ಬೆಂಗಳೂರು:ನಗರದಲ್ಲಿ ಐಷಾರಾಮಿ ಕಾರಿಗೆ ಮತ್ತೊಂದು ಶ್ವಾನ ಬಲಿಯಾಗಿದೆ. ಮಂಗಳವಾರ ಸಂಜೆ 6 ಗಂಟೆ ಸುಮಾರಿನಲ್ಲಿ ಇಂದಿರಾನಗರದಲ್ಲಿ ಬೀದಿನಾಯಿ ಮೇಲೆ ಕಾರು ಹತ್ತಿಸಿದ್ದು, ಸ್ಥಳದಲ್ಲೇ ನಾಯಿ ಮೃತಪಟ್ಟಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಾಯಿಯನ್ನು ಸಾಕಿದ್ದ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ಕಾರು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇಂದಿರಾನಗರದ ನಿವಾಸಿ ಸ್ನೇಹ ಎಂಬುವವರು ಬೀದಿನಾಯಿಗೆ ಬ್ರೋನಿ ಎಂಬ ಹೆಸರಿಟ್ಟು ಸಾಕಿದ್ದರು. ಇದೀಗ ಈ ಬ್ರೋನಿ ಮೇಲೆ ಐಷಾರಾಮಿ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಕಾರು ಹತ್ತಿಸಿ ದರ್ಪಮೆರೆದು ಹೋಗಿದ್ದಾರೆ. ಗಂಭೀರ ಗಾಯಗೊಂಡ ಬ್ರೋನಿ ಮೃತಪಟ್ಟಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿ ಸಹಿತKA 01, MS​ 8525ನಂಬರಿನ ಕಾರಿನ ಮೇಲೆ ಇಂದಿರಾನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.
ಶ್ವಾನ ಲಾರಾ ಸಾವು ಸಾಕಷ್ಟು ಸುದ್ದಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಶ್ವಾನ ಬಲಿಯಾಗಿದೆ. ಕಳೆದ ಜನವರಿ 26ರಂದು ಜಯನಗರ 1ನೇ ಬ್ಲಾಕ್​ನಲ್ಲಿ ರಸ್ತೆಬದಿ ಮಲಗಿದ್ದ ಬೀದಿನಾಯಿ ಮೇಲೆ ಆದಿಕೇಶವನಾಯ್ಡು ಎಂಬಾತ ಐಷಾರಾಮಿ ಆಡಿ ಕಾರನ್ನು ಹತ್ತಿಸಿಕೊಂಡು ಹೋಗಿ ಶ್ರೀಮಂತಿಕೆಯ ದರ್ಪ ಮೆರೆದಿದ್ದ. ಈ ಪ್ರಕರಣ ಕೂಡ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು.ಮೂಕ ಪ್ರಾಣಿಗಳ ಮೇಲೆ ಕ್ರೌರ್ಯ ಸಲ್ಲ ಎಂಬ ಕೂಗು ದಟ್ಟವಾಗಿ ಕೇಳಿಬರುತ್ತಲೇ ಇದೆ. ಪ್ರಾಣಿಗಳ ಮೇಲೆ ದರ್ಪ ತೋರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹ ಹೆಚ್ಚಾಗಿದೆ.
ಬೀದಿನಾಯಿ ಮೇಲೆ ಶ್ರೀಮಂತಿಕೆಯ ದರ್ಪ?: ಮಲಗಿದ್ದ ನಾಯಿ ಮೇಲೆ ಆಡಿ ಕಾರು ಹತ್ತಿಸಿಕೊಂಡು ಹೋದ ಭೂಪ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 + twelve =
Remember me
