ಬೆಂಗಳೂರು:ಇದು ಸಾಹಸ ಸಿಂಹ ಡಾ. ವಿಷ್ಣುವರ್ಧನ್​ ಮತ್ತು ಭಾರತಿ ದಂಪತಿಯ ಕಣ್ಣೀರ ಕಥೆ. ಸ್ಟಾರ್ ಆಗಿದ್ದ ಕಾಲದಲ್ಲೇ ತುತ್ತು ಅನ್ನಕ್ಕಾಗಿ ಪರದಾಡಿದ್ದರು ಈ ಸ್ಟಾರ್​ ಜೋಡಿ. ಕೈಯಲ್ಲಿ ಕೆಲಸ ಇಲ್ಲದೆ, ಬಿಡಿಗಾಸೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಈ ದಂಪತಿ 6 ತಿಂಗಳ ಕಾಲ ಗಂಜಿ ಕುಡಿದುಕೊಂಡೇ ಜೀವನ ಸಾಗಿಸಿದ್ದರು! ಹಸಿವು ನೀಗಿಸಿಕೊಳ್ಳಲು, ಬದುಕಿನ ಬಂಡಿ ಸಾಗಿಸಲು ವಿಷ್ಣು ದಾದಾ ಅವರು ಬೆಂಜ್​ ಕಾರಿನ ಚಾಲಕರಾಗಿ ಕೆಲಸ ಮಾಡಲೂ ಯೋಚನೆ ಮಾಡಿದ್ದರು…
ಹೌದು, ಇದು ತೆರೆ ಮೇಲಿನ ಕಥೆಯಲ್ಲ. ನಿಜ ಜೀವನದಲ್ಲಿ ವಿಷ್ಣುವರ್ಧನ್‌- ಭಾರತಿ ಅವರು ಅನುಭವಿಸಿದ ಕಷ್ಟದ ದಿನಗಳು. ಈ ಬಗ್ಗೆ ‘ಬಾಳೆ ಬಂಗಾರ’ ಎಂಬ ಸಾಕ್ಷ್ಯ ಚಿತ್ರದಲ್ಲಿ ಸ್ವತಃ ಭಾರತಿ ಅವರೇ ಅಂದು ತಾವು ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ.
ಚಂದನವನದಲ್ಲಿ ವಿಷ್ಣುದಾದಾಗೆ, ಅವರದ್ದೇ ಆದ ಒಂದು ಇಮೇಜ್ ಇದೆ. ಕೋಟ್ಯಂತರ ಅಭಿಮಾನಿಗಳನ್ನ ಸಂಪಾದಿಸಿ, ಕೋಟಿಗೊಬ್ಬ ಅನಿಸಿಕೊಂಡಿದ್ದಾರೆ ಈ ವಿಷ್ಣುದಾದಾ. ಸಾಕಷ್ಟು ಯಶಸ್ಸು, ಕೀರ್ತಿ ಎಲ್ಲವನ್ನೂ ಗಳಿಸಿದ್ದ ವಿಷ್ಣು, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಸಿಂಹಾದ್ರಿಯ ಸಿಂಹನಾಗಿ ರಾರಾಜಿಸ್ತಿದ್ದಾರೆ.. ಆದ್ರೆ ಇದೇ ವಿಷ್ಣುವರ್ಧನ್ ಸಿನಿಮಾಗಳಲ್ಲಿ ಅವಕಾಶವಿಲ್ಲದೆ 6 ತಿಂಗಳು ಗಂಜಿ ಕುಡಿದಿದ್ದರು ಎಂಬ ಸತ್ಯ ‘ಬಾಳೆ ಬಂಗಾರ’ ಎಂಬ ಸಾಕ್ಷ್ಯ ಚಿತ್ರದಲ್ಲಿ ಬೆಳಕಿಗೆ ಬಂದಿದೆ.
ವಿಷ್ಣುವರ್ಧನ್ ಪತ್ನಿ ಹಾಗೂ ಹಿರಿಯ ನಟಿ ಭಾರತಿ, ತಮ್ಮ ಬದುಕಿನ ರೋಚಕ ಕಥೆಯನ್ನ ಸಾಕ್ಷ್ಯ ಚಿತ್ರದಲ್ಲಿ ತೆರೆದಿಟ್ಟಿದ್ದಾರೆ. ಕರುನಾಡ ಕೋಟಿಗೊಬ್ಬನ ಕಣ್ಣೀರ ಕಥೆಯನ್ನ ಹೇಳಿಕೊಂಡಿದ್ದಾರೆ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಅವರು ಭಾರತಿ ಕುರಿತ ಸಾಕ್ಷ್ಯಚಿತ್ರ ನಿರ್ದೇಶನ ಮಾಡಿದ್ದಾರೆ. ಇಲ್ಲಿ ವಿಷ್ಣು ಮತ್ತು ಭಾರತಿ ಅವರ ಬದುಕಿನ ಅನೇಕ ಸತ್ಯ ಸಂಗತಿಗಳನ್ನ ಅನಾವರಣಗೊಳಿಸಿದ್ದಾರೆ.
