ಮೈಸೂರು:ಗಂಡನ ಕಿರುಕುಳ ಸಹಿಸಲಾಗದೆ ತವರು ಮನೆ ಸೇರಿದ್ದ ಯುವತಿ ಇದೀಗ ದುರಂತ ಅಂತ್ಯ ಕಂಡಿದ್ದಾಳೆ.
ನಂಜನಗೂಡು ತಾಲೂಕಿನ ಬಿಳಿಗೆರೆಯ ಸೌಮ್ಯಾ(26) ಮೃತೆ. ಸೌಮ್ಯಾಗೆ ಮೂರು ವರ್ಷದ ಹಿಂದೆ ಮೈಸೂರಿನ ಆಲನಹಳ್ಳಿ ನಿವಾಸಿ ಗೌತಮ್ ಎಂಬಾತನ ಜತೆ ವಿವಾಹವಾಗಿತ್ತು. ಅಂದು ಸಾಲ ಮಾಡಿ ಅದ್ದೂರಿಯಾಗಿಯೇ ಮದುವೆ ಮಾಡಿಕೊಟ್ಟಿದ್ದರು. ಮಗಳಿಗೆ ಕೈಲಾದಷ್ಟು ಚಿನ್ನಾಭರಣವನ್ನೂ ಕೊಟ್ಟಿದ್ದರು. ಆದರೂ ಮದುವೆ ಆದಾಗಿನಿಂದ ವರದಕ್ಷಿಣೆ ತರುವಂತೆ ಸೌಮ್ಯಾಗೆ ಗಂಡ ಮತ್ತು ಆತನ ಮನೆಯವರು ಕಿರುಕುಳು ಕೊಡುತ್ತಿದ್ದಂತೆ. ಇದನ್ನು ಸಹಿಸಲಾಗದೆ ಸೌಮ್ಯಾ 6 ತಿಂಗಳ ಹಿಂದೆಯೇ ತವರು ಸೇರಿದ್ದಳು. ಇದೀಗ ತವರು ಮನೆಯಲ್ಲೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇಷ್ಟಕ್ಕೆ ಸುಮ್ಮನಾಗದ ಗಂಡ ಗೌತಮ್​, ಸೌಮ್ಯಾಳ ಮೊಬೈಲ್​ಗೆ ಕಾಲ್​ ಮಾಡಿ ನಿಂದಿಸುತ್ತಿದ್ದ. ಪದೇಪದೆ ಹಣಕ್ಕಾಗಿ ಪೀಡಿಸುತ್ತಿದ್ದ. ಸಾಲ ಮಾಡಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ವಿ. ಚಿನ್ನ, ಬೆಳ್ಳಿ ಕೊಟ್ಟಿದ್ವಿ. ನಂತರ ಮೂರು ಲಕ್ಷ ರೂ. ಕೊಟ್ಟಿದ್ದೇವೆ. ಇದೀಗ ಮತ್ತೆ ಒಂದು ಲಕ್ಷ ರೂ. ಕೊಡುವಂತೆ ಕೇಳುತ್ತಿದ್ದ. ಗಂಡ ಮತ್ತು ಅತ್ತೆ ಕಿರುಕುಳ ಸಹಿಸಲಾಗದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ಕೆಂಪಮ್ಮ ಆರೋಪಿಸಿದ್ದಾರೆ. ನಂಜನಗೂಡಿನ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯನ್ನ ನಗ್ನಗೊಳಿಸಿ ತೋಟದ ಮನೆಯಲ್ಲಿ ಕೂಡಿಹಾಕಿದ ಬಿಎಂಟಿಸಿ ಬಸ್​ ಚಾಲಕ! ಮುಂದಾಗಿದ್ದು ದುರಂತ

ಆಂಜನೇಯ ವಿಗ್ರಹದ ಮುಂದೆ ಗುಂಡಿ ತೋಡಿದ್ದರು, ದೇಗುಲದಲ್ಲೇ ಇತ್ತು ಮಹಿಳೆ ಶವ! ವಾಸನೆ ಜಾಡು ಹಿಡಿದು ಹೊರಟವರಿಗೆ ಶಾಕ್​

ಒಂದೇ ಕುಟುಂಬದ 9 ಮಂದಿ ಮನೆಗಳ್ಳತನ ಮಾಡ್ತಿದ್ರು… ಈ ಅಜ್ಜಿಯೇ ಖತರ್ನಾಕ್ ಗ್ಯಾಂಗ್​ನ ಲೀಡರ್​​!

ಹುಟ್ಟೂರಲ್ಲೇ 14 ವರ್ಷದ ಬಾಲಕಿ ಜತೆ ಪರಪುರುಷರ ಕಾಮದಾಟ​! ಹೆತ್ತವರ ಸಾಥ್​, ಮಧುಗಿರಿ ಗೌರಿಗಾಗಿ ಹುಡುಕಾಟ​​

ಅಮ್ಮ ಸತ್ತ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಅಪ್ಪ-ಮಕ್ಕಳು! ಸುಂದರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
