ಉತ್ತರ ಕನ್ನಡ:ಜೋಯ್ಡಾದಲ್ಲಿ ಸಿನಿಮಾ ಚಿತ್ರೀಕರಣಕ್ಕೆಂದು ಬಂದ 20 ಕೋಟಿ ರೂ. ಬೆಲೆ ಬಾಳುವ ಶ್ವಾನವನ್ನು, ಕಾಡು ಪ್ರಾಣಿ ಎಂದು ಗೊಂದಲಕ್ಕೊಳಗಾಗಿ ಅರಣ್ಯ ಸಿಬ್ಬಂದಿ ತಪಾಸಣೆ ಮಾಡಿರುವಂತಹ ಘಟನೆ ನಡೆದಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕ ನಟನಾಗಿ ನಟಿಸುತ್ತಿರುವ ಗೌರಿಶಂಕರ ಸಿನಿಮಾ ಚಿತ್ರೀಕರಣಕ್ಕೆಂದು ಬೆಂಗಳೂರಿನಿಂದ ಈ ನಾಯಿಯನ್ನು ಕರೆತರಲಾಗಿತ್ತು. ಈ ವೇಳೆ ದಾಂಡೇಲಿಯಲ್ಲಿ ಗೊಂದಲಗೊಂಡ ಅರಣ್ಯ ಸಿಬ್ಬಂದಿಗಳು ಶ್ವಾನವನ್ನು ತಪಾಸಣೆ ನಡೆಸಿದ್ದಾರೆ.
ಈ ಶ್ವಾನ ಟಿಬೆಟಿಯನ್ ಮಸ್ತಫ್ ಜಾತಿಗೆ ಸೇರಿದೆ. ಅರಣ್ಯ ಅಧಿಕಾರಿಗಳು ಶ್ವಾನವನ್ನು ಕಾಡು ಪ್ರಾಣಿಯೆಂದು ವಶಕ್ಕೆ ಪಡೆಯಲು ಮುಂದಾದಾಗ, ಶ್ವಾನದ ಮಾಲೀಕ ಸತೀಶ್ ಕ್ಯಾಡಬಮ್ಸ್ ಅರಣ್ಯ ಇಲಾಖೆಗೆ ತಿಳುವಳಿಕೆ ನೀಡಿದ್ದಾರೆ. ಇದು ಶ್ವಾನ, ತೋಳ ಅಥವಾ ಇನ್ಯಾವುದೇ ಕಾಡುಪ್ರಾಣಿ ಅಲ್ಲ ಎಂದು ಮನವರಿಕೆ ಮಾಡಿದ್ದಾರೆ.
20 ಕೋಟಿ ಬೆಲೆಬಾಳುವ ಹೈದರ್ ಹೆಸರಿನ ಈ ಶ್ವಾನಕ್ಕೆ ತಂಗಲು ಹವಾ ನಿಯಂತ್ರಿತ ಕೊಠಡಿ ವ್ಯವಸ್ಥೆ ಮಾಡಲಾಗಿದೆ. 15 ದಿನಗಳ ಕಾಲ ರವಿಚಂದ್ರನ್ ಅಭಿನಯದ ಗೌರಿಶಂಕರ ಸಿನಿಮಾ ಚಿತ್ರಿಕರಣ ನಡೆಯಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 2 =
Remember me