ಬಾಳೆ ಬಂಗಾರ ಟೈಟಲ್​ನಲ್ಲಿ ಈ ಸಾಕ್ಷ್ಯಚಿತ್ರ ಮೂಡಿ ಬಂದಿದ್ದು, ಅದರ ಟ್ರೇಲರ್ ಮಾತ್ರ ಸದ್ಯ ಬಿಡುಗಡೆ ಆಗಿದೆ. ಇದರ ಹೈಲೈಟ್​ನಲ್ಲೇ ಹಲವು ರೋಚಕ ಸಂಗತಿಗಳು, ಕಣ್ಣೀರ ಕಥೆಗಳು ಬಯಲಾಗಿವೆ. ಒಂದು ಕಾಲಕ್ಕೆ ಯಶಸ್ಸಿನ ಉತ್ತುಂಗದಲ್ಲಿದ್ದ ವಿಷ್ಣುದಾದಾ, ಅದೊಮ್ಮೆ ಅವಕಾಶವಿಲ್ಲದೆ ಖಾಲಿ ಕುಳಿತುಕೊಳ್ಳಬೇಕಾದ ಪತಿಸ್ಥಿತಿ ಬಂದಿದ್ದಂತೆ. ಅದು ಎಂತಹ ಸಂಕಷ್ಟದ ಸಮಯ ಅಂದ್ರೆ, ‘ತುತ್ತು ಅನ್ನ ತಿನ್ನೋಕೆ…’ ಅಂತ ಸಿನಿಮಾದಲ್ಲಿ ಹಾಡಿದ್ದ ವಿಷ್ಣುದಾದಾ ಭರ್ತಿ 6 ತಿಂಗಳು ಕಾಲ ಗಂಜಿ ಕುಡಿದಿದ್ರಂತೆ!
ವಿಷ್ಣು ಮತ್ತು ಭಾರತಿ ದಂಪತಿ 6 ತಿಂಗಳು ಗಂಜಿ ಕುಡಿದಿದ್ರು ಅನ್ನೋದೆ ಒಂದು ಅಚ್ಚರಿಯ ಸಂಗತಿ. ಯಾರೊಬ್ಬರಿಗೂ ಗೊತ್ತಿಲ್ಲದ ಈ ಕಹಿ ಸತ್ಯವನ್ನ ಭಾರತಿ ವಿಷ್ಣುವರ್ಧನ್ ಅವರು ಸಾಕ್ಷ್ಯಚಿತ್ರದಲ್ಲಿ ರಿವೀಲ್ ಮಾಡಿದ್ದಾರೆ. ಈ ರೋಚಕ ಸಂಗತಿಯನ್ನ, ನಟ ಅನಿರುದ್ಧ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಅದು 70ರ ದಶಕ.. ಪಂಚಭಾಷಾ ತಾರೆ ಭಾರತಿ ಅವರು ಮದ್ವೆಯಾದ ನಂತರ ಸಿನಿಮಾಗಳಲ್ಲಿ ನಟಿಸೋದನ್ನ ಕಮ್ಮಿ ಮಾಡಿದ್ದರು. ಅತ್ತ ಸಾಲು ಸಾಲು ಚಿತ್ರಗಳಲ್ಲಿ ವಿಷ್ಣುವರ್ಧನ್ ನಟಿಸುತ್ತಿದ್ದರು. ಆದ್ರೆ ಅದೇನಾಯ್ತೋ ಏನೋ, ದಿಢೀರ್ ಸಿನಿಮಾಗಳಲ್ಲಿ ಅವಕಾಶಗಳು ಕಮ್ಮಿಯಾಗ್ತಾ ಹೋಯ್ತು. ಅಕ್ಷರಶಃ ನಿರುದ್ಯೋಗಿಯಾಗಿದ್ದ ನಟ ವಿಷ್ಣುವರ್ಧನ್, ತಮ್ಮ ಬೆನ್ಜ್ ಕಾರನ್ನೇ ಟ್ರಾವೆಲ್ಸ್​ಗೆ ಬಿಟ್ಟು ಡ್ರೈವರ್​ ಆಗಿ ಕೆಲಸ ಮಾಡಲು ನಿರ್ಧರಿಸಿದ್ದರಂತೆ! ಹಣಕಾಸಿನ ಮುಗ್ಗಟ್ಟು ಎದುರಾದಾಗ ಏನು ಮಾಡಬೇಕೆಂದು ತೋಚದೆ ಪತಿಯ ಮಾತಿಗೆ ಸರಿ ಅಂತ ತಲೆಯಾಡಿಸಿದ್ದರಂತೆ ಭಾರತಿ ವಿಷ್ಣುವರ್ಧನ್.
