ಬೆಳಗಾವಿ:ಸಾಕು ಪ್ರಾಣಿಗಳ ಹುಟ್ಟಹಬ್ಬಕ್ಕೆ ಕೇಕ್​ ಕತ್ತರಿಸಿ ನೂರಾರು ಜನರಿಗೆ ಊಟ ಹಾಕಿಸುವುದನ್ನ ಕಂಡಿದ್ದೇವೆ. ಆದರೆ ಇಲ್ಲೊಬ್ಬರು ತನ್ನ ಪ್ರೀತಿಯ ಶ್ವಾನದ ಬರ್ತ್​ಡೆ ಹಿನ್ನೆಲೆ ಬರೋಬ್ಬರಿ 100 ಕೆಜಿ ತೂಕದ ಬೃಹತ್​ ಕೇಕ್ ಕತ್ತರಿಸಿ ಊರ ತುಂಬೆಲ್ಲಾ‌ ಮೆರವಣಿಗೆ ಮಾಡಿದ್ದಾರೆ. ಅಷ್ಟೇ ಅಲ್ಲ, 5 ಸಾವಿರಕ್ಕೂ ಹೆಚ್ಚು ಮಂದಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ! ಸಸ್ಯಾಹಾರಿಗಳಿಗೂ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿಸಿದ್ದರು.
ಇಂತಹ ಅಪರೂಪದ ಬರ್ತ್​ ಡೇ ಆಚರಣೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ. ತುಕ್ಕಾನಟ್ಟಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವಪ್ಪ ಯಲ್ಲಪ್ಪ ಮರ್ದಿ ಅವರು ನಾಯಿಮರಿ ಸಾಕಿದ್ದಾರೆ. ಅದಕ್ಕೆ ಕ್ರಿಶ್ ಎಂದು ಹೆಸರಿಟ್ಟಿದ್ದಾರೆ. ತನ್ನ ಪ್ರೀತಿಯ ಶ್ವಾನದ ಜನ್ಮದಿನದ ನೆಪದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಿ ರಾಜಕೀಯ ವಿರೋಧಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

ಶಿವಪ್ಪ ಯಲ್ಲಪ್ಪ ಮರ್ದಿ ಅವರು ತುಕ್ಕಾನಟ್ಟಿ ಗ್ರಾಮ ಪಂಚಾಯಿತಿಯಲ್ಲಿ 20 ವರ್ಷ ಸದಸ್ಯರಾಗಿದ್ದರು. ಆದರೆ, ಗ್ರಾಪಂ ಹಾಲಿ ಸದಸ್ಯರೊಬ್ಬರು ಇವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ನಾಯಿಗೆ ಹೋಲಿಕೆ ಮಾಡಿದ್ದರು. ಇದರಿಂದ ಕೆರಳಿದ ಮರ್ದಿ ಕುಟುಂಬವು ತಮ್ಮ ಮನೆಯ ನಾಯಿಯ ಹುಟ್ಟುಹಬ್ಬ ಆಚರಿಸಿ ತಿರುಗೇಟು ನೀಡಿದೆ. ಅದ್ಹೇನೆ ಇರಲಿ, ಶ್ವಾನದ ಬರ್ತ್​ಡೇ ಪಾರ್ಟಿಯಲ್ಲಿ ಹಲವರು ಕುಣಿದು ಕುಪ್ಪಳಿಸಿದ್ದಾರೆ. ನಾಯಿಮರಿಗೆ ಶುಭಕೋರಿದ್ದಾರೆ.
ಬೆಳಗಾವಿಯಲ್ಲಿ ತ್ರಿವಳಿ ಕೊಲೆ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ‌ಪ್ರವೀಣ್ ಭಟ್​ನನ್ನು ನಿರ್ದೋಷಿ ಎಂದ ಧಾರವಾಡ ಹೈಕೋರ್ಟ್

ಕೂಲಿ ಕೆಲಸಕ್ಕಾಗಿ ಆಂಧ್ರದಿಂದ ಚಿಕ್ಕಬಳ್ಳಾಪುರಕ್ಕೆ ಬಂದವ ಈಗ ಕೋಟ್ಯಧೀಶ! ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

ಸಹೋದ್ಯೋಗಿ ಪತ್ನಿಯ ಮೇಲೆ 8 ಕಾನ್​ಸ್ಟೇಬಲ್​ಗಳಿಂದ ನಿರಂತರ ಅತ್ಯಾಚಾರ: ಆರೋಪಿಗಳಿಗೆ ಹೈಕೋರ್ಟ್​ನಲ್ಲೂ ಹಿನ್ನಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + sixteen =
Remember me
