ಮೈಸೂರು:ತಡರಾತ್ರಿ ಪತ್ನಿಗೆ ಬೆಂಕಿ ಹಚ್ಚಿ ಗಂಡ ಕೊಲೆ ಮಾಡಿದ್ದು, ಸಾವಿಗೂ ಮುನ್ನ ಆಕೆ ಬೆಂಕಿಯಿಂದ ಪಾರಾಗಲು ಬೆಂಕಿ ಹಚ್ಚಿದ ಗಂಡನನ್ನೇ ಅಪ್ಪಿಕೊಂಡಿದ್ದಾಳೆ. ಆದರೂ ಆಕೆ ಬದುಕಲಿಲ್ಲ. ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿರುವ ಗಂಡ, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಇಂತಹ ದುರ್ಘಟನೆ ಕೆ.ಆರ್‌.ನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಪತ್ನಿ ರಾಜೇಶ್ವರಿ(28) ಮೃತಪಟ್ಟಿದ್ದಾಳೆ. ಪತಿ ಹರೀಶ್‌ಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇತ್ತೀಚಿಗೆ ರಾಜೇಶ್ವರಿ ಮತ್ತು ಹರೀಶ್​ ನಡುವೆ ಗಲಾಟೆ ನಡೆಯುತ್ತಿತ್ತು. ಸೋಮವಾರ ರಾತ್ರಿಯೂ ಜಗಳ ನಡೆದಿದ್ದು, ಕುಪಿತಗೊಂಡ ಹರೀಶ್​, ಪತ್ನಿ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಚೀರಾಡಿಕೊಂಡೇ ಗಂಡನನ್ನು ಪತ್ನಿ ಕೂಡಲೇ ಬಿಗಿದಪ್ಪಿಕೊಂಡಿದ್ದಾಳೆ. ಪರಿಣಾಮ ಹರೀಶ್​ಗೂ ಬೆಂಕಿ ವ್ಯಾಪಿಸಿದೆ. ಇಬ್ಬರ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದು ಬೆಂಕಿ ನಂದಿಸಿದ್ದಾರೆ. ರಾಜೇಶ್ವರಿ ಮೃತಪಟ್ಟಿದ್ದು, ಹರೀಶ್​ ಸ್ಥಿತಿ ಗಂಭೀರವಾಗಿದೆ.
ವರದಕ್ಷಿಣೆಗಾಗಿ ಅಳಿಯ ಮತ್ತು ಆತನ ತಂದೆ- ತಾಯಿ ಸೇರಿಕೊಂಡು ಮಗಳು ರಾಜೇಶ್ವರಿಗೆ ಕಿರುಕುಳ ನೀಡುತ್ತಿದ್ದರು. ಈ ಹಿಂದೆ ಪೊಲೀಸ್ ಠಾಣೆಗೂ ದೂರು ನೀಡಲಾಗಿತ್ತು. ಹಲವು ಬಾರಿ ನ್ಯಾಯ ಪಂಚಾಯಿತಿ ಕೂಡ ಮಾಡಲಾಗಿತ್ತು ಎಂದು ರಾಜೇಶ್ವರಿ ತಂದೆ ಸೋಮಶೇಖರ್ ದೂರು ನೀಡಿದ್ದಾರೆ.(ದಿಗ್ವಿಜಯ ನ್ಯೂಸ್​)
ರೋಗಿಯ ಜೀವ ಉಳಿಸಲು ಬೆಂಗಳೂರಿನ ಟ್ರಾಫಿಕ್​ನಲ್ಲಿ 3 ಕಿ.ಮೀ. ಓಡಿದ ಡಾಕ್ಟರ್​! ವಿಡಿಯೋ ವೈರಲ್​, ಎಲ್ಲೆಡೆ ಮೆಚ್ಚುಗೆ

ಪುಸ್ತಕದೊಳಗೇ ಹಾವು! ಮನೆಯ ಟೇಬಲ್​ ಮೇಲಿದ್ದ ಪುಸ್ತಕದಲ್ಲಿ ಬೆಚ್ಚಗೆ ಮಲಗಿದ್ದ ಹಾವು…

ಬೆಂಗ್ಳೂರಲ್ಲಿ 14 ವರ್ಷದ ಬಾಲಕಿಯನ್ನ ಮದ್ವೆಯಾದ 45 ವರ್ಷದ ಅಂಕಲ್​! ಮದ್ವೆಯಾದ 3 ದಿನದಲ್ಲೇ ಆಯ್ತು ತಕ್ಕಶಾಸ್ತಿ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:14 + 18 =
Remember me