ಒಂದು ಹಂತದಲ್ಲಿ ಅವರಿಗೆ ಕೆಲಸ ಇರಲಿಲ್ಲ. ನಮ್ಮ ಬಳಿ ಇದ್ದ ಬೆನ್ಜ್ ಕಾರನ್ನ ಟ್ರಾವೆಲ್ಸ್​ಗೆ ಜೋಡಿಸಿ ಡ್ರೈವಿಂಗ್ ಮಾಡಲು ವಿಷ್ಣು ನಿರ್ಧರಿಸಿದ್ರು. ನಾನೂ ಏನೂ ತೋಚದೆ ಸರಿ ಎಂದು ತಲೆಯಾಡಿಸಿದ್ದೆ. ಆ ದೇವರ ದಯೆ, ಮರುದಿನವೇ ಅವರಿಗೆ ಹೊಂಬಿಸಿಲು ಚಿತ್ರದಲ್ಲಿ ನಟಿಸುವ ಅವಕಾಶ ಬಂತು. ನಿರ್ಮಾಪಕರು ಈ ಸಿನಿಮಾ ನೀವೇ ಮಾಡಬೇಕು ಅಂತೇಳಿ ಅಡ್ವಾನ್ಸ್ ಕೊಟ್ಟು ಹೋದರು ಎಂದು ಭಾರತಿ ವಿಷ್ಣುವರ್ಧನ್ ಹೇಳಿಕೊಂಡಿದ್ದಾರೆ.
ಇದೇ ವೇಳೆ ಮದುವೆಗೂ ಮೊದಲಿನ ಹಲವು ವಿಷಯಗಳನ್ನು ಭಾರತಿ ವಿಷ್ಣುವರ್ಧನ್ ಶೇರ್ ಮಾಡ್ಕೊಂಡಿದ್ದಾರೆ. ವಿಷ್ಣುವರ್ಧನ್ ನಾಗರಹಾವು ಚಿತ್ರದಲ್ಲಿ ನಟಿಸುವ ಹೊತ್ತಿಗಾಗಲೇ ಭಾರತಿ ಅವರು 100 ಚಿತ್ರಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿ ಬೆಳೆದಿದ್ದರು. ಇದೇ ವೇಳೆ ಭಾರತಿ ಅವರನ್ನ ಭೇಟಿ ಮಾಡಲು ಹೋಗಿದ್ದರಂತೆ ವಿಷ್ಣು. ಅದಾದ ಬಳಿಕ ನಾಗರಹಾವು ಸಿನಿಮಾದ ಕಾರ್ಯಕ್ರಮಕ್ಕೆ ನನ್ನನ್ನ ಆಹ್ವಾನಿಸಿದ್ರು ಅಂತ ಭಾರತಿ ವಿಷ್ಣುವರ್ಧನ್ ಹೇಳಿಕೊಂಡಿದ್ದಾರೆ.

ನಟಿ ಭಾರತಿ ಬದುಕಿನ ಅನ್ಟೋಲ್ಡ್ ಸ್ಟೋರಿಯನ್ನ ವಿಷ್ಣು ಅಳಿಯ ಅನಿರುದ್ಧ್ ಜನರಿಗೆ ತಿಳಿಸುವ ಕೆಲಸ ಮಾಡ್ತಿದ್ದಾರೆ. ಅವರ ಈ ಅದ್ಭುತ ಕೆಲಸಕ್ಕೆ ಪತ್ನಿ ಕೀರ್ತಿ ಸಾಥ್ ಕೊಟ್ಟಿದ್ದು, ಈ ಸಾಕ್ಷ್ಯಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಈ ಒಂದು ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಸುಧಾರಾಣಿ, ಶ್ರುತಿ, ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ತಾರೆಯರು ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ.
ಇದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಸಿನಿಬದುಕು ಮತ್ತು ವೈಯಕ್ತಿಕ ಬದುಕಿನ ರೋಚಕ ಸತ್ಯ ಕಥೆ. ವಿಷ್ಣುದಾದಾ ಅವರ ಬಗ್ಗೆ ಗೊತ್ತಿಲ್ಲದ ಅದೆಷ್ಟೋ ಸಂಗತಿಗಳೂ ಈ ಸಾಕ್ಷ್ಯಚಿತ್ರದಲ್ಲಿ ದಾಖಲಾಗಿವೆ. ಸದ್ಯ ಟ್ರೇಲರ್ ಮಾತ್ರ ರಿಲೀಸ್ ಆಗಿದ್ದು, ಕೆಲವೇ ದಿನಗಳಲ್ಲಿ ಓಟಿಟಿಯಲ್ಲಿ ಈ ಸಾಕ್ಷ್ಯಚಿತ್ರ ಪ್ರೀಮಿಯರ್ ಆಗಲಿದೆ.(ಫಿಲ್ಮ್ ಬ್ಯೂರೋ, ದಿಗ್ವಿಜಯ ನ್ಯೂಸ್)
ಮೈಸೂರಲ್ಲಿ ಗ್ಯಾಂಗ್​ ರೇಪ್​: ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಕಾಮುಕರು, ರಾತ್ರಿವರೆಗೂ ಕಾದು ಅಟ್ಟಹಾಸ ಮೆರೆದ್ರು…

ಸಚಿವ ಉಮೇಶ್​ ಕತ್ತಿಯನ್ನು ನೋಡುತ್ತಿದ್ದಂತೆ ಓಡಿಹೋದ ಕಾಡುಜನ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × four =
Remember me
