಿದ್ರು, ಹೀಗಾಗಿ ರೈತ ವಿದ್ಯಾನಿಧಿ ಉತ್ಸವ ಮಾಡ್ತಿದ್ದೇವೆ. ಯಾರದ್ದೋ ವೈಯಕ್ತಿಕ ಉತ್ಸವ ಅಲ್ಲ, 12 ಕೋಟಿ ಲಸಿಕೆಯನ್ನ ಕರೊನಾ ಸಂದರ್ಭದಲ್ಲಿ ನೀಡಿದ್ದೇವೆ. ನಾವು ಜನರ ಉತ್ಸವ ಮಾಡುತ್ತಿದ್ದೇವೆ, ಇದು ಒಬ್ಬ ವ್ಯಕ್ತಿಯ ಉತ್ಸವ ಅಲ್ಲ. ನಮ್ಮ ಸರ್ಕಾರ ಜನರಿಗಾಗಿ ಅನೇಕ ಕಾರ್ಯಕ್ರಮ ಕೊಟ್ಟಿದ್ವಿ, ಅದಕ್ಕಾಗಿ ಜನರ ಉತ್ಸವ ಮಾಡಲು ಮುಂದಾದ್ವಿ. ಇದನ್ನ ವಿಪಕ್ಷ ಕಾಂಗ್ರೆಸ್‌ ತಿಳಿದುಕೊಳ್ಳಬೇಕು ಎಂದು ಸುಧಾಕರ್​ ಮಾತಿನಲ್ಲೇ ತಿವಿದರು.
ನಮ್ಮದು ಡಬಲ್ ಇಂಜಿನ್ ಸರ್ಕಾರ, ಅವರದ್ದು ಡಬಲ್ ಡೋರ್ ಪಕ್ಷ. ಕಾಂಗ್ರೆಸ್‌ನವರ ಕಚ್ಚಾಟ ನೋಡಿ ನನಗೆ ಒಂದು ಹಾಡು ಜ್ಞಾಪಕಕ್ಕೆ ಬರ್ತಿದೆ. ‘ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ, ಏಕೆ ಕನಸು ಕಾಣುವೆ… ಸಿದ್ದರಾಮಯ್ಯನವರೇ ಡಿಕೆಶಿಯವರೇ ನಿಧಾನಿಸಿ ನಿದಾನಿಸಿ.. ನೀವು ಅಂದುಕೊಂಡಂತೆ ಏನು ಆಗೋಲ್ಲ…’ ಎಂದು ಹಾಡಿನ ಮೂಲಕ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಟಾಂಗ್ ಕೊಟ್ಟರು.
ಜನಸ್ಪಂದನ ವೇದಿಕೆಯಲ್ಲಿ ‘ಕುಲದಲ್ಲಿ ಕೀಳ್ಯಾವುದೋ..’ ಹಾಡಿಗೆ ಮಸ್ತ್​ ಡಾನ್ಸ್​ ಮಾಡಿ ಸಭಿಕರನ್ನು ರಂಜಿಸಿದ ಎಂಟಿಬಿ ನಾಗರಾಜ್!

ಬೆಂಗ್ಳೂರಲ್ಲಿ 14 ವರ್ಷದ ಬಾಲಕಿಯನ್ನ ಮದ್ವೆಯಾದ 45 ವರ್ಷದ ಅಂಕಲ್​! ಮದ್ವೆಯಾದ 3 ದಿನದಲ್ಲೇ ಆಯ್ತು ತಕ್ಕಶಾಸ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 11 =
Remember me
