ಬೆಂಗಳೂರು:ನನ್ನನ್ನು‌ ಪವರ್ ಸೆಂಟರ್ ಎಂದು ಬಿಂಬಿಸಬೇಡಿ… ಪದೇಪದೆ ನನ್ನ‌ನ್ನು ಭೇಟಿ ಮಾಡಿ ಬಳಿಕ ಸಚಿವ ಸ್ಥಾನದ ಬಗ್ಗೆ ಹೊರಗೆ ಮಾತನಾಡಬೇಡಿ… ಎಂದು ಶಾಸಕರಿಗೆ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮ ಕೊಟ್ಟ ಬಿಎಸ್​ವೈ, ತನ್ನ ಶಿಷ್ಯ ಬಸವರಾಜ ಬೊಮ್ಮಾಯಿ ಅವರಿಗೆ ಪಟ್ಟಾಭಿಷೇಕ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇನ್ನು ಸಂಪುಟ ವಿಸ್ತರಣೆಯಲ್ಲೂ ಬಿಎಸ್​ವೈ ಪ್ರಭಾವ ಹೆಚ್ಚು ಬೀರಲಿದ್ದು, ಇದನ್ನು ಅರಿತ ಸಚಿವ ಸ್ಥಾನ ಆಕಾಂಕ್ಷಿತರು ಯಡಿಯೂರಪ್ಪ ಮನೆ ಬಳಿಯೇ ಗಿರಕಿ ಹೊಡೆಯುತ್ತಿದ್ದಾರೆ. ಈ ಕುರಿತು ಶಾಸಕರಿಗೆ ಇಂದು ಬುದ್ಧಿ ಮಾತು ಹೇಳಿದ ಯಡಿಯೂರಪ್ಪ, ಸಂಜೆ 6 ಗಂಟೆ ತನಕ ಯಾರೂ ನನ್ನನ್ನು ಭೇಟಿ ಮಾಡಬೇಡಿ ಎಂದು ಸೂಚನೆ ಕೊಟ್ಟಿದ್ದಾರೆ.
ಸಚಿವ ಸ್ಥಾನವನ್ನ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ನಿರ್ಧಾರ ಮಾಡ್ತಾರೆ. ನಾನು ಏನೋ ಒಂದಿಬ್ಬರಿಗೆ ಹೇಳಬಹುದು, ಆದ್ರೆ ನಾನು ಹಸ್ತಕ್ಷೇಪ ಮಾಡಲಾರೆ. ನನ್ನ ಹೆಸರನ್ನು ಸುಖಾಸುಮ್ಮನೆ ಎಳೆದು ತರಬೇಡಿ. ಸೌಹಾರ್ದಯುತವಾಗಿ ಮಾತನಾಡಿ ಹೋಗಿ, ನನ್ನ ಭೇಟಿ ಬಳಿಕ‌ ಮಾಧ್ಯಮಗಳ ಮುಂದೆ ಸಚಿವ ಸ್ಥಾನದ ಬಗ್ಗೆ ಹೇಳಿಕೆ ಕೊಡಬೇಡಿ ಆಪ್ತ ಶಾಸಕರಿಗೆ ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ.
ನಾವು ಸನ್ಯಾಸಿಗಳಲ್ಲ… ಬೊಮ್ಮಾಯಿ ಆಯ್ಕೆ ಶ್ರೀಕೃಷ್ಣನ ತಂತ್ರಗಾರಿಕೆ: ಈಶ್ವರಪ್ಪ

ನಾಚಿಕೆ ಆಗ್ತಿಲ್ವಾ? ಮತ್ತೆ ಬಾಲ ಬಿಚ್ಚಿದ್ರೆ ಶೂಟೌಟ್ ಮಾಡ್ತೀವಿ… ಕುಣಿಗಲ್ ಗಿರಿಗೆ ಖಡಕ್​ ವಾರ್ನಿಂಗ್​ ಕೊಟ್ಟ ಸಿಸಿಬಿ!

ಕಿಡ್ನ್ಯಾಪ್‌ ಆಗಿದ್ದ ಕೇರಳ ಯುವಕನನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು! ವಿಡಿಯೋ ವೈರಲ್​

ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × two =
Remember me
