ಆನೇಕಲ್:ವ್ಯಕ್ತಿಯೊಬ್ಬ ಕಬ್ಬಿಣದ ರಾಡ್​​ನಿಂದ ಬೀದಿನಾಯಿಗೆ ಹೊಡೆದು ತಲೆಸೀಳಿ ಅಮಾನುಷವಾಗಿ ಕೊಂದ ಘಟನೆ ಹೆಬ್ಬಗೋಡಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಆನೇಕಲ್​ನ ಚಿಂತಲಮಡಿವಾಳ ನಿವಾಸಿ ಚಂದ್ರಪ್ಪ ಬೀದಿನಾಯಿಯನ್ನ ಕೊಂದವ. ಕುಡಿದ ಅಮಲಿನಲ್ಲಿ ನಾಯಿಯನ್ನು ಕೊಂದು ಹೆಬ್ಬಗೋಡಿ ಬಳಿಯ ಮಡಿವಾಳದ ಮುಖ್ಯರಸ್ತೆಯಲ್ಲಿ ಅದರ ಶವ ಎಳೆತಂದು ಬಿಸಾಡುತ್ತಿದ್ದದ್ದನ್ನು ವಿಡಿಯೋ ಮಾಡಿಕೊಂಡ ಪ್ರಯಾಣಿಕರೊಬ್ಬರು ಈ ಬಗ್ಗೆ ಪ್ರಶ್ನಿಸಿದ್ದಾರೆ. ಅವರಿಗೂ ಅವಾಜ್​ ಹಾಕಿದ ಚಂದ್ರಪ್ಪ, ನಾನು ಸಾಕಿದ್ದ ನಾಯಿಗೆ ಈ ಬೀದಿನಾಯಿ ಕಚ್ಚಿದೆ. ನನ್ನ ಮಗಳಿಗೂ ಕಚ್ಚಿದೆ. ಇಂತಹ ನಾಯಿಯನ್ನ ಬದುಕಲು ಹೇಗೆ ಬಿಡಲಿ? ಅದಕ್ಕೆ ಕೊಂದೆ ಎಂದು ಬಾಯಿಗೆ ಬಂದಂತೆ ಬೈದಿದ್ದಾನೆ.
ಚಂದ್ರಪ್ಪ ಕುಡಿದ ಅಮಲಿನಲ್ಲಿ ಸಾಕುನಾಯಿ ಜತೆ ಹೋಗುವಾಗ ಸಹಜವಾಗಿ ಬೀದಿನಾಯಿ ಬೊಗಳಿದೆ. ಈ ವೇಳೆ ಸಾಕುನಾಯಿಯನ್ನ ಹಿಂಬಾಲಿಸಿಕೊಂಡು ಮಾಲೀಕನ ಮನೆವರೆಗೂ ಬೀದಿನಾಯಿ ಬಂದಿದೆ. ಆಗ ಕಬ್ಬಿಣದ ರಾಡಿನಿಂದ ಬೀದಿನಾಯಿಯ ತಲೆಗೆ ಬೀಸಿ ಬಳಿಕ ರಸ್ತೆಗೆ ಎಳೆತಂದು ಕ್ರೂರವಾಗಿ ಕೊಂದಿದ್ದಾನೆ. ಪ್ರಾಣ ಬಿಟ್ಟ ಶ್ವಾನವನ್ನು ರಸ್ತೆಯಲ್ಲಿಯೇ ಬೀಸಾಡಿ ವಿಕೃತಿ ಮೆರೆದಿದ್ದಾನೆ. ಬೈಕ್​ನಲ್ಲಿ ಹೋಗ್ತಿದ್ದ ವ್ಯಕ್ತಿಯೊಬ್ಬರು ಇದನ್ನು ಪ್ರಶ್ನಿಸಿದ್ದು, ಅವರಿಗೂ ಚಂದ್ರಪ್ಪ ಅವಾಚ್ಯವಾಗಿ ನಿಂದಿಸಿದ್ದಾನೆ.
ಈ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಗೆ ಯಲಹಂಕ ಪ್ರಾಣಿ ದಯಾ ಸಂಘದ ಅನಿರುದ್ದ್ ದೂರು ಕೊಟ್ಟಿದ್ದು, ರಸ್ತೆಯಲ್ಲಿ ಬಿದ್ದಿದ್ದ ನಾಯಿಯ ಶವವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿದ್ದಾರೆ. ಆರೋಪಿ ಚಂದ್ರಪ್ಪನನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.
ಗಂಡನಿದ್ದರೂ ಪರಪುರುಷನ ಜತೆ ಮಹಿಳೆಯ ಕಾಮದಾಟ! ಬೇಡ ಬೇಡ ಎಂದವನ ಉಸಿರನ್ನೇ ನಿಲ್ಲಿಸಿದ್ಳು

https://www.vijayavani.net/a-illicit-relationship-poisoning-by-lovers/
ಮೂತ್ರ ವಿಸರ್ಜನೆ ಮಾಡುತ್ತಲೇ ಯುವಕರಿಬ್ಬರು ದುರಂತ ಸಾವು! ದೇವರೇ ಈ ಸಾವು ನ್ಯಾಯವೇ…

ಮಗು ಹುಟ್ಟಿದ ಮೂರೇ ದಿನಕ್ಕೆ ರೈಲಿಗೆ ತಲೆ ಕೊಟ್ಟ ಗಂಡ! ಪತ್ನಿಯ ಆ ನಿರ್ಧಾರವೇ ಇಷ್ಟಕ್ಕೆಲ್ಲ ಕಾರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − thirteen =
Remember me
