ಗಾಯನ ಕ್ಷೇತ್ರದ ದಿಗ್ಗಜ ಡಾ.ಎಸ್​.ಪಿ.ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನೆಲ್ಲ ಅಗಲಿ ಸೆ.25ಕ್ಕೆ 2 ವರ್ಷ. ದೈಹಿಕವಾಗಿ ನಮ್ಮೊಂದಿಗೆ ಅವರಿಲ್ಲವಾದರೂ ಗಾಯನ ಮೂಲಕ ಎಸ್​ಪಿಬಿ ಜೀವಂತ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ತುಳು ಸೇರಿ 16ಕ್ಕೂ ಅಧಿಕ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ ಹೆಗ್ಗಳಿಕೆ ಈ ಮಹಾನ್​ ಗಾಯಕರದ್ದು. 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಾಸ್ತ್ರೀಯ ಸಂಗೀತದ ಹಿನ್ನೆಲೆ ಇಲ್ಲದೆಯೇ ಹಿನ್ನೆಲೆ ಗಾಯನದಲ್ಲಿ ಎಸ್ಪಿಬಿ ಮಾಡಿದ ಸಾಧನೆ ಭಾರತೀಯ ಚಿತ್ರರಂಗದ ಚರಿತ್ರೆಯಲ್ಲಿ ಅಜರಾಮರ.
ಎಸ್ಪಿಬಿ ಅಂದಾಕ್ಷಣ ಮಧುರ ಹಾಡುಗಳು ನೆನಪಾಗುತ್ತವೆ. ಕನ್ನಡದಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಭಕ್ತಿ, ಪ್ರೇಮ, ಪ್ರಣಯ, ವಿಷಾದ, ಶೃಂಗಾರ… ಹೀಗೆ ಎಲ್ಲ ಪ್ರಕಾರಗಳಲ್ಲೂ ಹಾಡಿದ್ದಾರೆ. ಈ ಪೈಕಿ ಯಾವುದು ಅದ್ಭುತ? ಎಂದು ವಿಂಗಡಿಸುವುದು ಕಷ್ಟ. ಆದರೂ ಅವರು ಹಾಡಿರುವ ಅಷ್ಟೊಂದು ಹಾಡುಗಳ ಪೈಕಿ ಕೆಲ ಆಯ್ದ ವಿಶೇಷವಾದ ಮತ್ತು ಜನ ಮೆಚ್ಚಿದ ಹಾಡುಗಳನ್ನು ಇಲ್ಲಿ ನೀಡಲಾಗಿದೆ.ಹಾವಿನ ದ್ವೇಷ ಹನ್ನೆರೆಡು ವರುಷ… (ಸಿನಿಮಾ-ನಾಗರಹಾವು)ಮಾಮರವೆಲ್ಲೋ ಕೋಗಿಲೆಯಲ್ಲೋ… (ದೇವರ ಗುಡಿ)ಎಲ್ಲಿರುವೆ ಮನವ ಕಾಡುವ ರೂಪಸಿಯೇ… (ಬಯಲು ದಾರಿ)ಸ್ನೇಹದ ಕಡಲಲ್ಲಿ… ನೆನೆಪಿನ ದೋಣಿಯಲ್ಲಿ… (ಶುಭ ಮಂಗಳ)ಯಾವ ಹೂವು ಯಾರ ಮುಡಿಗೋ… (ಬೆಸುಗೆ)ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು… (ಹೊಂಬಿಸಿಲು)ಕುಂಕುಮವಿರುವುದೇ ಹಣೆಗಾಗಿ… (ನಾನಿರುವುದೇ ನಿನಗಾಗಿ)ನಗುವ ನಯನ… ಮಧುರ ಪ್ರೇಮ… (ಪಲ್ಲವಿ ಅನುಪಲ್ಲವಿ)ನೋಟದಾಗೆ ನಗೆಯ ಮೀಟಿ ಮೋಜಿನಾಗೆ… (ಪರಸಂಗದ ಗೆಂಡೆತಿಮ್ಮ)ಜೊತೆಯಲಿ ಜೊತೆಜೊತೆಯಲಿ ಇರುವೆನು ಹೀಗೆ ಎಂದು… (ಗೀತಾ)ಕೇಳದೆ ನಿಮಗೀಗ ದೂರದಲ್ಲಿ ಯಾರೂ… (ಗೀತಾ)ನಲಿವ ಗುಲಾಬಿ ಹೂವೇ… (ಆಟೋ ರಾಜ)ಆಕಾಶದಿಂದ ಧರೆಗಿಳಿದ ರಂಭೆ… (ಚಂದನದ ಗೊಂಬೆ)ನೆರಳನು ಕಾಣದ ಲತೆಯಂತೆ… ಬಿಸಿಲಿಗೆ ಬಾಡಿದ ಹೂವಂತೆ.. (ಅವಳ ಹೆಜ್ಜೆ)ಪ್ರೇಮದ ಕಾದಂಬರಿ ಬರೆದೆನು ಕಣ್ಣೀರಲಿ… (ಬಂಧನ)ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ.. (ಆನಂದ್​)ಗೀತಾಂಜಲಿ.. ಪುಷ್ಪಾಂಜಲಿ.. (ಸಿಬಿಐ ಶಂಕರ್​)ನೀನು ನೀನೇ ಇಲ್ಲಿ ನಾನು ನಾನೇ… (ಗಡಿಬಿಡಿ ಗಂಡ)ಉಮಂಡು ಘಮಂಡು… (ಗಾನಯೋಗಿ ಪಂಚಾಕ್ಷರಿ ಗವಾಯಿ)ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ… (ಮಹಾಕ್ಷತ್ರಿಯ)ಕೈತುತ್ತು ಕೊಟ್ಟೋಳೆ ಐ ಲವ್​ ಯೂ ಮೈ ಮದರ್​ ಇಂಡಿಯಾ… (ಕಲಿಯುಗ ಭೀಮ)ಈ ಕನ್ನಡ ಮಣ್ಣನು ಮರಿಬೇಡ ಅಭಿಮಾನಿ.. (ಸೋಲಿಲ್ಲದ ಸರದಾರ)ಕುಚ್ಚಿಕು ಕುಚ್ಚಿಕು ನಾವ್​ ಚಡ್ಡಿ ದೋಸ್ತಿ ಕಣೋ ಕುಚ್ಚಿಕು… (ದಿಗ್ಗಜರು)ಭಲೆಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು.. (ಅಮೃತವರ್ಷಿಣಿ)ನೆನಪುಗಳ ಮಾತು ಮಾಧುರ.. (ಚಂದ್ರಮುಖಿ ಪ್ರಾಣಸುಖಿ)ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ.. (ಸಿಂಹಾದ್ರಿಯ ಸಿಂಹ)
ನಾನು ಆಕಸ್ಮಿಕ ಗಾಯಕ… ಎಂದು ಹೇಳಿಕೊಳ್ಳುತ್ತಿದ್ದ ಎಸ್​ಪಿಬಿ! ಸುಗಮವಾಗಿರಲಿಲ್ಲ ಗಾನ ಗಾರುಡಿಗನ ಗಾಯನದ ಹಾದಿ…

ಬಡತನ ಮೆಟ್ಟಿ ನಿಲ್ಲಬೇಕು ಅನ್ನುವಷ್ಟರಲ್ಲಿ ಆಟವಾಡಿದ ವಿಧಿ… ಸಾವಲ್ಲೂ ಸಾರ್ಥಕತೆ ಮೆರದ ಪಿಯು ವಿದ್ಯಾರ್ಥಿನಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − thirteen =
Remember me
